ಕ್ಯಾಲಿಕಟ್: ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಮರ್ಕಝ್ ನಾಲೇಡ್ಜ್ ಸಿಟಿ ನಡೆಸುವ ಮೂರು ದಿನಗಳ ಅಂತರರಾಷ್ಟ್ರೀಯ ಯುವ ಕಾನ್ಫರೆನ್ಸ್ ಅಕ್ಟೋಬರ್ 19 ರಿಂದ 21 ರವರೆಗೆ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ನಡೆಯಲಿದೆ. ಅಮೇರಿಕಾ, ಯುರೋಪ್, ದಕ್ಷಿಣ ಪೆಸಿಫಿಕ್, ಮಧ್ಯಪ್ರಾಚ್ಯ, ಮಧ್ಯ ಏಷ್ಯಾ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಿಂದ ಅಂತರರಾಷ್ಟ್ರೀಯ ಯುವ ಮುಖಂಡರು, ಶೈಕ್ಷಣಿಕತಜ್ಞರು, ರಾಜತಾಂತ್ರಿಕರು ಮತ್ತು ರಾಜಕಾರಣಿಗಳು ಸೇರಿದ ಹಲವು ಉನ್ನತ ಬಿರುದಾಂಕಿತ ಗಣ್ಯರು ಮೂರು ದಿನಗಳ ಕಾನ್ಫರೆನ್ಸನ್ನು ಮುನ್ನಡೆಸಲಿದ್ದಾರೆ. ದಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಮ್ಮೇಳನದ ಲೋಗೋ ಬಿಡುಗಡೆ ಮಾಡಿದರು. ಹೊಸ ಕಲ್ಪನೆಗಳು ಹಾಗೂ ಹೊಸ ಯೋಜನೆಗಳ ಮೂಲಕ ಯುವ ಸಮೂಹವನ್ನು ಹೊಸ ಜಗತ್ತಿನೆಡೆಗೆ ಕ್ರಿಯಾತ್ಮಕವಾಗಿ ಮುನ್ನಡೆಸುವ ಸಲುವಾಗಿ ವಿಶ್ವಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸುವ ಈ ಸಮ್ಮೇಳನ ಬೆಳೆದು ಬರುವ ಯುವ ಸಮೂಹಕ್ಕೆ ಪ್ರಚೋದನೆ ನೀಡಲಿದೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
ಸಮ್ಮೇಳನವು ಯುನೈಟೆಡ್ ನೇಷನ್ಸ್ ಅಕಾಡೆಮಿಕ್ ಇಂಪ್ಯಾಕ್ಟ್ (ವಿಶ್ವ ಸಂಸ್ಥೆಯ ಅಡಿಯಲ್ಲಿರುವ ಒಂದು ಸಂಘಟನೆ), ಯುರೋಪಿಯನ್ ಯೂತ್ ಅವಾಡ್ರ್ಸ್ (ಯೂರೋಪಿನಲ್ಲಿ ಯುವಜನಾಭಿವೃದ್ಧಿಗಿರುವ ಸಂಘಟನೆ) ಮತ್ತು ಗುಲ್ಮೋಹರ್ ಫೌಂಡೇಶನ್ (ಸುಸ್ಥಿರ ಅಭಿವೃದ್ಧಿಯ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿರುವ ಭಾರತೀಯ ಸಂಘಟನೆ)ನ ಸಹಯೋಗದಲ್ಲಿ ನಡೆಯಲಿದೆ. ಸಮ್ಮೇಳನದ ವಿವರಗಳು ಮತ್ತು ನೋಂದಣಿ ಸೌಲಭ್ಯಗಳ ಮಾಹಿತಿಗಳು www.muys2018.com ನಲ್ಲಿ ಲಭ್ಯ.