janadhvani

Kannada Online News Paper

ವಿದೇಶೀಯರ ಹಣ ವ್ಯವಹಾರಕ್ಕೆ ತೆರಿಗೆ- ಸಂಸತ್ತಿನಲ್ಲಿ ತಿರಸ್ಕಾರ

ಕುವೈತ್ ಸಿಟಿ: ವಿದೇಶೀಯರ ಹಣ ವ್ಯವಹಾರಕ್ಕೆ ತೆರಿಗೆ ಪಾವತಿಸಬೇಕೆಂಬ ಪ್ರಸ್ತಾಪವನ್ನು ಮಂತ್ರಿಮಂಡಲವು ತಿರಸ್ಕರಿಸಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಸರ್ಕಾರವು ಈ ಬಗ್ಗೆ ಸಂಸತ್ತಿನಲ್ಲಿ ಅಧಿಕೃತವಾಗಿ ತಿಳಿಸಿದೆ.
ಅದು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಆ ಮೂಲಕ ವಿದೇಶಿಯರು ದೇಶ ಬಿಟ್ಟು ವಿದೇಶಿ ಬಂಡವಾಳವನ್ನು ಮೊಟಕುಗೊಳಿಸುವ ಸಂಭವವಿದೆ ಎಂದು ಆರ್ಥಿಕ ಖಾತೆಯ ಸಮಿತಿ ಲೆಕ್ಕಾಚಾರ ಮಾಡಿರುವುದಾಗಿ ವರದಿಯಲ್ಲಿ ತಿಳಿಸಿದೆ.

ವಿದೇಶೀಯರ ಹಣ ವ್ಯವಹಾಕ್ಕೆ ತೆರಿಗೆ ಪಾವತಿಸುವ ಪ್ರಸ್ತಾಪದ ಬಗ್ಗೆ ಸಂಸತ್ತಿನ ಎರಡು ಸಮಿತಿಗಳು ಎರಡು ಅಭಿಪ್ರಾಯಗಳನ್ನು ಹೊಂದಿವೆ.
ತೆರಿಗೆ ವಿಧಿಸಬಹುದು ಎಂಬುದು ಹಣಕಾಸು ಮತ್ತು ಆರ್ಥಿಕ ಸಮಿತಿಯ ಅಭಿಪ್ರಾಯವಾಗಿದೆ. ಆದರೆ ಕಾನೂನು ಖಾತೆಯ ಅಭಿಪ್ರಾಯವು ತೆರಿಗೆ ವಿಧಿಸುವುದಕ್ಕೆ ವಿರುದ್ದವಾಗಿದೆ. ತೆರಿಗೆಯ ಬಗ್ಗೆ ನಿರ್ಧರಿಸಲು ಸಂಸತ್ತನ್ನು ಕಳೆದ ಏಪ್ರಿಲ್ 19 ರಂದು ಕರೆಯಲಾಯಿತಾದರೂ ಸಮಯದ ಕೊರತೆಯಿಂದಾಗಿ ಪರಿಗಣಿಸಲಾಗಲಿಲ್ಲ. ಅಕ್ಟೋಬರ್ ನಲ್ಲಿ ಸಂಸತ್ ಸಭೆ ನಡೆಯಲಿದ್ದು, ಬಿಲ್ ಪರಿಗಣನೆಗೆ ಬರಲಿದೆ ಎನ್ನಲಾಗಿದೆ. ಅದರ ಮುಂಚಿತವಾಗಿ ಸರಕಾರವು ತನ್ನ ನಿಲುವನ್ನು ಘೋಷಿಸಿದೆ.

ವ್ಯಾಟ್ ಬಿಲ್ ಮುಂದಿನ ಅಧಿವೇಶನ ದಲ್ಲಿ

ಮುಂದಿನ ಅಧಿವೇಶನದಲ್ಲಿ ವ್ಯಾಟ್ ಬಿಲ್ಲನ್ನು ಸಮರ್ಪಿಸಲು ಸಚಿವಾಲಯ ತೀರ್ಮಾನಿಸಿದ್ದು, ಸಂಸತ್ತಿನಲ್ಲಿನ ಆರ್ಥಿಕ ಸಮಿತಿ ಮುಂದೆ ಸೆಪ್ಟೆಂಬರ್‌ ನಲ್ಲಿ ಚರ್ಚೆಗೆ ಬರಲಿದೆ. ಈ ವರ್ಷದ ಕೊನೆಯಲ್ಲಿ ಸರಕಾರ ವ್ಯಾಟ್ ಬಗ್ಗೆ ಓಟಿಂಗ್ ನಡೆಸುವ ಸನ್ನಾಹದಲ್ಲಿದೆ.

ಈ ಮಸೋದೆ ಕುರಿತಾದ ಹಣಕಾಸು ಸಚಿವಾಲಯದ ಕ್ರಮವು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಹಣಕಾಸು ಮತ್ತು ಫತ್ವಾ- ಕಾನೂನು ಇಲಾಖೆಗೆ ಹೋಗಲಿದೆ. ಈ ಮಸೂದೆಯು ಸಂವಿಧಾನಕ್ಕೆ ಅನುಗುಣವಾಗಿರಬೇಕು ಎಂದು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.
IMF ಮತ್ತು ಇತರರು ನಿರ್ದೇಶಿಸಿದಂತೆ ಸೌದಿ ಅರೇಬಿಯಾ ಮತ್ತು ಯುಎಇಗಳು ವ್ಯಾಟ್ ಕಾರ್ಯರೂಪಕ್ಕೆ ತಂದಂತೆ ಆರ್ಥಿಕ ಅಭಿವೃದ್ಧಿಯನ್ನು ಸುಲಭಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳುವ ಉದ್ದೇಶವನ್ನು ಸರಕಾರ ಹೊಂದಿದೆ. ವ್ಯಾಟ್ ಅನುಷ್ಠಾನವು GCCಯ ನಿರ್ಧಾರವಾಗಿದೆ.

ಸೌದಿ ಅರೇಬಿಯಾ ಮತ್ತು ಯುಎಇ ಇದನ್ನು ಜಾರಿಗೊಳಿಸಿದ್ದರೂ, ಇದು ಕುವೈತ್ ನಲ್ಲಿ ಜಾರಿಗೆ ಬಂದಿರಲಿಲ್ಲ. GCC ನಿರ್ಧಾರಗಳನ್ನು ಆಯಾಯ ರಾಷ್ಟ್ರಗಳ ಸಂಸತ್ತಿನ ಒಪ್ಪಿಗೆಯೊಂದಿಗೆ ಅನುಷ್ಠಾನಗೊಳಿಸಬೇಕು. ಕುವೈಟಿನ ಸಾಂವಿಧಾನಿಕತೆಗೆ ವ್ಯಾಟ್ ಕಾನೂನು ವಿರೋಧಾತ್ಮಕವಾಗಿದೆ ಎಂಬ ವಾದವನ್ನು ಕೆಲವರು ಹೊಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ಸೂಕ್ಷ್ಮತೆಯಿಂದ ಸರಕಾರ ಮುಂದಡಿ ಇಡುತ್ತಿದೆ.

error: Content is protected !! Not allowed copy content from janadhvani.com