janadhvani

Kannada Online News Paper

ಸೋಮವಾರಪೇಟೆ ಕರ್ಕಳ್ಳಿ ಶಾಖೆಯಲ್ಲಿ ಎಸ್ಸೆಸ್ಸೆಫ್ ಧ್ವಜದಿನ ಆಚರಣೆ

ಸೋಮವಾರಪೇಟೆ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಇದರ 30 ನೇ ಸ್ಥಾಪನಾ ದಿನದ ನೆನಪಿಗಾಗಿ ಇಂದು ರಾಜ್ಯದೆಲ್ಲಡೆ ಧ್ವಜ ದಿನವನ್ನು ಆಚರಿಸಲಾಯ್ತು. ಸೋಮವಾರಪೇಟೆ ಕರ್ಕಳ್ಳಿ ಶಾಖೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಎಸ್ಸೆಸ್ಸೆಫ್ ಜಿಲ್ಲಾ ನಾಯಕ ಅಝೀಝ್ ಸಖಾಫಿ “ಯುವತ್ವ ಹಸನಾಗಬೇಕಾದರೆ ಧಾರ್ಮಿಕತೆ ಅನಿವಾರ್ಯ,ಉಗ್ರ ವಾದ, ಕೋಮುವಾದ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾದರೆ ಮಾತ್ರ ಸಾಧ್ಯ ಎಂದರು.ದಾರಿ ತಪ್ಪುತ್ತಿರುವ ನ್ಯೂಜನರೇಷನ್ ಯುಗದಲ್ಲಿ ಯುವ ಸಮೂಹಕ್ಕೆ ಮಾದರಿಯಾಗಿದೆ ಎಸ್ಸೆಸ್ಸೆಫ್, ಸಂಘಟನೆಯ ಮೂರು ದಶಕಗಳ ಯಾತ್ರೆಯಲ್ಲಿ ಕೊಲ್ಲಿರಾಷ್ಟ್ರಗಳನ್ನು ಸೇರಿ ಭಾರತದಾದ್ಯಂತ ಲಕ್ಷಗಟ್ಟಲೆ ಯುವಜನತೆಯನ್ನು ಒಳಿತೆನೆಡೆಗೆ ಕೊಂಡೊಯ್ಯಲು ಈ ಸಂಘಟನೆಗೆ ಸಾಧ್ಯವಾಗಿದೆ”ಎಂದು ಅಝೀಝ್ ಸಖಾಫಿ ಹೇಳಿದರು.

ಕಾರ್ಯಕ್ರಮದಲ್ಲಿ ಅಲಿ ಸಖಾಫಿ, ಅಬ್ಬಾಸ್ ಕರ್ಕಳ್ಳಿ ಖಾದರ್ ಕರ್ಕಳ್ಳಿ, ಸ್ವಾದಿಕ್ ಕರ್ಕಳ್ಳಿ ಮುಂತಾದ ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕೊನೆಯಲ್ಲಿ ಮುಹಮ್ಮದ್ ತಫ್ಸೀರ್ ವಂದಿಸಿದರು

error: Content is protected !! Not allowed copy content from janadhvani.com