ನೆಲ್ಯಾಡಿ: ಬಹುಮುಖ ಯೋಜನೆಗಳೊಂದಿಗೆ ಅಹ್ಲುಸ್ಸುನ್ನತಿ ವಲ್ ಜಮಾಅತಿನ ತತ್ವ ಆದರ್ಶದಡಿ ಕಾರ್ಯಾಚರಣೆ ಪ್ರಾರಂಭಿಸಲಿರುವ ಮರ್ಕಝ್ ದಾರುರಹ್ಮ ಇಸ್ಲಾಮಿಕ್ ಅಕಾಡೆಮಿ ನೆಲ್ಯಾಡಿಯ ದೊಂತಿಲದ ದಾರುರಹ್ಮಾ ಗಾರ್ಡನ್ ನಲ್ಲಿ ಉದ್ಘಾಟನೆಗೊಂಡಿತು.
ಸಂಸ್ಥೆಯ ಅಧ್ಯಕ್ಷರಾದ ಸಯ್ಯಿದ್ ಸಲೀಂ ಅಸ್ಸಖಾಫ್ ತಂಙಳ್ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರವನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಹು ಉಸ್ಮಾನ್ ಜೌಹರಿ ಉದ್ಘಾಟಿಸಿದರು.ಕಾರ್ಯಕ್ರಮಲ್ಲಿ ಬಹು ಹಂಝ ಮದನಿ ಮಿತ್ತೂರು ಮುಖ್ಯ ಪ್ರಭಾಷಣ ನಡೆಸಿದರು.ಬಹು ಮನ್ಸೂರ್ ಮುಹೀನ್ ಪೇರೆಂಟ್ಸ್ ಶಿಬಿರ ನಡೆಸಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ನ್ಯಾಯವಾದಿ ಇಸ್ಮಾಯಿಲ್ ನೋಟರಿ ನೆಲ್ಯಾಡಿ, ನೆಲ್ಯಾಡಿ ಕೇಂದ್ರ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ವಿ, ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ಕರಾವಳಿ, ಯುವ ಸಾಮಾಜಿಕ ಮುಖಂಡ ಹಾಜಿ ಇಸ್ಮಾಯಿಲ್ ಕೋಲ್ಪೆ, ಸಂಸ್ಥೆಯ ಜೊತೆ ಕಾರ್ಯದರ್ಶಿ ಎನ್.ಕೆ ಇಸ್ಮಾಯಿಲ್, ನುಸ್ರತುಲ್ ಮಸಾಕೀನ್ ಅಸೋಸಿಯೇಶನ್ ನೆಲ್ಯಾಡಿ ಅಧ್ಯಕ್ಷರಾದ ಅಶ್ರಫ್ ಸಿ.ಎಂ, ನೆಲ್ಯಾಡಿ ಮಸೀದಿಯ ಮಾಜಿ ಅಧ್ಯಕ್ಷರಾದ ಎನ್.ಎಸ್ ಸುಲೈಮಾನ್, ಉದ್ಯಮಿ ತಾಜ್ ಡ್ರೆಸ್ ವೆಲ್, ಪ್ರಚಾರ ಸಮಿತಿ ಚೇರ್ಮೇನ್ ಬಹು ಶಮೀರ್ ಸಹದಿ, ವೈಸ್ ಚೇರ್ಮೆನ್ ರಿಯಾ ಎನ್.ಕೆ ಮುಂತಾದ ಗಣ್ಯರು ಶುಭ ಹಾರೈಸಿದರು. ಮುಸ್ತಫಾ ಪಟ್ಟೆ ವಂದಿಸಿದರು.
ಇನ್ನಷ್ಟು ಸುದ್ದಿಗಳು
ಮಠ ಬ್ರಾಂಚ್ ಎಸ್ಡಿಪಿಐ: ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ
ಕುಪ್ಪೆಪದವು: ಸ್ವಲಾತ್ ಸಮಿತಿ ಅಸ್ತಿತ್ವಕ್ಕೆ- ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಪದವಿನಂಗಡಿ ಆಯ್ಕೆ
ಅತ್ಯಾಚಾರ: ಉಳ್ಳಾಲ ಎಸ್ಡಿಪಿಐ ಅಧ್ಯಕ್ಷನ ವಿರುದ್ಧ ಪೋಕ್ಸೊ ಕೇಸ್
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಅಲ್ ಅಮೀನ್ ಯೂತ್ ಸೆಂಟರ್: ಯಶಸ್ವಿ ರಕ್ತದಾನ ಶಿಬಿರ
ಪಂಡಿತ್ ಹೌಸ್: ಅಪಾರ್ಟ್ ಮೆಂಟ್ ನಿಂದ ರಸ್ತೆ ಬದಿಗೆ ಕೊಳಚೆ ನೀರು- ಸ್ಥಳೀಯರಿಂದ ಪುರಸಭೆಗೆ ಪತ್ರ
ಸುಳ್ಯ: ಕನಕಮಜಲು, ಪೈಚಾರಿನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ- ಯಶಸ್ವಿಗೆ ಕರೆ