janadhvani

Kannada Online News Paper

ದಾರುನ್ನಜಾತ್ ಮಹಿಳಾ ಶರೀಅತ್ ಕಾಲೇಜು ಉಧ್ಘಾಟನೆ

ವಿಟ್ಲ:ವಿಟ್ಲ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಾದ ಕೊಡಂಗಾಯಿ ಸಮೀಪದ ಟಿಪ್ಪುನಗರದ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಇದರ ಅಧೀನದಲ್ಲಿ ಜುಲೈ 16 ಸೋಮವಾರದಂದು ಬೆಳಿಗ್ಗೆ ಮಹಿಳಾ ಶರೀಅತ್ ಕಾಲೇಜು ಪ್ರಾರಂಭಗೊಂಡಿತು.

ಸಂಸ್ಥೆಯ ಸ್ಥಾಪಕಾಧ್ಯಕ್ಷರೂ ಪ್ರಮುಖ ಸೂಫಿವರ್ಯರೂ ಆದ ಪಿಕೆ ಅಬೂಬಕರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಝರ್ವಾನಿ ಮಸ್ಜಿದ್ ಇಮಾಂ ಮುಹಮ್ಮದ್ ಮುಸ್ಲಿಯಾರ್ ಬಾಯಾರ್ ಉಧ್ಘಾಟಿಸಿ ಮಾತನಾಡಿದರು. ಖ್ಯಾತ ವಿದ್ವಾಂಸರಾದ ಶೈಖುನಾ ಓಲೆಮುಂಡೋವು ಉಸ್ತಾದರವರು ತರಗತಿ ನಡೆಸಿ ಕೊಟ್ಟರು. SYS ರಾಜ್ಯ ಪ್ರಧಾನ ಕಾರ್ಯದರ್ಶಿ msm ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮುಖ್ಯ ಭಾಷಣ ಮಾಡಿದರು.

ದಾರುಲ್ ಅಶ್-ಅರಿಯ್ಯಾ ಮ್ಯಾನೇಜರ್ ಮುಹಮ್ಮದಲಿ ಸಖಾಫಿ ಸುರಿಬೈಲ್, ಮಜ್ಲಿಸ್ ದಾರುನ್ನಜಾತ್ ಅಧ್ಯಕ್ಷರಾದ ಕೆಬಿ ಅಬ್ದುರ್ರಹ್ಮಾನ್ ಮದನಿ ಮಧ್ಯನಡ್ಕ, ಶರೀಅತ್ ಕಾಲೇಜು ಪ್ರಿನ್ಸಿಪಾಲ್ ಕೆ.ಎ ಅಬ್ದುಲ್ ಖಾದರ್ ಫೈಝಿ,ಸಂಸ್ಥೆಯ ಮುದರ್ರಿಸ್ ಎ.ಪಿ ಅಬೂಬಕರ್ ಸಖಾಫಿ ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಹಜ್ಜ್ ಯಾತ್ರೆ ಕೈಗೊಳ್ಳುವ ಮುಹಮ್ಮದ್ ಮುಸ್ಲಿಯಾರ್ ಬಾಯಾರ್, SMA ನಾಯಕರಾದ ಉಸ್ಮಾನ್ ಸೆರ್ಕಳ ರವರನ್ನು ಅಭಿನಂದಿಸಲಾಯಿತು.

ಸಂಸ್ಥೆಯ ದಶವಾರ್ಷಿಕ ಸ್ವಾಗತ ಸಮಿತಿ ಚೆಯರ್ಮ್ಯಾನ್ ಅಬೂಬಕರ್ ಹಾಜಿ ಹೊಸಂಗಡಿ, ದಾರುನ್ನಜಾತ್ ದುಬೈ ಸಮಿತಿ ಅಧ್ಯಕ್ಷರಾದ ಇಬ್ರಾಹೀಂ ಮುಸ್ಲಿಯಾರ್, ಸಾರಥಿಗಳಾದ ಕೆ.ಎಂ ಅಬ್ದುಲ್ ಹಮೀದ್ ಸಖಾಫಿ,ಉಸ್ಮಾನ್ ಸಖಾಫಿ ಬಾಳೆಪುಣಿ,ಡಾಕ್ಟರ್ ಹಸೈನಾರ್, ಅಧ್ಯಾಪಕರಾದ ಹಾಫಿಳ್ ಶರೀಫ್ ಮುಸ್ಲಿಯಾರ್, ಮಿನ್ಹಾಜ್ ಮಹಿಳಾ ಕಾಲೇಜು ಮ್ಯಾನೇಜರ್ ಎಂಎಸ್ಎಂ ಸಿರಾಜ್,ವಿಟ್ಲ ಟೌನ್‌ ಮಸ್ಜಿದ್ ಇಮಾಂ ಅಬ್ಬಾಸ್ ಮದನಿ, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರೇಂಜ್ ಪ್ರಧಾನ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ,ಅಬೂಬಕರ್ ಅಲ್-ಖಾಸಿಮಿ ಅಳಕೆಮಜಲು, SYS ನಾಯಕರಾದ ಕೆ.ಎ ಇಬ್ರಾಹೀಂ ಮುಸ್ಲಿಯಾರ್, ಬಡಕಬೈಲು ಮುದರ್ರಿಸ್ ವಿಎಂ ಅಬೂಬಕರ್ ಸಖಾಫಿ,ಉಮರ್ ಬಾಕಿಮಾರ್, ಅಬೂಬಕರ್ ಹಾಜಿ ಕಡಂಬು ಮತ್ತಿತರರು ಉಪಸ್ಥಿತರಿದ್ದರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎ ಹಮೀದ್ ಕೊಡಂಗಾಯಿ ಸ್ವಾಗತಿಸಿ, ಸದರ್ ಉಸ್ತಾದ್ ಅಬ್ದುಲ್ ರಝ್ಝಾಕ್ ಸಅದಿ ವಂದಿಸಿದರು.

✍🏻ವರದಿ:- ಅಶ್ಫಾಕ್ ಕೊಡಂಗಾಯಿ

error: Content is protected !! Not allowed copy content from janadhvani.com