janadhvani

Kannada Online News Paper

ಪ್ರವಾದಿ (ಸ.ಅ) ರ ನಿಂದಕನಿಗೆ ನಿಮ್ಮದೂ (ನಮ್ಮದೂ) ಒಂದು ಧಿಕ್ಕಾರವಿರಲಿ.

ಈ ವರದಿಯ ಧ್ವನಿಯನ್ನು ಆಲಿಸಿ

ವಿಶ್ವಕ್ಕೆ ಮಾನವೀಯತೆಯ ಸಂದೇಶವನ್ನ ಸಾರಿದ, ಶಾಂತಿ ಸಹನೆ ಸೌಹಾರ್ದತೆಯನ್ನು ಪ್ರತಿಪಾದಿಸಿದ, ವಿಧವೆಯರನ್ನು ಅನಾಥ ಮಕ್ಕಳನ್ನು ಸಂರಕ್ಷಿಸಲು ಕಲಿಸಿದ, ನಿನ್ನ ನೆರೆಹೊರೆಯವನು ಹಸಿದರೆ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ ಎಂದು ಕಲಿಸಿಕೊಟ್ಟ ನೇತಾರ, ನಜ್ರಾನ್ ನಿಂದ ಮದೀನಾಕ್ಕೆ ಬಂದ ಕ್ರಿಸ್ತೀಯ ಪುರೋಹಿತರಿಗೆ ಪ್ರಾರ್ಥನೆಯ ಸಮಯವಾದಾಗ ಅವರಿಗೆ ಬೇಕಾದ ಸೌಕರ್ಯವನ್ನು ಮಾಡಿಕೊಡಲು ತನ್ನ ಅನುಯಾಯಿಗಳಿಗೆ ಆಜ್ಞೆ ನೀಡಿದ ನಾಯಕ. ಹೀಗೆ ಎಲ್ಲಾ ವಿಷಯದಲ್ಲೂ ಶಾಂತಿಯ ಸಂದೇಶವಾಹಕ ವಿಶ್ವ ಗುರು ಮುಹಮ್ಮದ್ ಮುಸ್ತಫಾ (ಸ.ಅ) ರ ಬಗ್ಗೆ ಏನೂ ತಿಳಿಯದ ಅಜ್ಞಾನಿಯೊಬ್ಬ ನಿಂದನೆಯ ಮಾತುಗಳನ್ನಾಡಿದ್ದು ನಿಜಕ್ಕೂ ಖಂಡನೀಯ.
ಸೌಹಾರ್ದ ಭಾರತದಲ್ಲಿ ಜೀವಿಸುವ ನಾವು ಎಲ್ಲಾ ಜಾತಿ ಧರ್ಮಗಳು ಒಂದಾಗಿ ಜೀವಿಸಲು ಕರೆಕೊಡಬೇಕಾದ ಪತ್ರಕರ್ತರು, ಟಿವಿ ಮಾಧ್ಯಮಗಳು ವಿಭಜಿಸುವಂತಹಾ ಕೆಲಸವನ್ನು ಮಾಡುತ್ತಿರುವುದು ನಿಜಕ್ಕೂ ಖೇದಕರ.

ಯಾರೋ ಒಬ್ಬ ಸಾಹಿತಿ ಶ್ರೀ ರಾಮನನ್ನು ನಿಂದಿಸಿದರೆ ಅದನ್ನು ಮುಸಲ್ಮಾನರಾದ ನಾವೂ ಖಂಡಿಸುತ್ತೇವೆ. ಕಾರಣ ಒಂದು ಧರ್ಮದ ವಿಷಯದಲ್ಲಿ ಕೈ ಹಾಕಿ ಇಲ್ಲಿ ಅರಾಜಕತೆಯನ್ನು ಸೃಷ್ಟಿಸುವುದು ಸರಿಯಲ್ಲ. ಆ ವಿಷಯದಲ್ಲಿ ಚರ್ಚಿಸುವಾಗ ನಮ್ಮ ನೇತಾರ ಪ್ರವಾದಿ (ಸ.ಅ)ರ ವಿಷಯವನ್ನು ಎಳೆದು ತರಬೇಕಾದ ಅಗತ್ಯವಿರಲಿಲ್ಲ. ಡಾ|| ಬರ್ನಾಡ್ ಷಾ, ಮೈಕಲ್ ಎಚ್ ಹಾರ್ಟ್, ಗಾಂಧೀಜಿ ಯಂತಹಾ ಬುದ್ಧಿಜೀವಿಗಳಿಗೆ ಪ್ರವಾದಿ (ಸ.ಅ) ಯಾರು ಎಂದು ಅರ್ಥವಾಗಿದೆ. ಆದರೆ ಮತಾಂಧತೆಯ ವಿಷ ತಲೆಗೇರಿಸಿಕೊಂಡ ಅಜಿತ್ ನಂತಹಾ ನಾಲಾಯಕ್ಕು ಪತ್ರಕರ್ತರಿಗೆ ಮಾತ್ರ ಇನ್ನೂ ಎಚ್ಚರವಾಗಿಲ್ಲ.

ಶತಮಾನಗಳ ಹಿಂದೆ ಭಯೋತ್ಪಾದನೆಯನ್ನು ಹುಟ್ಟು ಹಾಕಿದ ಧರ್ಮ ಎಂದು ಈ ಲಜ್ಜೆ ಗೆಟ್ಟವನು ಹೇಳುತ್ತಿರಬೇಕಾದರೆ ಈತನಿಗೆ ಮಾಲೇಗಾವ್ ಸ್ಫೋಟ, ಮಕ್ಕ ಮಸೀದಿ ಸ್ಫೋಟ, ಗುಜರಾತ್ ಹತ್ಯಾಕಾಂಡ, ಅದೇ ರೀತಿ ಕಲ್ಬುರ್ಗಿ ಗೌರಿ ಲಂಕೇಶ್ ರನ್ನು ಹತ್ಯೆ ಮಾಡಿದವರಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನ ಹೆಸರಿಲ್ಲ ಅನ್ನೋದನ್ನ ಬಹುಶಃ ಈತ ಮರೆತಿರಬೇಕು.. ಇಸ್ಲಾಮ್ ಯಾವತ್ತೂ ಭಯೋತ್ಪಾದನೆಯನ್ನು ಕಲಿಸಿಲ್ಲ ಕಳಿಸೋದು ಇಲ್ಲ ಭಯೋತ್ಪಾದನೆಗೂ ಇಸ್ಲಾಮಿಗೂ ಯಾವುದೇ ಸಂಭಂಧವಿಲ್ಲ … ಅದಕ್ಕೊಸ್ಕರವಾಗಿದೆ ಅಜ್ಮಲ್ ಕಸಬ್ ಅನ್ನೋ ಭಯೋತ್ಪಾದಕನನ್ನು ಗಲ್ಲಿಗೇರಿಸಿದಾಗ ಮುಸಲ್ಮಾನರನ್ನು ದಫನ ಮಾಡುವ ಭೂಮಿಯಲ್ಲಿ ಆತನಿಗೆ ಸ್ಥಳ ನಿರಾಕರಿಸಿದ್ದು ಭಯೊತ್ಪಾದನೆ ಮಾಡಿದವನ ಶವಕ್ಕೂ ಇಸ್ಲಾಮ್ ಬೆಲೆ ಕೊಡೊದಿಲ್ಲ ಅನ್ನೊದಕ್ಕೆ ಈ ಉದಾಹರಣೆ ಸಾಕು…

ಇನ್ನು ನೀನು ಹೇಳಿದ ಇನ್ನೊಂದು ವಾದ ಶಿಶುಕಾಮ ನಾಚಿಕೆಯಾಗಬೇಕು ನಿನಗೆ… ಶ್ರೀ ಕೃಷ್ಣನಿಗೆ 3000 ಮದುವೆಯಾದದ್ದು ಬಹುಪತ್ನಿತ್ವ ಅಲ್ವೇ? ಶ್ರೀಕೃಷ್ಣ 8 ವರ್ಷದಲ್ಲಿ ರುಕ್ಮಿಣಿಯನ್ನು ಮದುವೆಯಾದದ್ದು, ಶ್ರೀರಾಮ ಪರಮಹಂಸರು ಶಾರದಾದೇವಿಯನ್ನು 5 ವರ್ಷದಲ್ಲಿ ಮದುವೆಯಾದದ್ದು ಇದೆಲ್ಲಾ ಈ ಆ್ಯಂಕರ್ ಸಾಬ್ ಗೆ ಶಿಶುಕಾಮವಾಗಿ ಕಾಣುತ್ತದೊ ಗೊತ್ತಿಲ್ಲ? ನಾನು ಒಂದು ಧರ್ಮದ ಭಾವಣೆಗಳ ಬಗ್ಗೆ ಹೇಳಿದ್ದಲ್ಲ ಅದು ಹೇಳೋ ಅಗತ್ಯವೂ ಇಲ್ಲ ಅದು ಆ ಕಾಲಕ್ಕೆ ಸೀಮಿತವಾದ ಸಂಸ್ಕ್ರುತಿ ಯಾಗಿರಬಹುದು.. ಇಲ್ಲಿ ನನ್ನ ಉದ್ದೇಶ ನಿನ್ನ ಧರ್ಮವನ್ನಾದರೂ ಕಲಿ.. ಆವಾಗಲೇ ಇನ್ನೊಂದು ಧರ್ಮದ ಬಗ್ಗೆ ಗೌರವಮೂಡಲು ಸಾದ್ಯ…
ಇನ್ನಾದರೂ ಇಂಥಹಾ ಮಾನಸಿಕ ರೋಗಿಗಳಿಂದ ಸಮಾಜದ ಸ್ವಾಸ್ತ್ಯ ಕೆಡದಂತಾಗಲಿ … ಸರ್ಕಾರ ಇಂಥವರ ಮೇಲೆ ಕನೂನು ಕ್ರಮ ಕೈಗೊಳ್ಳಲಿ.. ಈ ಆ್ಯಂಕರ್ ನಿಗೆ ಪ್ರತೀಯೊಬ್ಬ ಮುಸಲ್ಮಾನನ ಧಿಕ್ಕಾರ ವಿರಲಿ… ನನ್ನದೂ ಒಂದು ಧಿಕ್ಕಾರ.

ಫಾರೂಖ್ ಕಾಟಿಪಳ್ಳ
(ಪ್ರ.ಕಾರ್ಯದರ್ಶಿ ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ)

error: Content is protected !! Not allowed copy content from janadhvani.com