janadhvani

Kannada Online News Paper

ವಿದೇಶೀ ನೌಕರರಿಗೆ ಆಗಸ್ಟ್ 1ರಿಂದ ಕೆಲಸ ಬದಲಾವಣೆಗೆ ಅನುಮತಿ

ರಿಯಾದ್: ವಿದೇಶಿ ನೌಕರರಿಗೆ ಬುಧವಾರದಿಂದ ಕೆಲಸ ಬದಲಾವಣೆಗೆ ಅನುಮತಿ ದೊರಕಲಿದೆ.

ಆದರೆ, ಡಾಕ್ಟರ್, ಇಂಜಿನಿಯರ್ ಮತ್ತು ಅಕೌಂಟೆಂಟ್ ಮುಂತಾದ ಪೋಸ್ಟ್ ಗಳಿಗೆ ವರ್ಗಾವಣೆ ಬಯಸುವವರು ಕಾರ್ಮಿಕ ಸಚಿವಾಲಯವನ್ನು ಸಂಪರ್ಕಿಸಬೇಕು.
ಕಳೆದ ವರ್ಷ ನಿಲ್ಲಿಸಲಾಗಿದ್ದ ಈ ಯೋಜನೆಯನ್ನು ಕಾರ್ಮಿಕ ಇಲಾಖೆಯು ಕಳೆದವಾರ ಪುನರಾರಂಭಿಸಿದೆ.

ಆರೋಗ್ಯ, ಇಂಜಿನಿಯರಿಂಗ್ ಮತ್ತು ಲೆಕ್ಕಪತ್ರ ಮುಂತಾದ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಕೆಲಸ ಬದಲಾವಣೆಗೆ ಸೌಲಭ್ಯಗಳನ್ನು ಮಾಡಲಾಗಿದೆ.

ವೃತ್ತಿಪರ ಅಭ್ಯಾಸ ಪ್ರಮಾಣಪತ್ರದ ಆವಶ್ಯಕತೆ ಇರುವ ಮೂರು ವಿಭಾಗಗಳಲ್ಲಿ ತಮ್ಮ ಉದ್ಯೋಗಗಳನ್ನು ಬದಲಾಯಿಸಲು ಬಯಸುವವರು ಸಚಿವಾಲಯದ ಪ್ರಾಂತೀಯ ಕಚೇರಿಗಳನ್ನು ಸಂಪರ್ಕಿಸಬೇಕು.

ವೈದ್ಯರು, ದಾದಿ ಮತ್ತು ಫಾರ್ಮಸಿ ಕೆಲಸ ಮಾಡುವವರು ಕಮೀಷನ್ ಫಾರ್ ಹೆಲ್ತ್ ಸ್ಪೆಷಾಲಿಟಿಯಲ್ಲಿ ನೋಂದಾಯಿಸಬೇಕು.

ಇಂಜಿನಿಯರ್ ಗಳು ಸೌದಿ ಕೌನ್ಸಿಲ್ ಆಫ್ ಇಂಜಿನಿಯರ್ಸ್ ನಲ್ಲೂ ಅಕೌಂಟೆಂಟ್ ಸೌದಿ ಆರ್ಗನೈಸೇಶನ್ ಫಾರ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ನಲ್ಲೂ ನೋಂದಾಯಿಸಬೇಕು.

ವಿದ್ಯಾರ್ಹತೆಗಳನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳು ಮತ್ತು ಉದ್ಯೋಗದ ದಾಖಲೆಗಳೊಂದಿಗೆ ಕಾರ್ಮಿಕ ಕಚೇರಿಯನ್ನು ಸಂಪರ್ಕಿಸುವವರು ಐದು ಕೆಲಸದ ದಿನಗಳ ಒಳಗಾಗಿ ಅವರ ಕೆಲಸವನ್ನು ಬದಲಾಯಿಸಿ ಪಡೆಯಲಿದ್ದಾರೆ.

ಅದೇ ಸಮಯ ಇತರ ಕೆಲಸಗಳಿಗೆ ಮಾಲೀಕರು ತಮ್ಮನ್ನು ನೇರವಾಗಿ ನೇಮಕಗೊಳಿಸಲು ಸಾಧ್ಯವಿದ್ದು ಕಚೇರಿಗೆ ಭೇಟಿನೀಡುವ ಅಗತ್ಯವಿರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಮನೆ ಕೆಲಸಗಾರರಿಗೆ ಖಾಸಗಿ ಉದ್ಯೋಗ ವಲಯಕ್ಕೆ ಕೆಲಸ ಬದಲಾಯಿಸಲು ಅನುಮತಿಸುವುದಿಲ್ಲ.

error: Content is protected !! Not allowed copy content from janadhvani.com