ಕೆಸಿಎಫ್ ಒಮಾನ್ ಗಲ್ಫ್ ಇಶಾರ ಅಭಿಯಾನ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿ ವತಿಯಿಂದ
ಅಚ್ಚ ಕನ್ನಡದ ಸ್ವಚ್ಛಂದ ಪತ್ರಿಕೆ ಗಲ್ಫ್ ಇಶಾರ ಚಂದಾ ಅಭಿಯಾನಕ್ಕೆ ಮಾಝಿನ್(ರ) ಸನ್ನಿದಿಯಲ್ಲಿ ಅಧಿಕೃತವಾಗಿ ಕೆ ಸಿ ಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ರವರು ಕೆಸಿಎಫ್ ಐ ಎನ್ ಸಿ ನೇತಾರ ಇಕ್ಬಾಲ್ ಬೊಲ್ಮಾರ್ ರವರನ್ನು ಪ್ರಥಮ ಚಂದಾದಾರರನ್ನಾಗಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘಟನಾದ್ಯಕ್ಷ ಹಂಝ ಕನ್ನಂಗಾರ್, ಕೆ ಸಿ ಎಫ್ ಒಮಾನ್ ಇಹ್ಸಾನ್ ಕನ್ವೀನರ್ ಝುಬೈರ್ ಸ ಅದಿ ಪಾಟ್ರಕೋಡಿ, ಪ್ರದಾನ ಕಾರ್ಯದರ್ಶಿ ಹನೀಫ್ ಸಅದಿ, ರಾಷ್ಟ್ರೀಯ ಸಮಿತಿ ಸದಸ್ಯರಾದ ಸಾದಿಕ್ ಸುಳ್ಯ, ಗಫ್ಫಾರ್ ನಾವುಂದ, ಶಮೀರ್ ಉಸ್ತಾದ್ ಹೂಡೆ, ಅಕ್ಬರ್ ಉಪ್ಪಳ್ಳಿ, ಆರಿಫ್ ಕೋಡಿ, ಅಯ್ಯೂಬ್ ಕೋಡಿ, ಕಲಂದರ್ ಬಾವ, ಶಾಕಿರ್ ಮೌಲಾನ, ಇಕ್ಬಾಲ್ ಎರ್ಮಾಳ್, ಶಫೀಕ್ ಮಾರ್ನಬೈಲು, ಕಾಸಿಂ ಪೋಯ್ಯತ್ತಬೈಲು ಹಾಗೂ ಝೋನ್, ಸೆಕ್ಟರ್ ಸದಸ್ಯರುಗಳು ಪಾಲ್ಗೊಂಡಿದ್ದರು.

ಗಲ್ಫ್ ಇಶಾರ ಚಂದಾದಾರರ ಅಭಿಯಾನವು ಸಪ್ಟೆಂಬರ್ 15 ರಿಂದ ಅಕ್ಟೋಬರ್ 15ರ ವರೆಗೆ ಒಮಾನಿನಾದ್ಯಂತ ನಡೆಯಲಿದೆ.
ಕೆಸಿಎಫ್ ನ ರಾಷ್ಟ್ರೀಯ ಸಮಿತಿ ಪದಾಧಿಕಾರಿಗಳನ್ನು ಮೊದಲನೇ ಹಂತವಾದ ಪ್ರಥಮ ವಾರದಲ್ಲೇ ಚಂದಾದಾರರನ್ನಾಗಿಸುವುದು.
ಎರಡನೇ ಹಂತವಾದ ದ್ವಿತೀಯ ವಾರದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಚಂದಾದಾರರನ್ನು ನವೀಕರಿಸುವುದು, ಹಾಗೂ ಕೆಸಿಎಫ್ ಸದಸ್ಯತ್ವ ಪಡೆದ ಎಲ್ಲರನ್ನು ಭೇಟಿಯಾಗಿ ಚಂದಾದಾರರಾಗಿಸುವುದು ಮತ್ತು ಮೂರನೇ ಹಂತವಾದ ತೃತೀಯ ವಾರದಲ್ಲಿ ಒಮಾನಿನಾದ್ಯಂತ ಎಲ್ಲಾ ಕನ್ನಡಿಗರನ್ನು ಭೇಟಿಯಾಗಿ, (ಇತರ ಧರ್ಮದವರನ್ನೂ , ಕನ್ನಡ ಸಂಘದ ಕಾರ್ಯಕರ್ತರನ್ನೂ ಹಾಗೂ ಎಲ್ಲಾ ರೀತಿಯ ಆಶಯವಿರುವ ಇತರ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರನ್ನೂ, ನಾಯಕರನ್ನೂ ) ಹಾಗೂ ನಮ್ಮ ಸಹೋದರ ಸಂಘಟನೆಗಳಾದ ಐ.ಸಿ.ಎಫ್, ಆರ್.ಎಸ್.ಸಿ ಮುಂತಾದ ಎಲ್ಲಾ ಸಂಘಟನಾ ನಾಯಕರನ್ನೂ ಕಾರ್ಯಕರ್ತರನ್ನೂ ಭೇಟಿಯಾಗಿ ಗಲ್ಫ್ ಇಶಾರದ ಬಗ್ಗೆ ಅರಿವು ಮೂಡಿಸಿ ಚಂದಾದಾರರನ್ನಾಗಿಸಲಾಗುವುದು.

Leave a Reply

Your email address will not be published. Required fields are marked *

error: Content is protected !!