ಶಾರ್ಜಾ: ಕೆ.ಸಿ.ಎಫ್ ಶಾರ್ಜಾ ಝೋನ್ ವತಿಯಿಂದ, ತಿಂಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಇದರ ಎರಡನೇ ವಾರ್ಷಿಕ , ಸೆಪ್ಟೆಂಬರ್ 27 ರಂದು ಗುರುವಾರ ರಾತ್ರಿ ಅಲ್ ಖಾನ್ ಅಲ್ ಯಾಸತ್ ಟವರ್ ನಲ್ಲಿ ಬಹು ಅಬ್ದುಲ್ ಅಝೀಝ್ ಸಖಾಫಿ ಕೋಂಡಗೇರಿಯವರ ನೇತ್ರತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಅಸ್ಸಯ್ಯಿದ್ ಇಂಬಿಚ್ಚಿ ಕೋಯ ತಂಙಳ್ ರವರು ಮುಖ್ಯ ಪ್ರಭಾಷಣ ನಡೆಸಿದರು.ಕೆ.ಸಿ.ಎಫ್ ಶಾರ್ಜಾ ಝೋನ್ ಸಂಘಟನೆ ವಿಭಾಗದ ಅಧ್ಯಕ್ಷರಾದ ಬಹು. ಇಬ್ರಾಹಿಂ ಸಖಾಫಿ ಕೆದುಂಬಾಡಿಯವರು ಸ್ವಾಗತ ಭಾಷಣ ನಡೆಸಿದರು.
ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಹಸನ್ ಅಟೋಕ್ಕೋಯ ತಂಙಲ್ ಆದೂರು, ಕೆ.ಸಿ.ಎಫ್ ಯು.ಎ.ಇ ಅಧ್ಯಕ್ಷರಾದ ಬಹು. ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ , ಕೆ.ಸಿ.ಎಫ್ ಶಾರ್ಜ ಝೋನ್ ಕಾರ್ಯದರ್ಶಿ ರಜಬ್ ಮಹಮ್ಮದ್ ಉಚ್ಚಿಲ, ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ರಶೀದ್ ಮದನಿ ಸಂಪ್ಯಾ, ಕಾರ್ಯದರ್ಶಿ ಅಬ್ದುಲ್ ರಝಾಕ್ ಮುಸ್ಲಿಯಾರ್ ಮತ್ತು ಕೆ.ಸಿ.ಎಫ್ ಯ.ಎ.ಇ ರಾಷ್ಟ್ರೀಯ ನಾಯಕರು ಹಾಜರಿದ್ದರು.