janadhvani

Kannada Online News Paper

ಬಾಗ್ದಾದ್: ಇರಾಕ್ ರಾಷ್ಟ್ರೀಯ ಗುಪ್ತಚರ ಕಚೇರಿ ಆವರಣದಲ್ಲಿ ಡ್ರೋನ್ ಪತನ

ಈ ಡ್ರೋನ್ ಯಾವ ದೇಶಕ್ಕೆ ಸೇರಿದ್ದು? ಇದು ಕಣ್ಗಾವಲು ಉದ್ದೇಶ ಹೊಂದಿದ್ದೇ ಅಥವಾ ದಾಳಿಗೆ ಸಂಚು ರೂಪಿಸಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಶನಿವಾರ ತಡರಾತ್ರಿ ಸಂಚಲನ ಉಂಟಾಗಿದ್ದು, ನಗರದ ಹೈ-ಪ್ರೊಫೈಲ್ ಪ್ರದೇಶವಾದ ಅಲ್-ಮನ್ಸೂರ್‌ನಲ್ಲಿರುವ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ (National Intelligence Service) ಪ್ರಧಾನ ಕಚೇರಿಯ ಆವರಣದಲ್ಲಿ ಡ್ರೋನ್ ಒಂದು ಪತನಗೊಂಡಿದೆ.

ಇರಾಕ್‌ನ ಅಧಿಕೃತ ಸುದ್ದಿಸಂಸ್ಥೆಯಾದ ‘ಇರಾಕಿ ನ್ಯೂಸ್ ಏಜೆನ್ಸಿ’ (INA) ಮತ್ತು ‘ಸೆಕ್ಯೂರಿಟಿ ಮೀಡಿಯಾ ಸೆಲ್’ ಈ ಘಟನೆಯನ್ನು ದೃಢಪಡಿಸಿವೆ. ಗುಪ್ತಚರ ಇಲಾಖೆಯ ಮುಖ್ಯ ಕಚೇರಿಯ ಆವರಣದೊಳಗೆ ಡ್ರೋನ್ ಬಿದ್ದಿರುವುದು ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ.
ತನಿಖೆ ಪ್ರಗತಿಯಲ್ಲಿ:
ಈ ಡ್ರೋನ್ ಯಾವ ದೇಶಕ್ಕೆ ಸೇರಿದ್ದು? ಇದು ಕಣ್ಗಾವಲು ಉದ್ದೇಶ ಹೊಂದಿದ್ದೇ ಅಥವಾ ದಾಳಿಗೆ ಸಂಚು ರೂಪಿಸಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ಈವರೆಗೆ ವರದಿಯಾಗಿಲ್ಲ. ಸ್ಥಳಕ್ಕೆ ಭದ್ರತಾ ಪಡೆಗಳು ಧಾವಿಸಿದ್ದು, ತಪಾಸಣೆ ತೀವ್ರಗೊಳಿಸಿವೆ.

ಇದನ್ನೂ ಓದಿರಿ...