janadhvani

Kannada Online News Paper

ಉಡುಪಿ ಸೆ.12: ಪ್ರಮುಖ ಸೂಫೀಸಂತರಾದ ಉಸ್ತಾದ್ ಅಬ್ದುಲ್ ಖಾದರ್ ಜಬ್ಬಾರ್ ಮಸ್ತಾನ್ ಮೂಳೂರು ಇಂದು ಸಂಜೆ ವಫಾತ್ ಆದರು.ಅವರಿಗೆ 75 ವರ್ಷ ಪ್ರಾಯವಾಗಿತ್ತು.

ಅಸ್ತಮಿಸಿದ ಅವುಲಿಯಾ ಲೋಕದ ನಕ್ಷತ್ರ

ನಶ್ವರ ಲೋಕದ ಸರ್ವ ಸುಖಾಂಡಂಬರವನ್ನು ಮರೆತು, ಅವುಲಿಯಾ ಲೋಕದಲ್ಲಿ ವಿಹರಿಸಿ, ಸರ್ವಸ್ವವನ್ನೂ ಅಲ್ಲಾಹನಿಗಾಗಿ ವಿನಿಯೋಗಿಸಿ ಸುನ್ನೀ ಕುಟುಂಬವನ್ನು ಶ್ರೀಮಂತಗೊಳಿಸಿದ ಪ್ರಶೋಭಿತ ಸೂಫಿವರ್ಯ ಬಹುಮಾನ್ಯರಾದ ಉಸ್ತಾದ್ ಜಬ್ಬಾರ್ ಮಸ್ತಾನ್ ಮೂಳೂರು ರವರ ವಫಾತ್ ಸುನ್ನೀ ಲೋಕಕ್ಕೆ ತುಂಬಲಾರದ ನಷ್ಟ.

ಅಲ್ಲಾಹನು ಅವರ ಪಾರರ್ತಿಕ ಜೀವನವನ್ನು ಸುಖ ಸಂತೋಷದಿಂದ ಕೂಡಿಡಲಿ ಅಂತ್ಯ ದಿನದವರೆಗೂ ಅವನ ನೂರಾನಿಯತ್ತಿನ ಬೆಳಕು ಅವರ ಖಬರಿನೊಳಗೆ ಬೆಳಗಿಸಿಡಲಿ ಮಗ್ಫಿರತ್ ಮರ್ಹಮತ್ ನೀಡಿ ಅನುಗ್ರಹಿಸಿ ಎಲ್ಲಾ ಅನುಗ್ರಹಗಳಿಂದ ತುಂಬಿದ ಸ್ವರ್ಗೀಯ ಸೌಧದಲ್ಲಿ ಅತ್ಯುನ್ನತ ಪದವಿಯನ್ನು ಅಲ್ಲಾಹನು ಕರುಣಿಸಲಿ. ಅಮೀನ್.

-ಇಸ್ಹಾಕ್ ಸಿ.ಐ. ಫಜಿರ್

error: Content is protected !! Not allowed copy content from janadhvani.com