ನವದೆಹಲಿ: ದೇಶದಲ್ಲಿ ಸಲಿಂಗ ಕಾಮ ಕಾನೂನು ಬಾಹಿರ ಎಂದು ಹೇಳುವ ಸೆಕ್ಷನ್ 377ರ ರದ್ದತಿಗೆ ಕೇಂದ್ರ ಸರ್ಕಾರದ ವಿರೋಧವಿಲ್ಲ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.ಲೈಂಗಿಕ ಸಂಗಾತಿಯ ಆಯ್ಕೆ ಎನ್ನುವುದು ಆಯಾ ವ್ಯಕ್ತಿಯ ವೈಯುಕ್ತಿಯ ವಿಚಾರವಾಗಿದೆ ಎಂದಿದ್ದಾರೆ.
ಮಾದ್ಯಮವೊಂದಕ್ಕೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಸಾಮಾಜಿಕ ನಿಲುವುಗಳು ಬದಲಾಸಗುತ್ತಿರುವುದನ್ನು ನಾವಿಂದು ಕಾಣಬಹುದಾಗಿದೆ. ಹೀಗಾಗಿ ನಾವು ಸಹ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸರ್ಕಾರದ ನಿಲುವಿಗೆ ಸಮರ್ಥನೆ ನಿಡಿದ್ದಾರೆ.
ಲೈಂಗಿಕ ಸಂಗಾತಿಯ ಆಯ್ಕೆಯು ವೈಯುಕ್ತಿಕ ವಿಚಾರವಾಗಿದೆ. ಹೀಗಾಗಿ ಇದನ್ನು ಅಪರಾಧ ಎನ್ನುವುದು ಸರಿಯಲ್ಲ. ಭಾರತ ಒಂದು ಜಾಗತಿಕ ಶಕ್ತಿಯಾಗಿದ್ದು ಆರ್ಥಿಕತೆ ಪ್ರಗತಿಪಥದಲ್ಲಿ ಸಾಗುತ್ತಿದೆ.ಹಾಇಗಾಗಿ ಆರ್ಥಿಕ ಪ್ರಗತಿಯೊಡನೆಯೇ ಸಾಮಾಜಿಕ ಪ್ರಗತಿಯ ವೇಗವನ್ನು ಹೆಚ್ಚಿಸಿಕೊಳ್ಳುವುದು ಸಹ ಮುಖ್ಯವಾಗಲಿದೆ. ಸಲಿಂಗ ಕಾಮವನ್ನು ಅಪರಾಧ ವ್ಯಾಪ್ತಿಯಿಂದ ಹೊರಗಿಡುವುದು ಬದಲಾಗುತ್ತಿರುವ ಭಾರತೀಯರ ಮನಸ್ಥಿತಿಯನ್ನು ಸೂಚಿಸಲಿದೆ ಎಂದು ಅವರು ಹೇಳಿದ್ದಾರೆ.