ಮಂಗಳೂರು: ಶಾರ್ಟ್ ಸರ್ಕ್ಯೂಟ್ನಿಂದ ಮಂಗಳೂರಿನ ಪ್ರಸಿದ್ಧ ಸಿಟಿ ಸೆಂಟರ್ ಮಾಲ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ಉಸಿರು ಗಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತು.

ಕೆ.ಎಸ್ ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್ನ ಮಾಲ್ನ ನಾಲ್ಕನೇ ಮಹಡಿಯಲ್ಲಿವ ಫುಡ್ ಕೋರ್ಟಿನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಈ ಅಗ್ನಿ ಅನಾಹುತವಾಗಿದ್ದು, ಮಾಲ್ ತುಂಬೆಲ್ಲ ಹೊಗೆ ಆವರಿಸಿಕೊಂಡ ಪರಿಣಾಮ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು.

ಅಗ್ನಿ ಅವಘಡ ಸಂಭವಿಸಿದ ಕೂಡಲೇ ಮಾಲ್ನಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ಸಾವಿರಾರು ಸಿಬ್ಬಂದಿಯನ್ನು ಹಾಗೂ ಜನರನ್ನು ಪೊಲೀಸರು ಹೊರಕ್ಕೆ ಕಳುಹಿಸಿದರು. ಸ್ಥಳಕ್ಕೆ 3 ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸಿವೆ.

ಸಿಟಿ ಸೆಂಟರ್ ಮಾಲ್ ಆರಂಭಗೊಂಡು ಏಳೆಂಟು ವರ್ಷಗಳೇ ಕಳೆದರೂ ಇಂದಿನವರೆಗೂ ಈ ಮಳಿಗೆಗೆ ಫೈರ್ ಸೇಫ್ಟಿ ಕ್ಲಿಯರೆನ್ಸ್ ಅನ್ನು ಅಗ್ನಿಶಾಮಕ ಇಲಾಖೆ ನೀಡಿಲ್ಲ.
ಅಧಿಕಾರಿಗಳ, ಜನಪ್ರತಿನಿಧಿಗಳ ಶಿಫಾರಸ್ಸಿನ ಮೇಲೆ ಇಂದಿನವರೆಗೂ ನಡೆದುಕೊಂಡು ಬಂದಿರುವ ಈ ಮಳಿಗೆಯಲ್ಲಿ ಇದೀಗ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಸಂಪೂರ್ಣ ಬಂದ್ ಆಗಿರುವ ಈ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದಲ್ಲಿ ಅಗ್ನಿಶಾಮಕ ದಳಕ್ಕೂ ಕಂಟ್ರೋಲ್ ಮಾಡಲಾರದಂತಹ ಸ್ಥಿತಿಯಿರುವ ಕಾರಣ ಅಗ್ನಿಶಾಮಕ ದಳ ಇಂದಿನವರೆಗೂ ಈ ಮಳಿಗೆಗೆ ಫೈರ್ ಸೇಫ್ಟಿ ಕ್ಲಿಯರೆನ್ಸ್ ನೀಡಿಲ್ಲ.















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್