janadhvani

Kannada Online News Paper

ಕುವೈತ್ ನಲ್ಲಿ ಅಲ್-ಮದೀನ ಮಂಜನಾಡಿ ಬೆಳ್ಳಿ ಹಬ್ಬದ ಪ್ರಚಾರ ಸಭೆ

ಕರ್ನಾಟಕದ ಅಭಿಮಾನವಾಗಿ ಆತ್ಮೀಯ ನೆರಲಾಗಿ ಮೂಡಿಬಂದು ಸಮಾಜದ ನೊಂದವರ, ನಿರ್ಗತಿಕರ ಆಶಾಕೇಂದ್ರವಾಗಿ, ಶರಫುಲ್ ಉಲಮಾ ಎಂಬ ಸಾತ್ವಿಕ ಉಲಮಾ ಪಾದದಡಿಯಲ್ಲಿ ಬೆಳೆದು ಬಂದಿರುವ ಅಲ್-ಮದೀನಾ

ಕರ್ನಾಟಕದಾದ್ಯಂತ ತನ್ನ ಸಾಂತ್ವನ ಸೇವೆಗಳ ಮೂಲಕವೂ ಹೆಸರುಗಳಿಸಿರುವ ಸಂಸ್ಥೆ ನೂರಾರು ಅನಾಥ, ನಿರ್ಗತಿಕರ ಬಾಳನ್ನು ಬೆಳಗಿಸುವ ಮೂಲಕ ಇಸ್ಲಾಮಿ ಸಂಸ್ಕೃತಿಯ ಬೆಳಕನ್ನು ವಿಶ್ವಾಸಿ ಸಮೂಹಕ್ಕೆ ಪಸರಿಸುವಲ್ಲಿಯೂ ಯಶಸ್ವಿಯಾಗಿದೆ.
ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ.
ಇದರ 25 ನೇ ವರುಷದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಅಲ್-ಮದೀನ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಪ್ರಚಾರ ಸಭೆಯು ದಿನಾಂಕ 02 ನವಂಬರ್ 2018 ರಂದು ಕುವೈತ್ ಸಿಟಿಯಲ್ಲಿರುವ ದಾಸ್ಮಾ ಹಾಲ್ ನಲ್ಲಿ ಮಗ್ರಿಬ್ ನಮಾಝ್ ನ ನಂತರ ಸಮಸ್ತ ಮುಶಾವರ ಅಂಗ,ಅಲ್-ಮದೀನ ಇದರ ಸಾರಥಿ ಬಹುಮಾನ್ಯ ಶರಪುಲ್ ಉಲಮಾ ಶೈಕುನಾ ಅಬ್ಬಾಸ್ ಉಸ್ತಾದರ ನೇತ್ರತ್ವದಲ್ಲಿ,ಅಲ್-ಮದೀನ ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಾವಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇಂದು ಕೇರಳ, ಕರ್ನಾಟಕದಾದ್ಯಂತ ಯುವ ಮನಸ್ಸುಗಳ ಆವೇಶವಾಗಿ, ತನ್ನ ಮಾತುಗಳಲ್ಲಿ ಎಂದೂ ವಿದೇಶದಲ್ಲಿ ದುಡಿಯುವ ಕಾರ್ಯಕರ್ತರಿಗೆ ಪ್ರಾರ್ಥನೆಗಳ ಮೂಲಕ ನೊಂದ ಪ್ರವಾಸಿಗಳ ಸಾಂತ್ವನಿಯಾಗಿ, ಮಕ್ಕಳ, ಹಿರಿಯರ, ಕಿರಿಯರ ಆವೇಶವಾಗಿರುವ ಅಲ್-ಮದೀನಾ ಸಂದೇಶಗಳೊಂದಿಗೆ ವಿಶ್ವಾಸಿ ಸಮೂಹದ ಮುಂದೆ ಆತ್ಮೀಯ ಪ್ರಭಾಷಣದ ಮೂಲಕ ಸಭೆಯನ್ನು ಬಹುಮಾನ್ಯ ನೌಫಲ್ ಸಖಾಫಿ ಕಳಸ ಪ್ರಪ್ರಥಮ ಬಾರಿಗೆ ಕುವೈತ್ ಗೆ ತನ್ನ ಪ್ರಭಾಷಣದ ಮೂಲಕ ನೆರೆದ ಸಭಿಕರನ್ನು ಧನ್ಯಗೊಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಐಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ದಾರಿಮಿ ಉಸ್ತಾದರು ನೆರವೇರಿಸಿದರು.ಜನಾಬ್ ಇಸ್ಮಾಯಿಲ್ ನಾಟೆಕಲ್ ಕಿರಾಹತ್ ಪಟಿಸಿದರು.ಕೆಸಿಎಫ್ ಕುವೈತ್ ರಾಷ್ಟ್ರೀಯ ಅಧ್ಯಕ್ಷ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಆಶಂಸ ಕೋರಿದರು. ವೇದಿಕೆಯಲ್ಲಿ
ಅಲ್-ಮದೀನ ಕುವೈತ್ ಮಾಜಿ ಅಧ್ಯಕ್ಷರಾದ ಅಬುಬಕರ್ ಕಡಂಬು, ಅಲ್ ಮದೀನಾ ದಮ್ಮಾಮ್ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಇಕ್ಬಾಲ್ ಮಲ್ಲೂರು,ಹಾಗೂ ಕೆಸಿಎಫ್, ಐಸಿಎಫ್ ನಾಯಕರು ಉಪಸ್ಥಿತರಿದ್ದರು.ಅಲ್-ಮದೀನ ಕುವೈತ್ ರಾಷ್ಟ್ರೀಯ ಸಮಿತಿ,ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ,ಕೊಡಗು ವೆಲ್ಫೇರ್ ಸಮಿತಿಯ ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಹಾಗೂ ಬಹುಮಾನ್ಯ ನೌಫಳ್ ಸಖಾಫಿ ಕಳಸ ರವರನ್ನು ಸನ್ಮಾನಿಸಲಾಯಿತು.
ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಆತ್ಮೀಯ ಸಂದೇಶ ಹಾಗೂ ಭಕ್ತಿ ನಿರ್ಭಯ ದುವಾದೊಂದಿಗೆ ವೇದಿಕೆ ಸಾಕ್ಷಿಯಾಯಿತು.
ಪ್ರಧಾನ ಕಾರ್ಯದರ್ಶಿ ಜನಾಬ್ ಮೂಸ ಇಬ್ರಾಹಿಮ್ ಸ್ವಾಗತಿಸಿದರು.ಜನಾಬ್ ಝಕ್ರಿಯಾ ಆನೆಕಲ್ ಧನ್ಯವಾದಗೈದರು.ಕೆಸಿಎಫ್ ಅಂತರರಾಷ್ಟ್ರೀಯ ನಾಯಕ ಬಹುಮಾನ್ಯ ಹುಸೈನ್ ಎರ್ಮಾಡ್ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com