janadhvani

Kannada Online News Paper

ಕನೆಕ್ಟ್-2018 ಸಾಮುದಾಯಿಕ ಸಮ್ಮಿಲನ:ಸುಲ್ತಾನರನ್ನು ಸ್ವಾಗತಿಸಲು ಸಜ್ಜಾದ ಸುನ್ನೀ ಪಡೆ

ಕನೆಕ್ಟ್-2018 ಸಾಮುದಾಯಿಕ ಸಮ್ಮಿಲನ

ಗ್ರ್ಯಾಂಡ್ ಮದ್ಹುರ್ರಸೂಲ್ ಪ್ರಭಾಷಣ

ಟೀಂ ಇಸಾಬ ಮತ್ತು ಟೀಂ ಹಸನೈನ್ ತಂಡಗಳ ರ‌್ಯಾಲಿ

✍🏻mkm ಕಾಮಿಲ್ ಸಖಾಫಿ ಕೊಡಂಗಾಯಿ

ಮದ್ಹುರ್ರಸೂಲ್ ಪ್ರಭಾಷಣವನ್ನು ನೆನೆಯುವಾಗ ನೆನಪಿನ ಆಳಕ್ಕೆ ಓಡಿ ಬರುವುದು ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಉಸ್ತಾದರ ಭಾಷಣ ವಾಗಿರುತ್ತದೆ.
ಕಳೆದ ಹಲವು ವರ್ಷಗಳಿಂದ ಪವಿತ್ರ ರಬೀಉಲ್ ಅವ್ವಲ್ ತಿಂಗಳಲ್ಲಿ ಕೇರಳದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಅವರ ವಿಶೇಷವಾದ ಮದ್ಹುರ್ರಸೂಲ್ ಪ್ರಭಾಷಣ ಕಾರ್ಯಕ್ರಮಕ್ಕೆ ಸೇರುವ ಜನಸಾಗರವನ್ನು ನಿಯಂತ್ರಿಸಲು ಕೂಡ ಅಸಾಧ್ಯವಾಗುವ ಸನ್ನಿವೇಶ ಉಂಟಾಗುತ್ತದೆ.

ಪ್ರಸಕ್ತ ಸಾಲಿನಿಂದ ಅಂತಹ ಸೌಭಾಗ್ಯವು ಕನ್ನಡಿಗರಿಗೂ ಲಭಿಸುತ್ತಿರುವುದು ಸಂತೋಷದ ಕಾರ್ಯವಾಗಿದೆ. ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ಯುವಜನರ ಒಕ್ಕೂಟವಾದ ಸುನ್ನೀ ಯುವಜನ ಸಂಘದ ಅಧೀನದಲ್ಲಿ ಈ ವರ್ಷದಿಂದ ಪ್ರತೀ ರಬೀಉಲ್ ಅವ್ವಲ್ ತಿಂಗಳಲ್ಲಿ ಕನ್ನಡ ನಾಡಿನಲ್ಲಿ ಕೂಡ ಸುಲ್ತಾನುಲ್ ಉಲಮಾರ ಮದ್ಹುರ್ರಸೂಲ್ ಪ್ರಭಾಷಣ ನಡೆಯಲಿದ್ದು, ಸುನ್ನಿಗಳ ಬಹುಕಾಲದ ಕನಸು ನನಸಾಗುವತ್ತ ಹೆಜ್ಜೆಯಿಟ್ಟಿದೆ.

ಅವರ ಪ್ರಭಾಷಣವೆಂದರೆ ಅದು ಎಂತಹವರು ಕೂಡ ಇಷ್ಟ ಪಡುವ ಕಾರ್ಯವಾಗಿದೆ. ಕೇಳುಗರನ್ನು ಆವೇಶದ ತುತ್ತ ತುದಿಗೆ ತಲುಪಿಸುವ ಸುಲ್ತಾನರ ಭಾಷಣವನ್ನು ಮನದಟ್ಟು ಮಾಡಲು ಭಾಷೆ ಯಾವುದೇ ತೊಡಕಾಗುವುದಿಲ್ಲ. ದೇಶ-ವಿದೇಶಗಳಲ್ಲಿ ಅವರ ಭಾಷಣಕ್ಕಾಗಿ ಜನರು ಹಾತೊರೆಯುವುದನ್ನು ಕಾಣುವಾಗ ಇದನ್ನು ಮನದಟ್ಟು ಮಾಡಲು ಸಾಧ್ಯವಾಗದಿರಲಾಗದು. ವಿಜ್ಞಾನದ ಎಲ್ಲಾ ಶಾಖೆಗಳಲ್ಲೂ ಅಗ್ರಗಣ್ಯರಾದ ಅವರು, ಬಹು ಭಾಷಾ ವಿದ್ವಾಂಸರೆಂಬುವುದನ್ನು ಅಂಗೀಕರಿಸದವರಿಲ್ಲ.

ಪವಿತ್ರ ಅಹ್ಲುಸ್ಸುನ್ನದ ನೈಜ ಹಾದಿಯನ್ನು ಜನರಿಗೆ ತಿಳಿಸಿಕೊಡಲು ಅವರು ನಡೆಸಿದ ಸಂವಾದ, ಮುಖಾಮುಖಿ ಮತ್ತು ಭಾಷಣಗಳನ್ನು ಎಣಿಸಿ ಮುಗಿಸಲಾಗದು. ಬರಹ ರಂಗದಲ್ಲೂ ಪ್ರತ್ಯೇಕ ಶಕ್ತಿಯನ್ನು ಪಡೆದ ಅವರ ನೂರಾರು ಗ್ರಂಥಗಳು ಈಗಾಗಲೇ ಹಲವು ಭಾಷೆಗಳಲ್ಲಿ ಪ್ರಕಾಶನದ ಬೆಳಕು ಕಂಡಿದೆ.
2018 ಡಿಸೆಂಬರ್ 3 ಸೋಮವಾರದಂದು ಕನ್ನಡ ನಾಡಿನ ಪ್ರಮುಖ ಜಿಲ್ಲಾ ಕೇಂದ್ರವಾದ ಮಂಗಳೂರು ನೆಹರೂ ಮೈದಾನದಲ್ಲಿ ಸುಲ್ತಾನುಲ್ ಉಲಮಾರ ಮದ್ಹುರ್ರಸೂಲ್ ಪ್ರಭಾಷಣ ನಡೆಯಲಿದೆ. ಜನರೆಲ್ಲರೂ ಈಗಾಗಲೇ ಆವೇಶದಿಂದ ಆ ಕಾರ್ಯಕ್ರಮದ ಸಮಯಕ್ಕಾಗಿ ಕಾಯುತ್ತಿದ್ದಾರೆ.

ಆ ದಿನ ಬೆಳಿಗ್ಗೆ 10 ಗಂಟೆಗೆ ನಡೆಯುವ 11 ಜೋಡಿಯ ಸಾಮೂಹಿಕ ವಿವಾಹದೊಂದಿಗೆ ಆರಂಭವಾಗುವ ಕಾರ್ಯಕ್ರಮವು 2 ಗಂಟೆಗೆ ಎಸ್ ವೈ ಎಸ್ ನ ಟೀಂ ಇಸಾಬ ಮತ್ತು ಎಸ್ಎಸ್ಎಫ್ ನ ಟೀಂ ಹಸನೈನ್ ಸದಸ್ಯರ ಚಿತ್ತಾಕರ್ಷಕ ರ‌್ಯಾಲಿ ನೋಡುಗರ ಕಣ್ಸೆಳೆಯಲಿದೆ.
ಸಂಜೆಯ ಬಳಿಕ ನಡೆಯುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಲ್ಲಿ ಹಲವಾರು ಪ್ರಖ್ಯಾತ ವಿದ್ವಾಂಸರು, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.
ಬದುಕಿನಲ್ಲಿ ಅಪೂರ್ವವಾಗಿ ಸಿಗುವ ಇಂತಹ ಕಾರ್ಯಕ್ರಮಗಳನ್ನು ಮಿಸ್ ಮಾಡದಿರುವುದು ಜಾಣ ನಡೆಯೆನ್ನದಿರಲಾಗದು..!

error: Content is protected !! Not allowed copy content from janadhvani.com