janadhvani

Kannada Online News Paper

ಸುಂಟಿಕೂಪ್ಪದಲ್ಲಿ ಎಸ್ಸೆಸ್ಸೆಫ್ ಯುನಿಟ್ ಸಮ್ಮೇಳನ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ರಾಜ್ಯ ಸಮಿತಿಯ ನಿರ್ದೇಶನದಂತೆ ರಾಜ್ಯದ ಪ್ರತಿ ಯುನಿಟ್ ಗಳಲ್ಲಿಯೂ ಯುನಿಟ್ ಸಮ್ಮಳನಗಳು ನಡೆಯುತ್ತಿದ್ದು, ಅದರಂತೆ ಸುಂಟಿಕೂಪ್ಪದಲ್ಲಿ ನಡೆಸಲಾಯಿತು. 21-10-2018 ರಂದು ನಡೆದ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಖತೀಬರಾದ ರಫೀಕ್ ಸಅದಿಯವರು ಅದ್ಯಕ್ಷತೆ ವಹಿಸಿದರು. ಕಮರುದ್ದಿನ್ ಅನ್ವಾರಿ ಅಸ್ಸಖಾಫಿಯವರ ಬುರ್ದಾ ಮಜ್ಲಿಸ್ ನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮುಹಮ್ಮದ್ ಶಾಫೀ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿ ರವರು ಪ್ರಸ್ತಾವಿಕ ಭಾಷಣ ಮಾಡಿದರು.

ಕೊಡಗು ಜಿಲ್ಲಾ ಎಸ್ ಎಂ ಎ ಅಧ್ಯಕ್ಷರಾದ ಅಬ್ದುಲ್ ಲತೀಫ್ ರವರು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾ ಎಸ್ಸೆಸ್ಸಫ್ ಸಂಘಟನೆಯು ಯುವಕರಿಗೆ ನೈತಿಕ ಬದುಕಿನೊಂದಿಗೆ ಸಂಪೂಣ೯ ಧಾಮಿ೯ಕ ಚೌಕಟ್ಟಿನೊಳಗೆ ಬದುಕಲು ಪ್ರೇರಣೆಯಾಗುತ್ತಿದೆ ಎಂದರು. ಸಮ್ಮೇಳನದ ಧ್ಯೇಯ ವಾಕ್ಯ ‘ಯೌವ್ವನ ಮರೆಯಾಗುವ ಮುನ್ನ’ ಎಂಬ ವಿಷಯದ ಕುರಿತು ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಷೀದ್ ಝೈನಿ ಅಲ್ ಕಾಮಿಲ್ ಕಕ್ಕಿಂಜೆರವರಿಂದ ಪ್ರೌಢೋಜ್ವಲವಾದ ಭಾಷಣ ನಡೆಯಿತು. ಕಾರ್ಯಕ್ರಮದಲ್ಲಿ ಅಲಿ.ಇಬ್ರಾಹೀಂ.ಉಮ್ಮರ್ ಮಾಷ್ಟರ್.ಸ್ವಾದಿಕ್.ಸಿದ್ದಿಕ್ ಉಪಸ್ಥಿತರಿದ್ದರು. ರಝಾಕ್ ಸಅದಿ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com