janadhvani

Kannada Online News Paper

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “EXPLORER” ವಿದ್ಯಾರ್ಥಿ ಮ್ಯಾಗಝಿನ ಬಿಡುಗಡೆ ಕಾರ್ಯಕ್ರಮ

 ಉಪ್ಪಿನಂಗಡಿ : “ಇಂದು ಸಾಮಾಜಿಕ ಮೌಲ್ಯಗಳ ಬಗ್ಗೆ ಜಾಗೃತಿ ಹಾಗೂ ಸತ್ಯದ ಅನ್ವೇಷಣೆಯನ್ನು ದಿನ ಪತ್ರಿಕೆಗಳು ಹಾಗೂ ಮ್ಯಾಗಝಿನ್ ಗಳು ಮಾಡುತ್ತಿವೆ ಹಾಗಾಗಿ ವಿದ್ಯಾರ್ಥಿಗಳು ಅವುಗಳನ್ನು ಓದುವ ಅಭ್ಯಾಸವನ್ನು ಬೆಳೆಸಬೇಕು, ಅಲ್ಲದೇ ಮ್ಯಾಗಝಿನ್ ಮತ್ತು ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಈ ರೀತಿಯ ಮ್ಯಾಗಝಿನ್ ಗಳನ್ನು ಹೊರತರುತ್ತಿರುವುದು ಶ್ಲಾಘನೀಯ” ಎಂದು ವಾರ್ತಾಭಾರತಿ ದೈನಿಕ ಇದರ ಬ್ಯೂರೋ ಮುಖ್ಯಸ್ಥರಾದ ಶ್ರೀ.ಪುಷ್ಪರಾಜ್.ಬಿ ಎನ್ ರವರು ಹೇಳಿದರು.

ಇವರು ಸ.ಪ್ರ.ದ.ಕಾಲೇಜು, ಉಪ್ಪಿನಂಗಡಿ ಇಲ್ಲಿ ದಿನಾಂಕ 17 ಅಕ್ಟೋಬರ್ 2018 ರಂದು ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗ ವತಿಯಿಂದ, ಐ.ಕ್ಯೂ.ಎ.ಸಿ.ಘಟಕ ಸಹಯೋಗದೊಂದಿಗೆ “EXPLORER” ವಿದ್ಯಾರ್ಥಿ ಮ್ಯಾಗಝಿನ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನೆರೆದ ಸರ್ವರನ್ನು  ಅಂತಿಮ ಬಿ.ಬಿ.ಎ ತರಗತಿಯ ವಿದ್ಯಾರ್ಥಿನಿ ದಿವ್ಯಶ್ರೀ ರವರು ಸ್ವಾಗತಿಸಿದರು.

 ನಂತರ ಮುಖ್ಯ ಅತಿಥಿಗಳು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ವಿಶೇಷವಾಗಿ ಉದ್ಘಾಟಿಸಿದರು. ನಂತರ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ.ಅಹಮ್ಮದ್.ಎಸ್.ಎಂ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು…ನಂತರ ಮುಖ್ಯ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಸಮ್ಮುಖದೊಂದಿಗೆ ಮ್ಯಾಗಝಿನ ಬಿಡುಗಡೆ ಮಾಡಿದರು.ನಂತರ ಅಂತಿಮ ಬಿ.ಕಾಂ ತರಗತಿಯ ವಿದ್ಯಾರ್ಥಿ ಸಿದ್ದೀಕ್ ರವರು ಮುಖ್ಯ ಅತಿಥಿಗಳ ಕಿರುಪರಿಚಯವನ್ನು ಮಾಡಿಕೊಟ್ಟರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜ್ ಪ್ರಾಂಶುಪಾಲರಾದ ಶ್ರೀ.ಸುಬ್ಬಪ್ಪ ಕೈಕಂಬ ರವರು ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ “ನಮಗೆ ಅನುಭವಕ್ಕೆ ಬಂದ ವಿಷಯಗಳು ಬರಹರೂಪಕ್ಕೆ ಬರಬೇಕು ಅಲ್ಲದೇ ಕಲೆ ಮತ್ತು ಬರಹ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾಧನೆ ನಿರಂತರವಾಗಿರಬೇಕು” ಎಂದು ಹೇಳಿ ಮ್ಯಾಗಝಿನ್ ಕುರಿತಾಗಿ ಶುಭಹಾರೈಸಿದರು.

ಕಾಲೇಜ್ ವತಿಯಿಂದ ಮುಖ್ಯ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಬಸವರಾಜೇಶ್ವರಿ ಹಾಗೂ        ಪ್ರೊ.ಉಸ್ಮಾನ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಅಂತಿಮ ಬಿ.ಕಾಂ ತರಗತಿಯ ಸ್ನೇಹ ರವರು ವಂದಿಸಿ, ಸಮದ್ ರವರು ಕಾರ್ಯಕ್ರಮವನ್ನು

ವರದಿ: ಸಿದ್ದೀಕ್ ಜಾರಿಗೆಬೈಲು

error: Content is protected !! Not allowed copy content from janadhvani.com