janadhvani

Kannada Online News Paper

ಯುಎಇ: ಆಗಸ್ಟ್ ಒಂದರಿಂದ ಕ್ಷಮಾದಾನ-ಶಾರ್ಜಾದಲ್ಲಿ ​​ಸಹಾಯ ಕೇಂದ್ರ ಆರಂಭ

ಶಾರ್ಜಾ: ಆಗಸ್ಟ್ ಒಂದರಿಂದ ಮೂರು ತಿಂಗಳ ವರೆಗೆ ಯುಎಇ ಘೋಷಿಸಿದ ಸಾರ್ವಜನಿಕ ಕ್ಷಮಾದಾನದ ಪ್ರಯೋಜನ ಪಡೆಯಲು ಉದ್ದೇಶಿಸಿರುವವರಿಗೆ ಸಹಾಯ ಮಾಡಲು ಶಾರ್ಜಾ ಇಂಡಿಯನ್ ಅಸೋಸಿಯೇಷನ್ ​​ಸಹಾಯ ಕೇಂದ್ರವನ್ನು ಪ್ರಾರಂಭಿಸಿದೆ. ಹೆಲ್ಪ್ ಡೆಸ್ಕನ್ನು ಸಂಘದ ಅಧ್ಯಕ್ಷ ಇ.ಪಿ. ಜಾನ್ಸನ್ ಉದ್ಘಾಟಿಸಿದರು.

ಸಾರ್ವಜನಿಕ ಕ್ಷಮಾದಾನದ ಪ್ರಯೋಜನ ಪಡೆಯುವ ಭಾರತೀಯರಿಗೆ ಮಾತ್ರವಲ್ಲದೇ ಇತರ ರಾಷ್ಟ್ರಗಳ ಜನರಿಗೂ ಕಾನೂನು ಸಲಹೆಯನ್ನು ನೀಡಿ ಸಹಾಯ ಮಾಡಲಿದೆ ಎಂದು ಜಾನ್ಸನ್ ಹೇಳಿದರು. ಊರಿಗೆ ಹೊರಟವರಿಗೆ ಸಂಘಟನೆಗಳ ಸಹಕಾರದಲ್ಲಿ ವಿಮಾನ ಟಿಕೆಟ್ ನೀಡಲು ಶ್ರಮಿಸಲಾಗುವುದು ಎಂದವರು ಹೇಳಿದ್ದಾರೆ.

error: Content is protected !! Not allowed copy content from janadhvani.com