janadhvani

Kannada Online News Paper

ರಫೀಖ್ ಸಖಾಫಿ ಉಸ್ತಾದರ ಅನುಸ್ಮರಣಾ ಸಂಗಮ

ಮಲಪ್ಪುರಂ: ಕರ್ನಾಟಕ ರಾಜ್ಯ ಸಮಿತಿ ಸದಸ್ಯರು ನಿಕಟಪೂರ್ವ ಕೊಡಗು ಜಿಲ್ಲಾ ಅಧ್ಯಕ್ಷರು ಹಾಗೂ ಮರ್ಕಝುಲ್ ಹಿದಾಯ ಕೊಟ್ಟಮುಡಿಯ ಮುದರ್ರಿಸರೂ ಆಗಿದ್ದ ರಫೀಖ್ ಸಖಾಫಿ ಉಸ್ತಾದರ ಅನುಸ್ಮರಣಾ ಸಂಗಮವು ಇಹ್ಯಾಉಸ್ಸುನ್ನ ಅನ್ವಾರಿಗಳ ವತಿಯಿಂದ ಇಹ್ಯಾಉಸ್ಸುನ್ನ ಮಖ್‌ತಬದಲ್ಲಿ ನಡೆಯಿತು.


ಸಯ್ಯಿದ್ ಶರಫುದ್ದೀನ್ ಅಲ್-ಹಾದಿ ಆಲದಂಗಡಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮದಲ್ಲಿ ಮುಹಮ್ಮದ್ ರಾಶಿದ್ ಅನ್ವಾರಿ ಅನುಸ್ಮರಣಾ ಭಾಷಣ ನಡೆಸಿದರು. ಖುರಾನ್ ಪಾರಾಯಣ, ತಹ್ಲೀಲ್ ಸಮರ್ಪಣೆಯ ನಂತರ ಅನ್ವಾರಿ ವಿಂಗ್ ಅಧ್ಯಕ್ಷರಾದ ಸಯ್ಯಿದ್ ಸಮೀಹ್ ಅಲ್-ಹೈದರೂಸಿ ಸಮಾರೋಪ ಪ್ರಾರ್ಥನೆ ನಡೆಸಿದರು.
ಕಾರ್ಯಕ್ರಮದಲ್ಲಿ ಝೈನುದ್ದೀನ್ ಮುಸ್ಲಿಯಾರ್ ಕೈಪಮಂಗಳ, ಹಮೀದ್ ಮುಸ್ಲಿಯಾರ್ ಕಾಸರಗೋಡು, ಓ.ಕೆ ಅನಸ್ ಮುಸ್ಲಿಯಾರ್ ಒದುಕ್ಕುಂಙಲ್, ಯಾಸೀನ್ ಹಿಮಮಿ ಸಂಪ್ಯ, ಜುನೈದ್ ಅನ್ವಾರಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com