janadhvani

Kannada Online News Paper

ಬೆಂಗಳೂರು, ಜು.31- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು 2 ತಿಂಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸಚಿವರಿಬ್ಬರಿಗೂ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ .ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.  ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್-ಬೆಂಗಳೂರು ನಗರ ಮತ್ತು ತುಮಕೂರು, ಡಿಕೆ ಶಿವಕುಮಾರ್ ಅವರಿಗೆ ರಾಮನಗರ ಮತ್ತು ಬಳ್ಳಾರಿ ಹಾಗೂ ಕೃಷ್ಣ ಬೈರೇಗೌಡಗೆ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ. ಇನ್ನುಳಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಕಂಡಂತಿದೆ.
ಕೆ.ಜೆ.ಜಾರ್ಜ್- ಚಿಕ್ಕಮಗಳೂರು
ರಮೇಶ್ ಜಾರಕಿಹೊಳಿ- ಬೆಳಗಾವಿ.
ಶಿವಾನಂದಪಾಟೀಲ್- ಬಾಗಲಕೋಟೆ
ಪ್ರಿಯಾಂಕ್ ಖರ್ಗೆ-ಕಲಬುರ್ಗಿ
ರಾಜಶೇಖರ ಪಾಟೀಲ್ – ಯಾದಗಿರಿ
ವೆಂಕಟರಮಣಪ್ಪ – ಚಿತ್ರದುರ್ಗ
ಶಿವಶಂಕರ ರೆಡ್ಡಿ – ಚಿಕ್ಕಬಳ್ಳಾಪುರ
ಯು. ಟಿ. ಖಾದರ್ – ದಕ್ಷಿಣ ಕನ್ನಡ
ಪುಟ್ಟರಂಗಶೆಟ್ಟಿ – ಚಾಮರಾಜನಗರ
ಜಮೀರ್ ಅಹಮದ್ – ಹಾವೇರಿ
ಜಯಮಾಲಾ – ಉಡುಪಿ
ಆರ್. ಶಂಕರ್ – ಕೊಪ್ಪಳ
ಎನ್. ಮಹೇಶ್ ಗದಗ
ವೆಂಕಟರಾವ್ ನಾಡಗೌಡ-ರಾಯಚೂರು
ಎಸ್. ಆರ್. ಶ್ರೀನಿವಾಸ್ – ದಾವಣಗೆರೆ
ಸಿ. ಎಸ್. ಪುಟ್ಟರಾಜು – ಮಂಡ್ಯ
ಸಾ. ರಾ. ಮಹೇಶ್ – ಕೊಡಗು
ಬಂಡೆಪ್ಪ ಕಾಶಂಪುರ್- ಬೀದರ್
ಹೆಚ್. ಡಿ. ರೇವಣ್ಣ – ಹಾಸನ
ಡಿ. ಸಿ. ತಮ್ಮನ್ನ – ಶಿವಮೊಗ್ಗ
ಎಂ. ಸಿ. ಮನಗೊಳಿ – ಬಿಜಾಪುರ
ಜಿ.ಟಿ. ದೇವೇಗೌಡ – ಮೈಸೂರು

error: Content is protected !! Not allowed copy content from janadhvani.com