ವಿಟ್ಲ : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ [ರಿ] SSF ಕೊಡಂಗಾಯಿ ಶಾಖಾ ಸಮಿತಿಯ ವಾರ್ಷಿಕ ಕೌನ್ಸಿಲ್ ಸಭೆಯು ಕೊಡಂಗಾಯಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು.
ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಕೆ.ಅಬ್ದುಲ್ ಲತೀಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಡಿವಿಷನ್ ಕಾರ್ಯದರ್ಶಿ ಅಶ್ಫಾಕ್ ಟಿಪ್ಪುನಗರ ಉದ್ಘಾಟಸಿದರು. SSF ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ ಹಾಜೀ ಸಲೀಂ ಬೈರಿಕಟ್ಟೆ ಸಂಘಟನಾ ತರಗತಿ ನಡೆಸಿದರು.
ಸಭೆಯಲ್ಲಿ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಎಂ.ಕೆ.ಅಬ್ದುಲ್ ರಝಾಖ್ ಕೊಡಂಗಾಯಿ, ಉಪಾಧ್ಯಕ್ಷರುಗಳಾಗಿ ಡಿ.ಎ.ಮುಹಮ್ಮದ್ ಅಶ್ರಫ್ ಹಾಗೂ ಇಲ್ಯಾಸ್ ಕರ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಮೀರ್ ಕರ್ಕಳ, ಕಾರ್ಯದರ್ಶಿಗಳಾಗಿ ನಿಝಾಂ.ಬಿಕ್ನಾಜೆ ಹಾಗೂ ಎಂಕೆ ಮುಹಮ್ಮದ್ ರಮೀಝ್ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಸಲೀಂ ಪಿ.ಯವರನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳನ್ನು ಒಳಗೊಂಡಂತೆ 17 ಮಂದಿ ಸದಸ್ಯರ ಕಾರ್ಯಾಕಾರಿ ಸಮಿತಿಯನ್ನು ರಚಿಸಲಾಯಿತು.ಕಾರ್ಯಕ್ರಮದಲ್ಲಿ ವಿಟ್ಲ ಸೌತ್ ಸೆಕ್ಟರ್ ಅಧ್ಯಕ್ಷರಾದ ಸಿ.ಹೆಚ್.ಅಬ್ದುಲ್ ಖಾದರ್, ಸೆಕ್ಟರ್ ನಾಯಕರಾದ ಕಲಂದರ್ ಕಾಂತಡ್ಕ, ಫಾರೂಖ್ ಕಡಂಬು, ಶರೀಫ್ ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎಂ.ಕೆ.ತಮೀಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಶಮೀರ್.ಕೆ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಶ್ವೇತ ಸಾಗರವಾದ ಅರಫಾ ಮಹಾ ಸಂಗಮ “ಪೈಗಂಬರ್ ﷺ ಅವರ ವಿದಾಯ ಭಾಷಣ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ