janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮುಫ್ತಿ ಹಾಜಿ ಪೀರ್ ಹಝರತ್ ಶಾಹ್ ಹಸನ್ ಮುಹಮ್ಮದ್ ಶಂಸುಲ್ ಹಖ್ ಖಾದ್ರಿ

ಇಂಗ್ಲಿಷ್ ನಿಂದ ಭಾಷಾಂತರ
✍🏻Nizzu4ever ಉರುವಾಲುಪದವು

ಸಾಧಾರಣ ಇನ್ನೂರು ವರ್ಷಗಳ ಹಿಂದೆ ಬಾಗ್ದಾದಿನಿಂದ ಭಾರತಕ್ಕೆ ವಲಸೆ ಬಂದವರಾಗಿದ್ದಾರೆ ಸೂಫಿ ಸಂತರಾದ ಹಝರತ್ ಆರಿಫ್ ಕಾಮಿಲ್ ಸೂಫಿಯೇ-ಬಾ-ಸಫಾ ಹಾಫೀಜ್ ಅಲ್ಲಾಮಾ ಸಯ್ಯದ್ ಶಾಹ್ ಮೊಹಮ್ಮದ್ ಅಬ್ದುಲ್ ಖಾದ್ರಿ ಲಖಾವುಳ್ಲಹ ಶಾಹ್ ಖಾದ್ರಿ ಬಗ್ದಾದಿ ಅಲಿಯಾಸ್ ಹಝರತ್ ಲಕ್ಕಾದ್ ಶಾಹ್ ಔಲಿಯಾ (ನ.ಮ)

ಹಝರತ್ ಲಕ್ಕಾದ್ ಶಾಹ್ ರವರು ಬೆಂಗಳೂರಿನಲ್ಲಿ ಸ್ಥಳವನ್ನು ಖರೀದಿಸಿ ಅದರ ಒಂದು ಭಾಗದಲ್ಲಿ ಮಸೀದಿ ಮತ್ತು ಇನ್ನೊಂದು ಭಾಗದಲ್ಲಿ ಮನೆ ನಿರ್ಮಿಸಿ ಬಾಕಿ ಉಳಿದ ಚಿಕ್ಕ ಜಾಗದಲ್ಲಿ ಜೀವನ ಮಾರ್ಗಕ್ಕಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹಝ್ರತ್ ಲಕ್ಕಾದ್ ಶಾಹ್ ಔಲಿಯಾರವರು ಒಬ್ಬ ಮಹೋನ್ನತ ಸೂಫಿ ಸಂತರಾಗಿದ್ದರು. ತನ್ನ ಜೀವನವನ್ನು ಸಂಪೂರ್ಣವಾಗಿ ಅಲ್ಲಾಹುವಿನ ಧ್ಯಾನದಲ್ಲಿ ಮತ್ತು ಜನರಿಗೆ ಆಧ್ಯಾತ್ಮಿಕತೆಯನ್ನು ಭೋದಿಸಲು ಮೀಸಲಿರಿಸಿದ್ದರು. ಏಕದೇವ ವಿಶ್ವಾಸವನ್ನು ಮತ್ತು ರಸೂಲ್ ಸ.ಅ ರವರ ಜೀವನ ಸಂದೇಶವನ್ನು ಅವರ ಭಾಷಣದ ಮುಖಾಂತರ ಜಗದಗಲ ಹರಡುತ್ತಿದ್ದರು. ಅವರ ಧರ್ಮನಿಷ್ಠೆ ಮತ್ತು ಹೃದಯ ವಿಶಾಲತೆಯ ಕಾರಣದಿಂದ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು. ಅಗತ್ಯವಿರುವವರಿಗೆ ಮತ್ತು ದುಃಖದಲ್ಲಿರುವ ಜನರಿಗೆ ಸಹಾಯವನ್ನು ಮಾಡುತ್ತಿದ್ದರು, ಅವರ ಕಷ್ಟಗಳಿಗೆ ಸಾಂತ್ವಾನ ಹೇಳುತ್ತಿದ್ದರು. ತಮ್ಮ ವಿಶ್ವಾಸ ಪೂರ್ಣತೆ ಮತ್ತು ಉನ್ನತ ಸ್ವಭಾವ ಗುಣಗಳಿಂದ ಸಾಧಿಸಿದ ಆಧ್ಯಾತ್ಮಿಕ ಶಕ್ತಿಯಿಂದ ಮತ್ತು ಕರಾಮತುಗಳ ಕಾರಣಗಳಿಂದ ರಾಜ್ಯದ ವಿವಿಧ ಭಾಗಗಳಿಂದ ಜನರು ಬಂದು ಇಸ್ಲಾಮ್ ಸ್ವೀಕರಿಸುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ ಭಾರತದುದ್ದಕ್ಕೂ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದರು.

ಹಝರತ್ ಲಕ್ಕಾದ್ ಶಾಹ್ ಅವುಲಿಯಾರವರಿಗೆ ಎರಡು ಮಕ್ಕಳಿದ್ದರು; ಈರ್ವರಲ್ಲಿ ಒಬ್ಬರು ಚಿಕ್ಕ ವಯಸ್ಸಿನಲ್ಲೇ ಮರಣಹೊಂದಿದರು. ಇನ್ನೊಬ್ಬ ಮಗ ಹಝರತ್ ಅಲ್ಲಾಮಾ ಹಾಫೀಜ್ ಮುಫ್ತಿ ಸಯ್ಯದ್ ಶಾಹ್ ಮೊಹಮ್ಮದ್ ಅಬ್ದುಲ್ ರಹ್ಮಾನ್ ಬಾದ್ಷಹ್ ಖಾದ್ರಿ (R.A.). ಅವರೂ ಕೂಡ ತನ್ನ ತಂದೆಯಂತೆ ಶ್ರೇಷ್ಠ ವ್ಯಕ್ತಿಯಾಗಿದ್ದರು ಮತ್ತು ಹಝರತ್ ಸಯಿದಾ ಬೀಬಿ ಮಾಲಿಕುನ್ನಿಸಾ ಬೇಗಮ್ ಸಾಹಿಬಾ (Q.S.) ಮತ್ತು ಹಝರತ್ ಸಯಿದಾ ಬೀಬಿ ನೂರುನ್ನಿಸಾ ಬೇಗಮ್ ಸಾಹಿಬಾ (Q.S.) ಎಂಬ ಎರಡು ಹೆಣ್ಣುಮಕ್ಕಳಿದ್ದರು.

ಹಝರತ್ ಸಯಿದಾ ಬೀಬಿ ಮಾಲಿಕುನ್ನಿಸಾ ಬೇಗಮ್ ಸಾಹಿಬಾ (Q.S.) ರವರು ಮೌಲಾನಾ ಮೌಲ್ವಿ ಮುಫ್ತಿ ಪೀರ್ ಹಾಜಿ ಹಝರತ್ ಸಯ್ಯದ್ ಷಾ ಹಸನ್ ಮೊಹಮ್ಮದ್ ಶಮ್ಸುಲ್ ಹಕ್ ಕಾದ್ರಿ (R.A.) ರವರ ತಂದೆಯ ಅಜ್ಜಿಯಾಗಿದ್ದಾರೆ. ಅವರು ಮದುವೆಯಾಗಿದ್ದು ಹಜರತ್ ಹಫಿಜ್-ಒ-ಖರಿ ಕುತುಬುಲ್ ಅಕ್ತಾಬ್ ಸೈಯದ್ ಷಾ ಮಿರ್ಶಾದ್ ಬಾದ್ಶಾ ಕಾದ್ರಿ ಅಲ್ ಹಾಸನಿ-ವಲ್-ಹುಸೈನಿ-ಅಲ್ ಬಾಗ್ದಾದಿ (R.A.) ರವರನ್ನಾಗಿತ್ತು. ಅವರು 1889 ರಲ್ಲಿ ಬಾಗ್ದಾದಿನಿಂದ ಭಾರತಕ್ಕೆ ಬಂದಿದ್ದರು. ಒಬ್ಬ ಶ್ರೇಷ್ಠ ವ್ಯಕ್ತಿ ಮತ್ತು ಶುದ್ಧ ಮನಸ್ಸಿನ ನಿಷ್ಕಳಂಕ ವ್ಯಕ್ತಿತ್ವವನ್ನು ಹೊಂದಿದ ಮಹಾನುಭವಾಗಿದ್ದರು. ಸರಳ ಜೀವನವನ್ನು ನಡೆಸುವ ಮೂಲಕ ಇಸ್ಲಾಮಿನ ಸುಂದರ ಸಂದೇಶವನ್ನು ಪ್ರಚಾರ ಪಡಿಸುತ್ತಿದ್ದರು. ಅವರ ಶುದ್ಧ ಮನಸ್ಸು ಮತ್ತು ಧಾರ್ಮಿಕತೆಯಿಂದ ಕೂಡಿದ ಜೀವನದ ಫಲವಾಗಿ ಭಾರತ ಮಾತ್ರವಲ್ಲದೆ ಅರೇಬಿಯಾ, ಸಿರಿಯಾ, ಯೆಮೆನ್, ಅಫ್ಘಾನಿಸ್ತಾನ, ಇಂಡೋನೇಷ್ಯಾ, ಮಲೇಷಿಯಾ, ಇರಾಕ್, ಟರ್ಕಿ ದೇಶಗಳಲ್ಲಿ ಲಕ್ಷಾಂತರ ಶಿಷ್ಯರನ್ನು ಹೊಂದಿದ್ದರು. ಅನೇಕ ರಾಜರುಗಳು ಮತ್ತು ಅನುಯಾಯಿಗಳು ಅವರ ಆಶೀರ್ವಾದಕ್ಕಾಗಿ ದಿನನಿತ್ಯ ಸಂದರ್ಶಿಸುತ್ತಿದ್ದರು.

ಹಝರತ್-ಇ-ಮೌಸೂಫ್ ಮಿರ್ಶಾದ್ (Q.S.A.) ಆಧ್ಯಾತ್ಮಿಕತೆಯ ಮೂಲಕ ಹಲವಾರು ಕಷ್ಫ್ ಕರಾಮತುಗಳ ಒಡೆಯರಾಗಿದ್ದರು. 18 ಹಜ್ ನಿರ್ವಸಿದ್ದರು. ಹಝರತ್-ಇ-ಮೌಸೂಫ್ ಮಿರ್ಶಾದ್ ರವರಿಗೆ ಎರಡು ಮಕ್ಕಳಿದ್ದರು. ಹಿರಿಯ ಮಗ ಹಝರತ್ ಸೈಯದ್ ಷಾ ಮೊಹಮ್ಮದ್ ನೂರುಲ್ ಹಕ್ ಬಾದ್ಷಾ ಖಾದ್ರಿ ಹಸ್ನಿ-ವಾಲ್-ಹುಸೈನಿ (Q.S.A.) ಅವರ ಜೀವನವನ್ನು ಸಂಪೂರ್ಣವಾಗಿ ಧ್ಯಾನದಲ್ಲಿ ಕಳೆದರು ಮತ್ತು ಧ್ಯಾನದಲ್ಲೇ ನಿಧನರಾದರು.ತಮಿಳುನಾಡಿನಲ್ಲಿ ಅವರ ಮಕ್ಬರವಿದೆ. ಅವರ ಇನ್ನೊಬ್ಬ ಮಗ ಹಜರತ್ ಅಲ್ಲಾಮಾ ಮುಫ್ತಿ ಸೈಯದ್ ಷಾ ಮೊಹಮ್ಮದ್ ಅಮೀರ್ ಉಲ್ ಹಕ್ ಬಾದ್ಶಾ ಖಾದ್ರಿ ಅಲ್ ಹಸನ್-ವ್ಯಾಲ್-ಹುಸೈನಿ (Q.S.A.). ಅವರು ಅಂದಿನ ತ್ವರಿಕತ್ತಿನ ಉನ್ನತ ಶೈಖ್ ಆಗಿದ್ದರು.
ಮೌಲಾನಾ ಮೌಲ್ವಿ ಮುಫ್ತಿ ಪೀರ್ ಹಾಜಿ ಹಜರತ್ ಸೈಯದ್ ಷಾ ಹಸನ್ ಮೊಹಮ್ಮದ್ ಶಮ್ಸುಲ್ ಹಕ್ ಕಾದ್ರಿ ಅವರ ಮಗ ಶಿಷ್ಯ ಖಲೀಫಾ ಮತ್ತು ಹಜರತ್-ಇ-ಮೌಸೂಫ್ ರವರ ಮೊಮ್ಮಗ ಆಗಿದ್ದಾರೆ. ಹಲವಾರು ಕರಾಮತುಗಳ ಮೂಲಕ ಮೈಸೂರು ಪ್ರಾಂತ್ಯ ಮತ್ತು ದಕ್ಷಿಣ ಭಾರತದ ಜನರಿಗೆ ಇಸ್ಲಾಮಿನ ಸಂದೇಶವನ್ನು ತಲುಪಿಸಿ, ಫೆಬ್ರವರಿ 1965 ರಲ್ಲಿ ಹಜರತ್-ಇ-ಅಮೀರ್ಲ್ ಹಕ್ ಬಾದ್ಶಾ ಕಾದ್ರಿ ರವರು ಅಲ್ಲಾಹುವಿನ ಸನ್ನಿಧಿಯನ್ನು ತಲುಪಿದರು. ಅಲ್-ಜಮಿಯಾ-ಹಕ್ಖಾನಿಯ-ಅಲ್-ಅರೆಬಿಯಾ ಇಸ್ಲಾಮಿಯಾ ಎಂಬ ಹೆಸರಿನ ಇಸ್ಲಾಮಿಕ್ ಸಂಸ್ಥೆ ಅವರಿಂದಲೇ ಸ್ಥಾಪಿಸಲಾಯಿತು. ಅಲ್ಲಾಹುವಿನ ಅಪಾರವಾದ ಅನುಗ್ರಹದಿಂದ ಅನೇಕ ಯುವವಿದ್ವಾಂಸರನ್ನು ಮತ್ತು ಖಾರಿ ಗಳನ್ನು ಆ ಸಂಸ್ಥೆಯು ಸಮುದಾಯಕ್ಕರ್ಪಿಸಿತ್ತಿದೆ.

ನಂತರ ಅವರ ಹಿರಿಯ ಮಗ ಹಜರತ್ ಮೌಲಾನಾ ಮುಫ್ತಿ ಸೈಯದ್ ಷಾ ಹಸನ್ ಮೊಹಮ್ಮದ್ ಶಮ್ಸುಲ್ ಹಕ್ ಅಲ್ ಹಸ್ನಿ-ವಾಲ್-ಹುಸೈನಿ ಅಲ್ ಕಾದ್ರಿ ರವರು ಅವರ ಸ್ಥಾನವನ್ನು ಅಲಂಕರಿಸಿದರು ಮತ್ತು ಅವರ ತಂದೆಯಿಂದ ಕಿಲಾಫತ್ ಪಡೆದುಕೊಂಡರು. ಅವರು ತಮ್ಮ ಪೂರ್ವಜರು ಮತ್ತು ಪಿತೃಗಳ ಸಿದ್ದಾಂತವನ್ನು ಯಶಸ್ವಿಯಾಗಿ ಅತ್ಯಂತ ಉತ್ಸಾಹದಿಂದ ಮುಂದುವರೆಸಿ ಭಾರತ ಮಾತ್ರವಲ್ಲದೆ ಸಿಂಗಪೂರ್, ಮಲೇಷಿಯಾ, ಬ್ರೂನಿ, ಡರಸ್-ಸಲಾಮ್, ಗಲ್ಫ್ ಕಂಟ್ರೀಸ್, ಯು.ಎಸ್.ಎ., ಯುರೋಪ್, ಇತ್ಯಾದಿಗಳಲ್ಲಿ ಲಕ್ಷದಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ.

ಪ್ರವಾದಿ ಮುಹಮ್ಮದ್ ಸ. ಅ ರವರ 33 ನೇ ವಂಶಸ್ಥರು ಮತ್ತು ಹಜರತ್ ಮೆಹಬೂಬ್-ಇ-ಸುಭ್ಹಾನಿ ಕುತುಬ್-ಇ-ರಬ್ಬಾನಿ ಮಿರಾನ್ ಮೊಹುದ್ದೀನ್ ಸೈಯದ್ ಅಬ್ದುಲ್ ಖಾದಿರ್ ಜೀಲಾನಿ ಬಾಗ್ದಾದಿ (Q.S.A.) ರವರ 19 ನೇ ವಂಶಸ್ಥರಾಗಿದ್ದಾರೆ. ಅವರು ಆಧ್ಯಾತ್ಮಿಕ ನಾಯಕರು ಮತ್ತು ಹನಫಿ ಮಜ್ಹಬ್ ನ ಮುಫ್ಟಿಯು ಆಗಿದ್ದಾರೆ. ಅರೇಬಿಕ್, ಪರ್ಷಿಯನ್, ಉರ್ದು, ಇಂಗ್ಲಿಷ್, ಇತ್ಯಾದಿ ಭಾಷೆಗಳಲ್ಲಿ ಸರಾಗವಾಗಿ ಮಾತನಾಡುವ ಉತ್ತಮ ಭಾಷಣಕಾರ ಮತ್ತು ಬರಹಗಾರರಾಗಿದ್ದಾರೆ. ಹಲವಾರು ಫತ್ವಾಗಳನ್ನು ನೀಡಿದ ಮಹಾನ್ ವಿದ್ವಾಂಸರಾಗಿದ್ದಾರೆ.ಇಸ್ಲಾಂ ಧರ್ಮ ಬಗ್ಗೆ ಯಾವುದೇ ಸಂಶಯಗಳನ್ನು ನಿವಾರಿಸಿ ಕೊಡಲು ಮುಸ್ಲಿಂ ಮುಖಂಡರು ಅವರನ್ನು ಸಂಪರ್ಕಿಸುತ್ತಾರೆ. ಅನ್ಯ ಮುಸ್ಲಿಮರು ಮೌಲಾನಾರವರನ್ನು ಸಂಪರ್ಕಿಸಿ ಇಸ್ಲಾಮನ್ನು ಕಲಿಯುತ್ತಾರೆ ಮತ್ತು ಅವರ ಮೂಲಕ ಇಸ್ಲಾಂ ಸ್ವೀಕರಿಸುತ್ತಿದ್ದಾರೆ.

ಸುನ್ನಿ ಸ್ಕಾಲರ್’ಸ್ ಒರ್ಗಾನಿಸೇಷನ್ ಆಫ್ ಇಂಡಿಯಾ ಇದರ ಉಪಾಧ್ಯಕ್ಷರಾಗಿದ್ದಾರೆ. ಕರ್ನಾಟಕ ಸುನ್ನಿ ಎಜುಕೇಷನಲ್ ಟ್ರಸ್ಟ್ ಮತ್ತು ಇಸ್ಲಾಮಿಕ್ ರೆಸೆರ್ಚ್ ಸೆಂಟರ್ ಬೆಂಗಳೂರು ಇದರ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ, ಬೆಂಗಳೂರಿನ ಹಕ್ಕಾನಿಯಾ ಅರೇಬಿಕ್ ಮತ್ತು ಪರ್ಷಿಯನ್ ಇನ್ಸ್ಟಿಟ್ಯೂಟ್ ಇದರ ಪ್ರಾಂಶುಪಾಲರಾಗಿದ್ದರೆ. ಮೌಲಾನಾರವರು ಸಂಪೂರ್ಣ ಸಾಮಾಜಿಕ ಕಾರ್ಯಕರ್ತ ಮತ್ತು ಮುಸ್ಲಿಮ ಸಮುದಾಯದ ಅಭ್ಯುದಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇಸ್ಲಾಂ ಮತ್ತು ಸೂಫಿಸಂ ಬೋಧಿಸುವುದು ಅವರ ಏಕೈಕ ಗುರಿಯಾಗಿದೆ. ಅಲ್ಲಾಹು ಅನುಗ್ರಹಿಸಲಿ ಅಮೀನ್

error: Content is protected !! Not allowed copy content from janadhvani.com