ಮಂಗಳೂರು, ಏ.7- ಲಾಭದಲ್ಲಿದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಲಾಣವನ್ನು ಖಾಸಗಿಯವರಿಗೆ ವಹಿಸಿರುವುದು, ವಿಜಯಾ ಬ್ಯಾಂಕನ್ನು ಗುಜರಾತ್‌ನ ಬ್ಯಾಂಕ್ ಆಫ್ ಬರೋಡಕ್ಕೆ ವಿಲೀನಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ? ಮಂಗಳೂರಿನ ಅಭಿವೃದ್ಧಿಗಾಗಿ ಅನುಧಾನ ನೀಡಿಲ್ಲ . ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಸಂಸ್ಥೆಗಳನ್ನು ಒಂದೊಂದಾಗಿ ಮುಚ್ಚಿಕೊಂಡು ಬಂದಿದ್ದಾರೆ. ಇಂತವರಿಗೆ ಮತ ಹಾಕಬೇಕೇ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಲೋಕಸಭ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರವಾಗಿ ಪ್ರಚಾರ ನಡೆಸಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ನಳಿನ್ ಕುಮಾರ್ ಕಟೀಲು ಮುಖ ನೋಡಿ ಮತ ಹಾಕಬೇಡಿ ಮೋದಿ ಮುಖ ನೋಡಿ ಮತ ಹಾಕಿ ಎಂದು ಬಿಜೆಪಿ ಯವರು ಹೇಳುತ್ತಿದ್ದಾರೆ. ಮೋದಿ ಏನು ಸಾಧನೆ ಮಾಡಿದ್ದಾರೆ ಎಂದು ಮತ ಹಾಕಬೇಕಾ ಇದು ಮಂಗಳೂರಿನ ಜನರ ಸ್ವಾಭಿಮಾನದ ಪ್ರಶ್ನೆ ಎಂದರು.
ಇಲ್ಲಿನ ವಿಮಾನ ನಿಲ್ದಾಣ, ವಿಜಯಾ ಬ್ಯಾಂಕ್ ಇವೆರಡೂ ನಷ್ಟದಲ್ಲಿ ಇಲ್ಲದಿದ್ದರೂ ಮೋದಿಯವರು ಮಂಗಳೂರಿನ ಜನರ ಸ್ವಾಭಿಮಾನಕ್ಕೆ ದಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 13 ರಂದು ರಾಹುಲ್ ಗಾಂಧಿ ಕಾರ್ಯಕ್ರಮವಿದೆ. ಅದೇ ದಿನ ನರೇಂದ್ರ ಮೋದಿಯವರು ಈ ಜಿಲ್ಲೆಗೆ ಬರುವ ಉದ್ದೇಶವಾದರೂ ಏನು ? ಯಾವ ಮುಖ ಹೊತ್ತು ಬರುತ್ತಾರೆ ಎಂದು ಆರೋಪಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್