ನೆಕ್ಕಿಲ್:-ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ನೆಕ್ಕಿಲ್ ಶಾಖೆ ವತಿಯಿಂದ, ಕರ್ನಾಟಕದ ಮಣ್ಣಿನಲ್ಲಿ ತನ್ನ 29 ನೇ ವರ್ಷ ಯಶಸ್ವೀ ಪೂರೈಸಿ ಸಪ್ಟೆಂಬರ್ 19 ರಂದು 30 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸವಿನೆನಪಿಗಾಗಿ ನೆಕ್ಕಿಲ್ ಮಸ್ಜಿದ್ ಸಭಾಂಗಣದಲ್ಲಿ ಎಸ್ಸೆಸ್ಷೆಫ್ ನ ಧ್ವಜ ದಿನವನ್ನು ಆಚರಿಲಾಯಿತು.
ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಸಅದಿ ಧ್ವಜಾರೋಹಣಗೈದರು.
ಎಸ್ಸೆಸ್ಸೆಫ್ ದಕ ಜಿಲ್ಲಾ ಸದಸ್ಯರಾದ ಎನ್.ಎಂ.ಶರೀಫ್ ಸಖಾಫಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನೆಕ್ಕಿಲ್ ಸದರ್ ಮುಅಲ್ಲಿಂ ರಫೀಕ್ ಝೈನಿ,ರಫೀಕ್ ಸಅದಿ,ಎಸ್.ವೈ.ಎಸ್ ಅಧ್ಯಕ್ಷ ರಮ್ಲಾನ್ ಹಾಜಿ ಶುಭ ಹಾರೈಸಿದರು.,ಶಾಖಾಧ್ಯಕ್ಷ ಹನೀಫ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಜಮಾಅತ್ ಆಡಳಿತ ಸಮಿತಿ,ಎಸ್.ವೈ.ಎಸ್,ಎ.ವೈ.ಎಫ್.ಎಸ್ಸೆಸ್ಸೆಫ್,ಮಲ್ಜಅ ಸಮಿತಿ, ಎಸ್.ಬಿ.ಎಸ್ ಸದಸ್ಯರು ,ಜಮಾಅತರು ಉಪಸ್ಥಿತರಿದ್ದರು.ಕಾರ್ಯದರ್ಶಿ ಅಶ್ರಫ್ ಮದನಿ ಸ್ವಾಗತಿಸಿ ವಂದಿಸಿದರು.