ಕಲ್ಲಡ್ಕ : SSF ರಾಜ್ಯ ಸಮಿತಿಯ ನಿರ್ದೇಶನದಂತೆ ssf ಕಲ್ಲಡ್ಕ ಸೆಕ್ಟರ್ ಇದರ ಅಧೀನದಲ್ಲಿ ದಿನಾಂಕ 5ರಂದು ” ನಮ್ಮ ಮಕ್ಕಳು ನಮ್ಮವರಾಗಲು”ಜಾಗೃತಿ ಅಭಿಯಾನ ನಡೆಸಲಾಯ್ತು. ಶೈಖುನಾ ಸುರಿಬೈಲ್ ಉಸ್ತಾದರ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತದನಂತರ ಸರ್ಕಳ ನಗರ,ನಿರ್ಬೈಲು ,ಖಂಡಿಗ ಸುರಿಬೈಲು,ಕೊಕ್ಕಾಪುಣಿ ಜಂಕ್ಷನ್ , ಬೋಳಂತೂರು ಮುಂತಾದ ಕಡೆಗಳಲ್ಲಿ ಯುವ ಭಾಷಣಗಾರರಾದ ಸಿದ್ದೀಕ್ ಮುಸ್ಲಿಯಾರ್ ಕುಕ್ಕಾಜೆ (ವಿದ್ಯಾರ್ಥಿ ದಾರುಲ್ ಅಶ್-ಅರಿಯ್ಯ )ಹಾಗೂ ಸಪ್ವಾನ್ ನಾರ್ಶ ಸಂದೇಶ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಕಾದ್ರಿಯಾಕ ಕೊಕ್ಕಪುಣಿ , ರಫೀಕ್ ಮಾಡದ ಬಲಿ , ಹನೀಫ್ ಸಾಲೆತ್ತೂರು , ಮುಹಮ್ಮದ್ ಕುಂಬಳೆ, ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಗಲಿದ ssf ಕಾರ್ಯಕರ್ತರಾದ ರಫೀಕ್ ಕುಲ್ಯಾರು , ಇಬ್ರಾಹಿಂ ಬಾರೆಬೇಟ್ಟು ಝುಬೈರ್ ಮೊಂತಿಮಾರ್ ರವರ ಮೇಲೆ ತಹ್ಲೀಲ್ ಹೇಳಿ ಹದಿಯ ಮಾಡಲಾಯಿತು.
ವರದಿ:ಮುಹಮ್ಮದ್ ಮಜೀದ್ ಕದ್ಕರ್ ಪ್ರ,ಕಾರ್ಯದರ್ಶಿSSF ಕಲ್ಲಡ್ಕ ಸೆಕ್ಟರ್