ನವದೆಹಲಿ:
ಶೀಘ್ರದಲ್ಲೇ ಹೊಸ ವಿನ್ಯಾಸದ 20 ರೂಪಾಯಿ ನೋಟನ್ನು ಬಿಡುಗಡೆ ಮಾಡಲಾಗುವುದು ಎಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) , ಅದರಲ್ಲಿ ಕೆಲವು ವೈಶಿಷ್ಟ್ಯತೆಗಳು ಇರಲಿವೆ ಎಂದು ಬ್ಯಾಂಕ್ ಮೂಲ ತಿಳಿಸಿದೆ.
ಕಳೆದ ವರ್ಷ 500 ರೂ, 1000 ರೂಪಾಯಿ ನೋಟುಗಳ ಅಪಮೌಲ್ಯೀಕರಣವಾದ ಬಳಿಕ ಆರ್ಬಿಐ ಹೊಸ ಮಾದರಿಯಲ್ಲಿ 10 ರೂ, 50, 500 ರೂಪಾಯಿಗಳ ನೋಟನ್ನು ಮುದ್ರಿಸಿದೆ. ಹಾಗೇ 200 ರೂ. ಮತ್ತು 2000 ರೂಪಾಯಿಗಳ ನೋಟುಗಳೂ ಚಾಲ್ತಿಯಲ್ಲಿ ಬಂದಿವೆ. 2016ರ ನವೆಂಬರ್ನಿಂದ ಈ ಹೊಸರೂಪದ ನೋಟುಗಳು ಚಾಲ್ತಿಯಲ್ಲಿ ಬಂದಿವೆ. ಹಳೇ ನೋಟುಗಳಿಗೆ ಹೋಲಿಸಿದರೆ ಇವುಗಳ ವಿನ್ಯಾಸ, ಅಳತೆಯಲ್ಲಿ ತುಂಬ ವ್ಯತ್ಯಾಸವಿದೆ.
ಈಗ 20 ರೂಪಾಯಿ ನೋಟು ಕೂಡ ಶೀಘ್ರದಲ್ಲೇ ಹೊಸದಾಗಿ ಚಾಲ್ತಿಯಲ್ಲಿ ಬರಲಿದೆ. 2016ರ ಮಾರ್ಚ್ 31ರಲ್ಲಿ ಸುಮಾರು 4.92 ಬಿಲಿಯನ್ಗಳಷ್ಟು 20 ರೂಪಾಯಿ ನೋಟುಗಳ ಪ್ರಸರಣವಿತ್ತು. 2018ರ ಮಾರ್ಚ್ನಲ್ಲಿ ಪ್ರಸರಣ ದ್ವಿಗುಣಕ್ಕೂ ಹೆಚ್ಚಾಗಿದ್ದು, 10 ಬಿಲಿಯನ್ ನೋಟುಗಳು ಸರ್ಕ್ಯೂಲೆಟ್ ಆಗುತ್ತಿವೆ ಎಂದು ಬ್ಯಾಂಕ್ ದಾಖಲೆ ತಿಳಿಸಿದೆ.
ಒಟ್ಟಾರೆ ನೋಟುಗಳ ಪ್ರಸರಣದಲ್ಲಿ ಶೇ.9.8ರಷ್ಟು 20 ರೂಪಾಯಿ ನೋಟುಗಳ ಪ್ರಸರಣವಿದೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ