ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ಎಲಿಮಲೆ ಹಾಗೂ ಗುತ್ತಿಗಾರು ಶಾಖೆಗಳ ಜಂಟಿ ಆಶ್ರಯದಲ್ಲಿ ಇರ್ಶಾದಿಯ್ಯ ಇಲ್ಫಾ ಕ್ಯಾಂಪ್ ಹಾಗೂ ಆದೂರು ಆಟ್ಟು ತಂಙಳ್ ಅನುಸ್ಮರಣೆಯು ದೊಡ್ಡಂಗಡಿ ಹೌಸಿನಲ್ಲಿ ಎಲಿಮಲೆ ಶಾಖಾಧ್ಯಕ್ಷರಾದ ಝಕರಿಯ್ಯ ಸಅದಿಯವರ ಅಧ್ಯಕ್ಷತೆಯಲ್ಲಿ ಜರುಗಿತು.

ಕೆ.ಸಿ.ಎಫ್ ನಾಯಕರಾದ ಸಿದ್ದೀಖ್ ಅಂಜದಿ ಮೆತ್ತಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಯುವ ವಾಗ್ಮಿ ಹಾರಿಸ್ ಮಿಸ್ಬಾಹಿ ಪೈಂಬಚ್ಚಾಲ್ ರವರು ಸಂಘಟನಾ ತರಗತಿ ನಡೆಸಿದರು. ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಪ್ರಧಾನ ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ, ಎಸ್.ಎಸ್.ಎಫ್ ಸುಳ್ಯ ಸೆಕ್ಟರ್ ನಾಯಕರಾದ ಸ್ವಬಾಹುದ್ದೀನ್ ಹಿಮಮಿ ಸಖಾಫಿ ಬೀಜಕೊಚ್ಚಿ ಶುಭ ಹಾರೈಸಿದರು. ಕೊನೆಯಲ್ಲಿ ಆಟು ತಂಙಳ್ ರವರ ಹೆಸರಿನಲ್ಲಿ ತಹ್ಲೀಲ್ ಹಾಗೂ ಪ್ರಾರ್ಥನಾ ಮಜ್ಲಿಸ್ ಸಂಘಟಿಸಿ ತಬರ್ರುಕ್ ವಿತರಿಸಲಾಯಿತು.

ಖಾಲಿದ್ ಮಿಸ್ಬಾಹಿ ಗುತ್ತಿಗಾರು, ಇಬ್ರಾಹಿಂ ಮುಸ್ಲಿಯಾರ್ ಪೈಂಬಚ್ಚಾಲ್, ಎಸ್.ವೈ.ಎಸ್ ನಾಯಕ ಸಿದ್ದೀಖ್ ಕಟ್ಟೆಕ್ಕಾರ್, ಡಿವಿಷನ್ ಕಾರ್ಯದರ್ಶಿ ನೌಶಾದ್ ಕೆರೆಮೂಲೆ, ಯುನಿಟ್ ಉಸ್ತುವಾರಿ ಅಬ್ದುರ್ರಹೀಂ ಪೈಂಬಚ್ಚಾಲ್, ಹಸೈನಾರ್ ವಳಲಂಬೆ, ಗುತ್ತಿಗಾರು ಯುನಿಟ್ ಅಧ್ಯಕ್ಷರಾದ ಅಬೂಸ್ವಾಲಿಹ್ ವಳಲಂಬೆ ಮುಂತಾದವರು ಮುಖ್ಯಾತಿಥಿಗಳಾಗಿದ್ದರು.
ಪ್ರ.ಕಾರ್ಯದರ್ಶಿ ನಾಸಿರ್ ವೈ.ಎಚ್ ಸ್ವಾಗತಿಸಿ, ಸಾಬಿತ್ ಪಾಣಾಜೆ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ