janadhvani

Kannada Online News Paper

ಪ್ರವಾದಿ ಸಂದೇಶ ಜಗತ್ತಿಗೆ ಮಾದರಿ- ಕೆಸಿಎಫ್ ಮೀಲಾದ್ ಸಮಾವೇಶದಲ್ಲಿ ನೌಫಲ್ ಸಖಾಫಿ ಕಳಸ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ನಾರ್ತ್ ಝೋನ್ ಆಯೋಜಿಸಿದ “ಓ ಸಂದೇಶ ವಾಹಕರೇ ತಮ್ಮೆಡೆಗೆ” ಬ್ರಹತ್ ಮೀಲಾದ್ ಸಮಾವೇಶ ದಿನಾಂಕ 16/11/18 ಶುಕ್ರವಾರ ಸಂಜೆ ದುಬೈ ಅಲ್ ಖಿಸೈಸ್ ಕ್ರೆಸೆಂಟ್ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಉದ್ಘಾಟಸಿದರು.ಮುಖ್ಯ ಪ್ರಭಾಷಕರಾಗಿ ಆಗಮಿಸಿದ ಪ್ರಭಾಷಣ ಪೀಠದ ನವ ಸಾರಥ್ಯ ನೌಫಲ್ ಸಖಾಫಿ ಕಳಸರವರು ಸುದೀರ್ಘವಾಗಿ ಮಾತನಾಡಿ ನೆರೆದ ಪ್ರೇಕ್ಷಕರನ್ನು ಪ್ರವಾದಿ ಪ್ರೇಮದ ಅಲೆಯಲ್ಲಿ ತೇಲಾಡಿಸಿದರು. ದಾರ್ಶನಿಕರು, ಆಧುನಿಕ ವಿಜ್ಞಾನಿಗಳು ಪ್ರವಾದಿಯವರ ಜೀವನ ಸಂದೇಶಗಳನ್ನು ತನ್ನ ಅವಿಷ್ಕಾರಗಳಲ್ಲಿ ಪಾಲಿಸುತ್ತಿದ್ದರು ಮತ್ತು ಪ್ರವಾದಿಯವರ ಸಂದೇಶಗಳನ್ನು ಜಗತ್ತು ಅನುಸರಿಸಬೇಕು ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಫೀಕ್ ಅಹ್ಮದ್ ಮಾಜಿ ಶಾಸಕರು ತುಮಕೂರು ಮಾತನಾಡಿ ಐದು ವರ್ಷಗಳಲ್ಲಿ ಕೆ.ಸಿ.ಎಫ್ ನಡೆಸಿದ ಶ್ಲಾಘನೀಯ ಸೇವೆಗಳನ್ನು ಅಭಿನಂದಿಸಿದರು.ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ, ಸೇವೆಯಲ್ಲಿ ಸಂಘಟನೆಗಳು ತೊಡಗಿಕೊಂಡರೆ ಮಾತ್ರ ಸುಂದರ ಸಮಾಜವನ್ನು ಕಟ್ಟಬಹುದು ಎಂದು ತಮ್ಮ ಮಾತಿನಲ್ಲಿ ಸೇರಿಸಿಕೊಂಡರು.ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಲಬಹುಮಾನ್ಯ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಕೂರತ್ ದುವಾಶೀರ್ವಚನಗೈದರು.

ವೇದಿಕೆಯಲ್ಲಿ ಶೈಖ್ ಸಲಾಹ್ ಮೂಸ ಹಸನ್ ಅಲ್ ಮದನಿ,ಡಾ ಎಂ ನಝೀರ್ ತುಮಕೂರು,ಸಯ್ಯಿದ್ ಕಣ್ಣವಂ ತಂಙಲ್, ಅಬ್ದುಲ್ ಜಲೀಲ್ ನಿಝಾಮಿ, ಅನ್ವರ್ ನೆಲ್ಲಿಕುನ್ನು, ಇಕ್ಬಾಲ್ ಸಿದ್ದಕಟ್ಟೆ, ರಶೀದ್ ಕೈಕಂಬ,ಅಶ್ರಫ್ ಹಾಜಿ ಅಡ್ಯಾರ್, ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರ್, ಇಸ್ಮಾಯಿಲ್ ಸಅದಿ ಮಾಚಾರ್ ಉಪಸ್ಥಿತರಿದ್ದರು.ಇಕ್ಬಾಲ್ ಕಾಜೂರ್, ಝೈನುದ್ದೀನ್ ಹಾಜಿ ಬೆಳ್ಳಾರೆ, ರಝಾಕ್ ಹಾಜಿ ಜೆಲ್ಲಿ, ಇಕ್ಬಾಲ್ ಕುಂದಾಪುರ, ಉಸ್ಮಾನ್ ಹಾಜಿ ನಾಪೋಕ್ಲು, ಕರೀಂ ಮುಸ್ಲಿಯಾರ್ ಶಾರ್ಜ, ಬಶೀರ್ ಬೊಳ್ವಾರ್, ಹುಮಯೂನ್ ಬಜ್ಪೆ, ಹಮೀದ್ ಹಾಜಿ ಸ್ಟಾರ್ ಲಿಂಕ್, ರಹಿಮಾನ್ ಸಜಿಪ, ಇಬ್ರಾಹಿಮ್ ಹಾಜಿ ಬ್ರೈಟ್,ಮೂಸಾ ಹಾಜಿ ಬಸರ, ಅಬ್ದುಲ್ ಕಾದರ್ ಸಾಲೆತ್ತೂರು, ಸಹಿತ ಎಲ್ಲಾ ಝೋನ್ ನಾಯಕರು ಮುಖಂಡರುಗಳು ಭಾಗವಹಿಸಿದ್ದರು.ಕಾರ್ಯಕ್ರಮಕ್ಕೆ ಮೊದಲು ಅಬ್ದುಲ್ ಅಝೀಝ್ ಲತೀಫಿಯವರ ನೇತ್ರತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಕೆಸಿಎಫ್ ಸೌತ್ ಝೋನ್ ನೇತೃತ್ವದಲ್ಲಿ ಬುರ್ದಾ ಆಲಾಪನೆ ಮತ್ತು ದಫ್ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಓರ್ವರಿಗೆ ಉಚಿತ ಉಮ್ರಾದ ಅವಕಾಶವನ್ನು ಇಸ್ಮಾಯಿಲ್ ಸಅದಿ ಮಾಚಾರ್ ಪಡೆದುಕೊಂಡರು. ದಿನಾಂಕ 2/11/18ರಂದು ಝೋನ್ ಅಧೀನದ ಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನ ಗಳಿಸಿದ ನಖೀಲ್ ಸೆಕ್ಟರ್, ದ್ವಿತೀಯ ಸ್ಥಾನ ಗಳಿಸಿದ ನೈಫ್ ಸೆಕ್ಟರ್ಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.ಕೆಸಿಎಫ್ ಸೌತ್ ಝೋನ್ ಹೊರತಂದ ಮೀಲಾದ್ ವಿಶೇಷ ಪುರವಣಿ ಬಹುಮಾನ್ಯ ಅಸ್ಸಯ್ಯಿದ್ ಕೂರತ್ ತಂಙಲ್ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.ಝೋನ್ ಕಾರ್ಯದರ್ಶಿ ಹಂಝ ಎಮ್ಮೆಮಾಡು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಖಲಂದರ್ ಕಬಕ ಸ್ವಾಗತಿಸಿ ಹಮೀದ್ ಸಖಾಫಿ ಧನ್ಯವಾದಗೈದರು ನಿಝಾಂ ಮದನಿ ಅಜ್ಮಾನ್ ಕಾರ್ಯಕ್ರಮ ನಿರೂಪಿಸಿದರು.ಕೆಸಿಎಫ್ ನೋರ್ತ್ ಝೋನ್ ರೈಟ್ ಟೀಮ್ ಸ್ವಯಂಸೇವಕರ ಕಾರ್ಯ ನಿರ್ವಹಿಸಿದರು

 

 

 

ವರದಿ ಖಲಂದರ್ ಕಬಕ

error: Content is protected !! Not allowed copy content from janadhvani.com