janadhvani

Kannada Online News Paper

ಜುಮುಅ ಪ್ರಾರ್ಥನೆಗೆ ಎರಡೂ ಹರಮ್ ಗಳಲ್ಲಿ ಲಕ್ಷಗಟ್ಟಲೆ ಹಾಜಿಗಳು

ಮಕ್ಕಾ: ಜುಮುಅ ಪ್ರಾರ್ಥನೆಗೆ ಎರಡೂ ಹರಮ್‌ಗಳಲ್ಲಿ ಲಕ್ಷಗಟ್ಟಲೆ ಹಾಜಿಗಳು ಭಾಗವಹಿಸಿದರು.ಭಾರೀ ಬಿಸಿಲಿನ ಹೊರತಾಗಿಯೂ, ಗುರುವಾರ ರಾತ್ರಿಯಿಂದ ಯಾತ್ರಾರ್ಥಿಗಳ ಗುಂಪುಗಳು ಜುಮುಆಗಾಗಿ ಹರಮ್‌ಗಳತ್ತ ದಾವಿಸಿದವು.
ಮಕ್ಕಾದ ಹರಮ್‌ನಲ್ಲಿ ಪ್ರಾರ್ಥನೆಗೂ ಮುಂಚಿತವಾಗಿ ಗೇಟ್‌ಗಳಲ್ಲಿ ನಿಯಂತ್ರಣ ಏರ್ಪಡಿಸಲಾಗಿತ್ತು. ಮಸೀದಿಯ ಎಲ್ಲಾ ಅಂತಸ್ತುಗಳೂ ತುಂಬಿ ತುಳುಕಿವೆ.

ಪವಿತ್ರ ಹಜ್‌ಗೆ ದಿನಗಳು ಮಾತ್ರ ಉಳಿದಿರುವಾಗ 11,41,138 ಯಾತ್ರಿಗಳು ಪವಿತ್ರ ಭೂಮಿಗೆ ಆಗಮಿಸಿರುವುದಾಗಿ ಸೌದಿ ಪಾಸ್‌ಪೋರ್ಟ್ ಸಚಿವಾಲಯ ತಿಳಿಸಿದೆ.
ಅತ್ಯಧಿಕ ಯಾತ್ರಿಕರು ಇಂಡೋನೇಷ್ಯಾದಿಂದ ಬಂದವರಾಗಿದ್ದಾರೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ನಂತರದ ಸ್ಥಾನದಲ್ಲಿದೆ
ವಿಮಾನ ಮಾರ್ಗವಾಗಿ ಒಟ್ಟು 10,75,474 ಯಾತ್ರಿಗಳು ಪವಿತ್ರ ಭೂಮಿಗೆ ಆಗಮಿಸಿದರು ಮತ್ತು ಹಡಗುಗಳ ಮೂಲಕ 12,026 ಯಾತ್ರಿಕರು, ರಸ್ತೆ ಮಾರ್ಗವಾಗಿ 53,638 ಮಂದಿ ವಿಶುದ್ದ ಭೂಮಿಗೆ ತಲುಪಿದರು.

ಭಾರತದ ಹಜ್ ಮಿಷನ್ ಪ್ರಕಾರ ಬುಧವಾರದ ವರೆಗೆ ಭಾರತದಿಂದ 1,04,090 ಯಾತ್ರಿಕರು ಆಗಮಿಸಿರುವುದಾಗಿ ತಿಳಿದು ಬಂದಿದೆ.
ಹಜ್ ನಿರ್ವಹಣಾ ಅನುಮತಿಯಿಲ್ಲದೆ ಮಕ್ಕಾಗೆ ಪ್ರವೇಶಿಸಲು ಪ್ರಯತ್ನಿಸಿದ ಒಟ್ಟು 1,88,464 ವ್ಯಕ್ತಿಗಳನ್ನು ಹರಮ್ ಪ್ರವೇಶದ್ವಾರದಿಂದಲೇ ಹಿಂದಕ್ಕೆ ಕಳುಹಿಸಲಾಗಿದೆ. ಮಕ್ಕಾದಲ್ಲಿ ಅನುಮತಿಯಿಲ್ಲದೆ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರವೇಶ ದ್ವಾರಗಳನ್ನು ಭದ್ರತಾ ಅಧಿಕಾರಿಗಳು ನಿರೀಕ್ಷಣೆಯಲ್ಲಿರಿಸಿದ್ದಾರೆ.

error: Content is protected !! Not allowed copy content from janadhvani.com