ಅಜ್ಜಿನಡ್ಕ: ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಇದರ 2026–27ನೇ ಸಾಲಿನ ವಾರ್ಷಿಕ ಮಹಾಸಭೆಯು ಅಲ್ಲಾಹನ ಅನುಗ್ರಹದಿಂದ ಯಶಸ್ವಿಯಾಗಿ ನಡೆಯಿತು. ಜುಲೈ 3ರಿಂದ ಆರಂಭಗೊಂಡ ಮಹಾಸಭೆಯು ಮೂರು ದಿನಗಳ ಸುದೀರ್ಘ ಹಾಗೂ ಫಲಪ್ರದ ಚರ್ಚೆಗಳ ಬಳಿಕ ಯಶಸ್ವಿಯಾಗಿ ಪೂರ್ಣಗೊಂಡಿತು.
ಸಭೆಯು ಪವಿತ್ರ ಕುರ್‌ಆನ್ ಪಠಣ ಹಾಗೂ ಅಬ್ದುರ್ ರಹ್ಮಾನ್ ಮದನಿ ಅವರ ದುಆದೊಂದಿಗೆ ಆರಂಭವಾಯಿತು. ಅಶ್ರಫ್ ಕೋಟೆಕಾರ್ ಅವರು ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಸಮೀರ್ (ಒಮಾನ್) ಅವರು ಕಳೆದ ಅವಧಿಯ ಕಾರ್ಯ ವರದಿ ಮಂಡಿಸಿದರು. ಅಮೀರ್ ಫೈಝಲ್ ಸದಸ್ಯರ ಪರಿಚಯ ಕಾರ್ಯಕ್ರಮ ನಡೆಸಿಕೊಟ್ಟರು. ಅಧ್ಯಕ್ಷೀಯ ಭಾಷಣವನ್ನು ಮೊಹಮ್ಮದ್ ಸಾಲಿ ಮಾಡಿದರು. ವರದಿಯ ಕುರಿತು ಸದಸ್ಯರ ನಡುವೆ ಸುದೀರ್ಘ ಚರ್ಚೆ ನಡೆದು, ಸದಸ್ಯರ ಸಲಹೆ-ಸೂಚನೆಗಳೊಂದಿಗೆ ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಬಳಿಕ ಸಭೆಯನ್ನು ಮುನ್ನಡೆಸಲು ಸಿ.ಎಚ್. ಇಸ್ಮಾಯಿಲ್ ಅವರನ್ನು ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮಹತ್ವದ ನಿರ್ಧಾರಗಳು:
ಸಭೆಯಲ್ಲಿ ಸದಸ್ಯರ ಕಲ್ಯಾಣ, ಸಂಘದ ಅಭಿವೃದ್ಧಿ, ಸದಸ್ಯತ್ವ ವೃದ್ಧಿ, ಆರ್ಥಿಕ ಶಿಸ್ತು, ಸೇವಾ ಕಾರ್ಯಕ್ರಮಗಳು, ಚಿಟ್ಟಿ (ಕುರಿ) ಯೋಜನೆ ಹಾಗೂ ಎಲ್ಲಾ ಸದಸ್ಯರಿಗೆ ವಿಮಾ ಸೌಲಭ್ಯ ಕಲ್ಪಿಸುವ ಕುರಿತು ವಿಸ್ತೃತ ಚರ್ಚೆ ನಡೆಯಿತು. ಈ ವಿಷಯಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಮುಂದಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು. ಇದಲ್ಲದೆ, ಊರಿನಲ್ಲಿ ಪ್ರತ್ಯೇಕ ಸಮಿತಿ ರಚನೆ ಹಾಗೂ ಕೆಲವು ವರ್ಷಗಳಿಂದ ಸಂಘದ ಚಟುವಟಿಕೆಗಳಿಂದ ದೂರವಾದ ಸದಸ್ಯರನ್ನು ಮತ್ತೆ ಸಂಘದ ಮುಖ್ಯವಾಹಿನಿಗೆ ಕರೆತರುವ ಕುರಿತು ಸಭೆಯಲ್ಲಿ ಅಭಿಪ್ರಾಯ ವಿನಿಮಯ ನಡೆಯಿತು. ಈ ವಿಷಯಗಳನ್ನೂ ನೂತನ ಕಾರ್ಯಕಾರಿ ಸಮಿತಿಗೆ ಹಸ್ತಾಂತರಿಸಿ, ಸಮಗ್ರವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಸಭೆ ನಿರ್ಧರಿಸಿತು. ಸಭೆಯ ಕೊನೆಯಲ್ಲಿ ಖಮಾಲ್ (KSA) ಅವರು ವಂದನಾರ್ಪಣೆ ಸಲ್ಲಿಸಿದರು.
2026–27ನೇ ಸಾಲಿನ ನೂತನ ಪದಾಧಿಕಾರಿಗಳು:
- ಅಧ್ಯಕ್ಷರು: ಸಮೀರ್ (ಒಮಾನ್)
- ಉಪಾಧ್ಯಕ್ಷರು: ಶಬೀರ್ (ಕತಾರ್), ಸುಹೈಲ್ (ದುಬೈ)
- ಕಾರ್ಯದರ್ಶಿಗಳು: ಅಮೀರ್ ಫೈಝಲ್, ಅಶ್ರಫ್ ಕೋಟೆಕಾರ್
- ಕೋಶಾಧಿಕಾರಿಗಳು: ಖಮಾಲ್ ಅಜ್ಜಿನಡ್ಕ, ಮೊಹಮ್ಮದ್ ಸಾಲಿ
- ಮೀಡಿಯಾ ವಿಂಗ್ ಇನ್‌ಚಾರ್ಜ್: ಸಿರಾಜ್ ಬಿ.ಎಸ್.ಟಿ., ಶಮ್ಶೀರ್ ಸಿ.ಎಂ.
- ಅಡ್ಮಿನ್‌ಗಳು: ಅರಾಫತ್ ಕೆ.ಜಿ., ಸುಲ್ತಾನ್ ಬಿ.ಎಸ್.ಟಿ., ಅಬ್ಬಾಸ್ ಕೊಳಂಗೆರೆ
- ಸಲಹೆಗಾರರು: ಸಾಹುಲ್ ಸಾಮನಿಗೆ
ಕೋರ್ ಸಮಿತಿ ಸದಸ್ಯರು:
ತೌಸೀಫ್ (TOUSI), ರಶೀದ್ ಬಲಪು, ಅಝರ್ (ದುಬೈ), ಅನ್ಸಾರ್ (ದುಬೈ), ಫಕ್ರುದ್ದೀನ್ (ಅಹ್ಮದ್) ತೋಟ, ನಾಸೀರ್ ಕೋಟೆಕಾರ್.ಕೊನೆಯಲ್ಲಿ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ, ಸಮಯ ಹಾಗೂ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಲಾಯಿತು.















ಇನ್ನಷ್ಟು ಸುದ್ದಿಗಳು
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ಒಪ್ಪಂದವನ್ನು ಗಾಳಿಗೆ ತೂರಿ ಇರಾನ್ ಮೇಲೆ ಯುಎಸ್ ದಾಳಿ- ಗಲ್ಫ್ ವಲಯದಲ್ಲಿ ಮತ್ತೆ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ: ನಾಳೆ (ಜುಲೈ 8) ಶಾಲಾ-ಕಾಲೇಜುಗಳಿಗೆ ರಜೆ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ