janadhvani

Kannada Online News Paper

ಕಾನೂನು ಉಲ್ಲಂಘಕರಾದ ವಿದೇಶೀಯರಿಗೆ ಕೆಲಸ ನೀಡಿದ್ದಲ್ಲಿ 1 ಲಕ್ಷ ರಿಯಾಲ್ ದಂಡ

ರಿಯಾದ್: ಕಾನೂನು ಉಲ್ಲಂಘಕರಾದ ವಿದೇಶೀಯರಿಗೆ ಕೆಲಸ ನೀಡುವ ಉದ್ಯೋಗದಾತರಿಗೆ 1 ಲಕ್ಷ ರಿಯಾಲ್ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ನೀಡಲಾಗುವುದು ಎಂದು ಪಾಸ್‌ಪೋರ್ಟ್ ವಿಭಾಗ ಎಚ್ಚರಿಕೆ ನೀಡಿದೆ.
ಕಾನೂನು ಉಲ್ಲಂಘಕರಿಗೆ ಸಹಾಯ ಮಾಡುವ ವಿದೇಶಿಯರನ್ನು ಗಡೀಪಾರು ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೌದಿ ಪಾಸ್ಪೋರ್ಟ್ ಇಲಾಖೆಯು, ಇಖಾಮಾ ಇಲ್ಲದವರು ಮತ್ತು ಕಾರ್ಮಿಕ ಕಾನೂನು ಉಲ್ಲಂಘಿಸಿದವರಿಗೆ ಕೆಲಸ, ಆಶ್ರಯ ನೀಡದಂತೆ ತಿಳಿಸಿದೆ. ನುಸುಳುಕೋರರು, ಉದ್ಯೋಗದಾತರಿಂದ ತಪ್ಪಿಸಿ ಕೆಲಸ ಮಾಡುವವರಿಗೆ, ಪ್ರಯಾಣ, ಕೆಲಸ, ವಾಸದ ಸೌಕರ್ಯಗಳನ್ನು ನೀಡಿ ಸಹಾಯ ಮಾಡುವುದು ಅಪರಾಧ ಎಂದು ಪಾಸ್ಪೋರ್ಟ್ ಡೈರೆಕ್ಟರೇಟ್ ಹೇಳಿದೆ.ಅಂತವರಿಗೆ ಒಂದು ಲಕ್ಷ ರಿಯಾಲ್ ದಂಡ ಮತ್ತು ಆರು ತಿಂಗಳ ಸೆರೆವಾಸ ದೊರೆಯಲಿದೆ.

ಕಾನೂನನ್ನು ಉಲ್ಲಂಘಿಸುವವರಿಗೆ ಸಹಾಯ ನೀಡುವ ವಿದೇಶಿಯರನ್ನು ಶಿಕ್ಷೆಗೆ ಗುರಿಪಡಿಸಿದ ನಂತರ ಗಡಿಪಾರು ಮಾಡಲಾಗುವುದು. ಪ್ರತೀ ಸಂಸ್ಥೆಯಲ್ಲಿ ಕೆಲಸ ಮಾಡುವ ಅಕ್ರಮ ಅಪರಾಧಿಗಳ ಸಂಖ್ಯೆಯ ಅನುಸಾರ ದಂಡದ ಮೊತ್ತ ದ್ವಿಗುಣಗೊಳ್ಳುತ್ತದೆ. ಅಂತಹ ಸಂಸ್ಥೆಗಳ ವ್ಯವಸ್ಥಾಪಕರಿಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಕಾನೂನು ಉಲ್ಲಂಘಿಸುವವರನ್ನು ನೇಮಕ ಮಾಡುವ ಸಂಸ್ಥೆಗಳಿಗೆ ಐದು ವರ್ಷ ವಿದೇಶೀ ನೌಕರರನ್ನು ನೇಮಕ ಮಾಡಲು ಅನುಮತಿ ನಿಷೇಧಿಸಲಾಗುವುದು.  ಉಲ್ಲಂಘಕರ ಬಗ್ಗೆ ವಿದೇಶಿಯರು ಮತ್ತು ದೇಶೀಯರು ತಿಳಿಸುವಂತೆ ಪಾಸ್ಪೋರ್ಟ್ ನಿರ್ದೇಶನಾಲಯವು ಕರೆ ನೀಡಿದೆ.

error: Content is protected !! Not allowed copy content from janadhvani.com