janadhvani

Kannada Online News Paper

ರಾಹುಲ್ ಗಾಂಧಿ ಅಮೇಥಿಯಿಂದಲೇ ಕಣಕ್ಕಿಳಿಯುತ್ತಾರೆ,ಕರ್ನಾಟಕದಿಂದಲ್ಲ- ಸಿದ್ದರಾಮಯ್ಯ

ಬೆಳಗಾವಿ: ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡುವುದಿಲ್ಲ. ಅಮೇಥಿಯಿಂದಲೇ ಕಣಕ್ಕಿಳಿಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್ ಅಸಮಾಧಾನಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಸಮಾಧಾನವಾಗುವುದು ಸಹಜ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ರಮೇಶ್ ಜಾರಕಿಹೊಳಿ ಜತೆ ಮಾತುಕತೆ ನಡೆಸುತ್ತೇನೆ. ಆದರೆ ಅವರು ಸಿಗುತ್ತಿಲ್ಲ ಎಂದರು.

error: Content is protected !! Not allowed copy content from janadhvani.com