ಬಹರೈನ್: ನಕಲಿ ಕರೆಗಳ ಬಗ್ಗೆ ಎಚ್ಚರಿಕೆ

ಮನಾಮ:ಭಾರತೀಯ ಅನಿವಾಸಿಗಳಿಗೆ ಬಹರೈನಿನ ಭಾರತೀಯ ದೂತವಾಸ ಕೇಂದ್ರದಿಂದ ಕರೆ ಮಾಡಿರುವುದಾಗಿ ತಿಳಿಸುವ ಮೋಸದ ಕರೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಭಾರತೀಯ ದೂತಾವಾಸ ಕೇಂದ್ರವು ಎಚ್ಚರಿಕೆ ನೀಡಿದೆ.

ವೈಯಕ್ತಿಕ ಮಾಹಿತಿಯನ್ನು ಪಡೆಯುವುದು ಅವರ ಉದ್ದೇಶವಾಗಿದ್ದು, ಮೋಸಗೊಳ್ಳದಂತೆ ರಾಯಭಾರಿ ಕಚೇರಿಯು ಎಚ್ಚರಿಕೆ ನೀಡಿದೆ.

ಈ ಬಗ್ಗೆ ದೂರುಗಳು ಲಭಿಸಿದ ಹಿನ್ನಲೆಯಲ್ಲಿ ಭಾರತೀಯ ದೂತಾವಾಸ ಈ ಎಚ್ಚರಿಕೆಯನ್ನು ನೀಡಿದ್ದು, ಕ್ರೆಡಿಟ್ ಕಾರ್ಡ್‌ನ ವೈಯಕ್ತಿಕ ವಿವರಗಳನ್ನು ಪಡೆಯುವುದು ಈ ಗುಂಪಿನ ಗುರಿಯಾಗಿದ್ದು, ಆರ್ಥಿಕ ಅಪರಾಧ ಎಸಗುವುದು ಅವರ ಉದ್ದೇಶವಾಗಿದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!