ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ಕನೆಕ್ಟ್- 2018 ಪ್ರಚಾರ ಸಭೆಯು ಮನಮ್ ಸೊಹಾರ್ ಹೋಟೆಲ್ ಪಲಜ್ ನಲ್ಲಿ ಝೋನ್ ಅಧ್ಯಕ್ಷ ಆರಿಫ್ ಮದಕ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಡಿಸೆಂಬರ್ 3 ರಂದು KCF,SSF,SYS ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಜರುಗಲಿರುವ ಆದರ್ಶ ವಿವಾಹ, ಮೀಲಾದ್ ಜಾಥಾ, ಗ್ರಾಂಡ್ ಹುಬ್ಬುರಸೂಲ್ ಕಾನ್ಫರೆನ್ಸ್ ಗಳನ್ನೊಳಗೊಂಡ ಸಾಮುದಾಯಿಕ ಸಮ್ಮಿಲನ ಕನೆಕ್ಟ್ 2018, ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಒಮಾನ್ ಗೆ ಪ್ರಥಮಬಾರಿಗೆ ಆಗಮಿಸಿದ SSF ಕರ್ನಾಟಕ ರಾಜ್ಯ ಸಮಿತಿ ಸದಸ್ಯರು, ಕನೆಕ್ಟ್ ಮಾಸ್ ಮ್ಯಾರೇಜ್ ಇದರ ಕೊಡಗು ಜಿಲ್ಲಾ ಉಸ್ತುವಾರಿ ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ ಇವರು ಸಭೆಯಲ್ಲಿ ಕರೆ ನೀಡಿದ್ದಾರೆ. ಸಭೆಯಲ್ಲಿ ಕೆಸಿಎಫ್ ಒಮಾನ್ ಕಮಿಟಿಯ ಸದಸ್ಯರಾದ ಸಿದ್ದೀಕ್ ಮಾಂಬ್ಲಿ ಸುಳ್ಯ, ಇಕ್ಬಾಲ್ ಎರ್ಮಾಳ್, ಅಶ್ರಫ್ ಭಾರತ್ ಸುಳ್ಯ ಕೆಸಿಎಫ್ ಸೊಹಾರ್ ಝೋನ್ ಸದಸ್ಯರಾದ ಸಾದಿಕ್ ಕಾಟಿಪಳ್ಳ, ಅಶ್ರಫ್ ಕುತ್ತಾರ್, ಮುನೀರ್ ಕುತ್ತಾರ್, ಸಿರಾಜುದ್ದೀನ್ ಮುಈನಿ ಕೈಕಂಬ, ಅಝೀಝ್ ಉಪ್ಪಳ, ಶಪೀಖ್ ಎಲಿಮಲೆ ಸುಳ್ಯ, ಮುಶ್ತಾಕ್ ಕುಂದಾಪುರ, ರಝ್ಝಾಖ್ ಬೆಳ್ಳಾರೆ, ಅಝೀಝ್ ಬಜ್ಫೆ, ಝಾಕಿರ್ ಕಾವೂರು, ಹೈದರ್ ಬಂಟ್ವಾಳ ಇವರು ಉಪಸ್ಥಿತರಿದ್ದರು.