ಕಲೆ ಸಂಸ್ಕೃತಿ ಮತ್ತು ಮೌಲ್ಯಗಳ ಸಮ್ಮಿಲನ ಎಂಬ ಧ್ಯೇಯ ವಾಕ್ಯದೊಂದಿಗೆ ಕೆಸಿಎಫ್ ಕುವೈಟ್ ನ್ಯಾಷನಲ್ ಪ್ರತಿಭೋತ್ಸವ ದಿನಾಂಕ 18.04.2025 ರಂದು ಜುಮಾ ನಮಾಜ್ ನ ನಂತರ ಫರ್ವಾನಿಯ ದ್ವಹಿ ಪ್ಯಾಲೇಸ್ ಸಭಾಂಗಣದಲ್ಲಿ ಕೆಸಿಎಫ್ ಫರ್ವಾನಿಯ ಸೆಕ್ಟರ್ ನ ಮಾಸಿಕ ಸ್ವಲಾತ್ ಹಾಗೂ ಸೌತ್ ಹಾಗೂ ನಾರ್ತ್ ಝೋನ್ ಗಳಲ್ಲಿ ವಿಜೇತರಾದ ಸ್ಪರ್ಧಿಗಳ ಪ್ರತಿಭೋತ್ಸವ ನಡೆಯಿತು.
ಪ್ರತಿಭೋತ್ಸವ ನಿರ್ವಹಣಾ ತಂಡದ ಮುಖ್ಯಸ್ಥರಾದ ಬಹುಮಾನ್ಯ ಶಫೀಕ್ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ಮುಖ್ಯ ತೀರ್ಪುಗಾರರಾಗಿ ಬಹುಮಾನ್ಯ ಬಾದುಶ ಸಖಾಫಿ ಉಸ್ತಾದ್, ಸಹ ತೀರ್ಪುಗಾರರಾಗಿ ಫಾರೂಕ್ ಸಖಾಫಿ, ಇರ್ಷಾದ್ ಸಖಾಫಿ ಹಾಗೂ ಝಕಾರಿಯಾ ಆನೇಕಲ್ ಮತ್ತು ಯಾಕೂಬ್ ಕಾರ್ಕಳ ಉತ್ತಮವಾಗಿ ಪ್ರತಿಭೋತ್ಸವ ನಡೆಸಿಕೊಟ್ಟರು.
ಸಮಾರೋಪ ಸಮಾರಂಭವು ಕೆಸಿಎಫ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಬಹುಮಾನ್ಯ ಬಾದುಶ ಸಖಾಫಿ ಉಸ್ತಾದರ ಘನ ಅಧ್ಯಕ್ಷತೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಸ್ತಾಫ ಉಳ್ಳಾಲ ಅವರ ಸ್ವಾಗತ ಭಾಷಣ ಬಳಿಕ ಐಸಿ ಸಾಂತ್ವನ ಕಾರ್ಯದರ್ಶಿ ಝಕಾರಿಯಾ ಆನೇಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಐಸಿ ನಾಯಕರಾದ ಜನಾಬ್ ಯಾಕೂಬ್ ಕಾರ್ಕಳ ಆಸಂಶಗೈದರು ಹಾಗೂ ಸೌತ್ ಝೋನ್ ಅಧ್ಯಕ್ಷ ಜನಾಬ್ ಹಸೈನಾರ್ ಮೊಂಟ್ಗೋಳಿ, ನಾರ್ತ್ ಝೋನ್ ಅಧ್ಯಕ್ಷ ಬಹುಮಾನ್ಯ ಖಾಸಿಂ ಉಸ್ತಾದ್ ಬೆಲ್ಮ ಶುಭ ಹಾರೈಸಿದರು. ವೇದಿಕೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಾಂತ್ವನ ಕಾರ್ಯದರ್ಶಿ ಅಬ್ದುಲ್ ಮಾಲಿಕ್ ಸೂರಿಂಜೆ,ಕೆಸಿಎಫ್ ಕುವೈಟ್ ರಾಷ್ಟ್ರೀಯ ಇಹ್ಸಾನ್ ಅಧ್ಯಕ್ಷ ಸೌಕತ್ ಶಿರ್ವ, ನಾರ್ತ್ ಝೋನ್ ಕಾರ್ಯದರ್ಶಿ ಜನಾಬ್ ಇಸ್ಮಾಯಿಲ್ ಕೊಡಗು ಉಪಸ್ಥಿತರಿದ್ದರು.
ಪ್ರತಿಭೋತ್ಸವ ದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ರಾಷ್ಟ್ರೀಯ ಪ್ರತಿಭೋತ್ಸವ ದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಯಿತು. 2025 ರಾಷ್ಟ್ರೀಯ ಪ್ರತಿಭೋತ್ಸವದ ಚಾಂಪಿಯನ್ ಪಟ್ಟವನ್ನ ಸೌತ್ ಝೋನ್ ತನ್ನದಾಗಿಸಿತು. ರನ್ನರ್ ಆಫ್ ನಾರ್ತ್ ಝೋನ್ ಪಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ಕಾರ್ಯದರ್ಶಿ ಜನಾಬ್ ಹೈದರ್ ಉಚ್ಚಿಲ ನೆರವೇರಿಸಿದರು.