janadhvani

Kannada Online News Paper

ಹಜ್ ಯಾತ್ರಾರ್ಥಿಗಳು ಸೌದಿಯಿಂದ ನಿರ್ಗಮಿಸದಿದ್ದಲ್ಲಿ ಕಠಿಣ ಕ್ರಮ

ಜಿದ್ದಾ: ಹಜ್ಜಾಜ್‌ಗಳು ಸೌದಿಯಿಂದ ನಿರ್ಗಮಿಸಲು ವಿಧಿಸಲಾಗಿದ್ದ ಗಡುವು ಮುಕ್ತಾಯದ ನಂತರ ತಪಾಸಣೆಯನ್ನು ಕಠಿಣಗೊಳಿಸಲಾಗಿದೆ. ಸಮಯ ಮುಕ್ತಾಯದ ನಂತರ ಸೌದಿಯಲ್ಲೇ ಉಳಿಯುವುದು ಕಾನೂನುಬಾಹಿರವಾಗಿದ್ದು, ಅದು 100,000 ರಿಯಾಲ್ ದಂಡ ಪಾವತಿಸಬೇಕಾಗುವ ಅಪರಾಧವಾಗಿದೆ ಎಂದು ಹಜ್ ಸಚಿವಾಲಯ ಈ ಹಿಂದೆಯೇ ತಿಳಿಸಿದೆ.
ಈ ವರ್ಷ, 23.8 ಲಕ್ಷ ಯಾತ್ರಿಕರು ಹಜ್ ಕರ್ಮದಲ್ಲಿ ಪಾಲ್ಗೊಂಡಿದ್ದರು. ಹತ್ತು ವರ್ಷಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ವರ್ಷ ಹಜ್ ನಿರ್ವಹಿಸಿದ್ದಾರೆ.

ಈ ವರ್ಷ, ಹಜ್ ನಿರ್ವಹಿಸಲು ಭಾರತದಿಂದ 1,75,025 ಯಾತ್ರಿಗಳು ಆಗಮಿಸಿದ್ದರು. ಇಂಡಿಯನ್ ಹಜ್ ಯಾತ್ರಿಗಳ ಅಂತಿಮ ವಿಮಾನವು ಮದೀನಾದಿಂದ  ಹೊರಟಿದೆ. ನಿಗದಿತ ಸಮಯದೊಳಗೆ, ಹಜ್ ಮಿಷನ್ ಸಂಪೂರ್ಣ ಹಜಾಜ್‌ಗಳನ್ನು ಊರಿಗೆ ತಲುಪಿಸಲು ಸಾಧ್ಯವಾಗಿದೆ.

error: Content is protected !! Not allowed copy content from janadhvani.com