ವಿಟ್ಲ: SSF ಪೆರುವಾಯಿ ಶಾಖೆಯ ವತಿಯಿಂದ ಇಲ್ಲಿನ ಬದ್ರಿಯಾ ಸ್ಕ್ವೇರ್ ನಲ್ಲಿ ಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ಸ್ಥಳೀಯ ಎಸ್.ವೈ.ಎಸ್ ಉಪಾಧ್ಯಕ್ಷರಾದ ಇಸ್ಮಾಯಿಲ್ ಕಾನರವರು ನೇರವೇರಿಸಿ ಕೊಟ್ಟರು.ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ನಿಕಟ ಪೂರ್ವ ಅಧ್ಯಕ್ಷರಾದ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿಯವರು ಸಂದೇಶ ಭಾಷಣ ಮಾಡಿದರು.ಬದ್ರಿಯಾ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಾನ ಮತ್ತು ಅಲ್ ಅಮೀನ್ ದುಬೈ ಘಟಕ ಕಾರ್ಯದರ್ಶಿ ರಿಯಾಝ್ ಮುಚ್ಚಿರಪದವು ಶುಭಾಶಂಸೆಗೈದರು.
ಕಾರ್ಯಕ್ರಮದಲ್ಲಿ ಪುತ್ತು ಹಾಜಿ ಕಾನ,ಮಹ್ಮೂದ್ ಕಾನ, ಬಾತಿಶ್ ಕಾನ, ಹುಸೈನಾರ್ ಸಹಿತ ಹಲವರು ಸೇರಿ ಮೂವತ್ತು ಧ್ವಜಗಳನ್ನು ಬಾನಿಗೇರಿಸಿದರು. ಸ್ಥಳೀಯ ಎಸ್ಬೀಯಸ್ಸ್ ವಿದ್ಯಾರ್ಥಿಗಳು ಮದ್ಹ್ ಗೀತೆ ಹಾಡಿದರು.
ಪ್ರಾರಂಭದಲ್ಲಿ ಎ.ಪಿ ಮುಹಮ್ಮದ್ ಹಾರಿಸ್ ಹಿಮಮಿ ಸ್ವಾಗತಿಸಿ, ಕೊನೆಯಲ್ಲಿ ಶರೀಫ್ ಮುಚ್ಚಿರಪದವು ಧನ್ಯವಾದ ಸಲ್ಲಿಸಿದರು.