ದುಬೈ : ಅನ್ವಾರುಲ್ ಹುದಾ ಯುಎಇ ಸಮಿತಿ ಆಶ್ರಯದಲ್ಲಿ ಅಸ್ಮಾಹುಲ್ ಹುಸ್ನಾ ವಾರ್ಷಿಕೋತ್ಸವ ಮತ್ತು ಸಂಗಮ ದುಬೈ ದೇರಾ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಅನ್ವಾರುಲ್ ಹುದಾ ಯುಎಇ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಹಾಜಿ ಕೊಂಡಂಗೇರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನ್ವಾರುಲ್ ಹುದಾ ಪ್ರಧಾನ ಕಾರ್ಯದರ್ಶಿ ಬಹು ಅಶ್ರಫ್ ಅಹ್ಸನಿ ಮುಖ್ಯ ಭಾಷಣ ಮಾಡಿದರು. ಕೆಸಿಎಫ್ ದುಬೈ ಸೌತ್ ಝೋನ್ ಹಂಗಾಮಿ ಅಧ್ಯಕ್ಷರಾದ ಶಾಹುಲ್ ಹಮೀದ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಡಗು ಸುನ್ನಿ ವೆಲ್ಫೇರ್ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ, ನಿರ್ದೇಶಕರುಗಳಾದ ಜಲೀಲ್ ನಿಝಾಮಿ ಎಮ್ಮೆಮಾಡು, ಉಸ್ಮಾನ್ ಹಾಜಿ ನಾಪೋಕ್ಲು ಶುಭ ಹಾರೈಸಿ ಭಾಷಣ ಮಾಡಿದರು.

ಕಾರ್ಯಕ್ರಮಕ್ಕೆ ಮೊದಲು ಶಂಸು ಎಮ್ಮೆಮಾಡು ತಂಡದಿಂದ ಆಕರ್ಷಕ ಬುರ್ದಾ ಮಜ್ಲಿಸ್ ಮತ್ತು ಅನ್ವಾರುಲ್ ಹುದಾ ಯುಎಇ ಆರ್ಗನೈಸರ್ ಮುಹಮ್ಮದ್ ಅಲಿ ಮುಸ್ಲಿಯಾರ್ ಚಾಮಿಯಾಲ್ ಅಸ್ಮಾಹುಲ್ ಹುಸ್ನಾ ರಾತೀಬ್ ಗೆ ನೇತೃತ್ವ ನೀಡಿದರು. ಅನ್ವರುಲ್ ಹುದಾ ಯುಎಇ ಸಮಿತಿ ನಾಯಕರುಗಳಾದ ಅಹ್ಮದ್ ಚಾಮಿಯಾಲ್, ರಫೀಕ್ ಚಾಮಿಯಾಲ್, ಕೊಡಗು ವೆಲ್ಫೇರ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಶೂದ್ ಹಾಕತ್ತೂರು, ನಾಯಕರುಗಳಾದ ಅರಾಫತ್ ನಾಪೋಕ್ಲು, ಖಲೀಲ್ ಭಾಷಾ ಮಡಿಕೇರಿ, ಇರ್ಷಾದ್ ಕೊಂಡಂಗೇರಿ, ಹಂಝ ತೂಟೆಕ್ಸ್, ಅಲಿ ಮೂಳೂರು ಸೇರಿದಂತೆ ಹಲವು ಸಾಂಘಿಕ, ಸಾಮಾಜಿಕ ನಾಯಕರುಗಳು ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಒಬ್ಬರಿಗೆ ಪವಿತ್ರ ಉಮ್ರಾ ಯಾತ್ರೆಗಾಗಿ ಆಯ್ಕೆ ಮಾಡಿದಾಗ ಇಸ್ಮಾಯಿಲ್ ಕೊಮ್ಮೇತೋಡು ಅದೃಷ್ಟವಂತರಾಗಿ ಹೊರಹೊಮ್ಮಿದರು. ನಾಸಿರ್ ನಈಮಿ ಕಾರ್ಯಕ್ರಮ ನಿರೂಪಿಸಿದರು, ನಾಸಿರ್ ಸಅದಿ ಸ್ವಾಗತಿಸಿ ಅನ್ವರುಲ್ ಹುದಾ ಯುಎಇ ಪ್ರಧಾನ ಕಾರ್ಯದರ್ಶಿ ಸಲೀಂ ಗುಂಡಿಗೆರೆ ಕೊನೆಯಲ್ಲಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು