janadhvani

Kannada Online News Paper

ಮುಅಲ್ಲಿಮ್ ವಿಭಾಗದ ಪ್ರತಿಭೆಗಳನ್ನು ಸಮುದಾಯ ಗುರುತಿಸಲಿ

✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

ಸಮಸ್ತ ಕೇರಳ ಜಂಇಯತುಲ್ ಉಲಮಾವು ನೂರನೇ ವರ್ಷವನ್ನು ಆಚರಿಸುತ್ತಿದೆ. ನೂರನೇ ವರ್ಷದ ಪ್ರಯುಕ್ತ ಕಳೆದ ಮೂರು ವರ್ಷಗಳಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಸಮಸ್ತ ಅಧೀನ ಸಂಘಟನೆ ಗಳಾದ SMA SJM SჄS SSF KMJ‌‌ ಗೆ ಸಮಸ್ತ ಉಲಮಾ ಒಕ್ಕೂಟವು ಆದೇಶ ನೀಡಿತ್ತು. ವಿವಿಧ ಸಂಘಟನೆ ಗಳಿಗೆ ವಹಿಸಿ ಕೊಟ್ಟ ಜವಾಬ್ದಾರಿಗಳು ಬಹುತೇಕ ಕಾರ್ಯರೂಪಕ್ಕೆ ತರಲಾಗಿದೆ. ವಿಭಿನ್ನವಾದ ಜನಪರ ಯೋಜನೆಗಳಿಗೆ ಅಡಿಪಾಯ ಹಾಕಿ ಮಾದರಿಯೋಗ್ಯ ಜನ ಸೇವೆಯನ್ನು ಮುಸ್ಲಿಂ ಸಮುದಾಯಕ್ಕೆ ಪರಿಚಯಿಸುವ ಮೂಲಕ ಸಮಸ್ತ ಸೆಂಚುರಿ ಯನ್ನು ಅದ್ದೂರಿಯಾಗಿಯೇ ಆಚರಿಸಲು ಸಮಸ್ತ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಶೈಖುನಾ ಎಪಿ ಉಸ್ತಾದ್ ಕರೆ ನೀಡಿದ್ದರು.

ಸಮಸ್ತ ಸೆಂಚುರಿಯ ಭಾಗವಾಗಿ SJM ವತಿಯಿಂದ ಮುಅಲ್ಲಿಮರಿಗೆ ಮನೆ ನಿರ್ಮಾಣ ಯೋಜನೆ ಈಗಾಗಲೇ ಕಾರ್ಯ ರೂಪದಲ್ಲಿದೆ. ಅದರ ಜೊತೆಗೆ SJM ಜಿಲ್ಲಾ ಸಮ್ಮೇಳನಗಳು ನಡೆಯುತ್ತಿವೆ. ಕರ್ನಾಟಕದ ಪ್ರಮುಖ ಜಿಲ್ಲೆಯಲ್ಲೊಂದಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ SJM ಜಿಲ್ಲಾ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದೆ.‌ಈ ಸಮಾವೇಶದಲ್ಲಿ ದೀರ್ಘಾ ಕಾಲ ಮದ್ರಸಾ ರಂಗದಲ್ಲಿ ಸೇವೆ ಮಾಡಿದ ಉಸ್ತಾದರುಗಳನ್ನು ಗೌರವಿಸಲಾಗುತ್ತಿದೆ. ಉಸ್ತಾದರುಗಳ ಪೈಕಿ ದೀರ್ಘಕಾಲ ಸೇವೆ ಮಾಡಿದವರು, ಪ್ರಭಾಷಣಗಳ ಮೂಲಕ ದೀನಿ ಪ್ರಬೋಧನೆ ಮಾಡುವವರು, ಖತೀಬ್, ಮುದರ್ರಿಸುಗಳಾಗಿ ದೀರ್ಘಕಾಲ ದುಡಿದವರು, ನೂರಾರು ಉಲಮಾ ಗಳನ್ನು ಸಮುದಾಯಕ್ಕೆ ಅರ್ಪಣೆ ಮಾಡಿದವರು, ಉತ್ತರ ಕರ್ನಾಟಕದ ಭಾಗಗಳಿಗೆ ತೆರಳಿ ಧಾರ್ಮಿಕ, ಲೌಕಿಕ ಶಿಕ್ಷಣ ನೀಡುತ್ತಿರುವವರು, ಬುರ್ದಾ ಮಜ್ಲಿಸುಗಳ ಮೂಲಕ ಮನೆ ಮಾತಾದವರು, ಹಾಡುಗಾರರು, ಧಾರಾಳ ಪುಸ್ತಕ ಬರೆದವರು, ಉತ್ತಮ ಬರಹಗಾರರು… ಹೀಗೆ ವೈವಿಧ್ಯಮಯ ಪ್ರತಿಭೆಗಳಿರುವ ಉಸ್ತಾದರುಗಳಿದ್ದಾರೆ. ಇವರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸಮುದಾಯ ಮಾಡಬೇಕಿದೆ.

ಸುನ್ನತ್ ಜಮಾಅತ್‌ನ ಆದರ್ಶ ಇರುವ ಧಾರಾಳ ಸಂಘಟನೆ ಗಳು ಮುಸ್ಲಿಂ ಸಮುದಾಯದಲ್ಲಿವೆ. ವರ್ಷಕ್ಕೊಮ್ಮೆ ಕಾರ್ಯಕ್ರಮ ಆಯೋಜಿಸಿ ಎಲ್ಲಿಯಾದರೂ ಸಣ್ಣ ಸೇವೆ ಮಾಡಿದವರನ್ನು ಕರೆ ತಂದು ಗೌರವಿಸುವ ಕಾರ್ಯ ಈ ಸಂಘಟನೆ ಗಳು ಮಾಡುತ್ತವೆ.ಇದು ಒಳ್ಳೆಯ ಕಾರ್ಯಗಳೇ. ಆದರೆ, ಉಸ್ತಾದರುಗಳ ಸೇವೆಗಳನ್ನು ಅರಿತು, ಅವರನ್ನು ಗೌರವಿಸುವ ಕಾರ್ಯ ಮಾಡುವುದರಲ್ಲಿ ಈ ಸಂಘಟನೆ ಗಳು ಆಸಕ್ತಿ ವಹಿಸಿಲ್ಲ ಎಂಬುದು ಖೇದಕರ. ಮದ್ರಸ ಮಕ್ಕಳು ಪರೀಕ್ಷೆಯಲ್ಲಿ, ಸಾಹಿತ್ಯೋತ್ಸವಲ್ಲಿ, ಪ್ರತಿಭಾ ಸಂಗಮ ದಲ್ಲಿ ಕೌಶಲ್ಯ ತೋರಿಸಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸುವಾಗ ಅದರ ಹಿಂದೆ ಶ್ರಮ ಪಟ್ಟ ವಿಭಾಗ ಉಸ್ತಾದರುಗಳಾಗಿದ್ದಾರೆ. ಮಕ್ಕಳನ್ನು ಅಭಿನಂದಿಸುವ ಸಮಾಜ ಉಸ್ತಾದರುಗಳನ್ನು ಮರೆತು ಬಿಡುತ್ತಾರೆ. ಜಮಾಅತ್ ಆಡಳಿತ ಸಮಿತಿಗಳು ಮಾತ್ರ ಉಸ್ತಾದರ ಸೇವೆಗಳನ್ನು ಗೌರವಿಸುತ್ತಿದೆ. ಉಸ್ತಾದರುಗಳು ಪ್ರಶಸ್ತಿಗಾಗಿ, ಗೌರವ ಕ್ಕಾಗಿ ಯಾವ ಸೇವೆಗಳನ್ನೂ ಮಾಡುತ್ತಿಲ್ಲ. ಅಲ್ಲಾಹನ ದೀನಿನ ಸೇವೆಗಾಗಿ ಟೊಂಕ ಕಟ್ಟಿ ನಿಂತವರು. ಅಲ್ಲಾಹನ ದೀನ್ ಬೋಧನೆ ಮಾಡುವ ಉಸ್ತಾದರಗಳ ಸೇವೆಗಳನ್ನು ಗೌರವಿಸುವ ಮೂಲಕ SJM ಪ್ರಶಂಸಾರ್ಹ ಹೆಜ್ಜೆಯನ್ನಿಡುತ್ತಿದೆ. ಇದು ಸುನ್ನತ್ ಜಮಾಅತ್ ನಲ್ಲಿ ನಂಬಿಕೆ ಇಡುವ ಎಲ್ಲಾ ಸಂಘಟನೆಗಳಿಗೂ ಮಾದರಿಯಾಗಲಿ.