ಅಂತಾರಾಷ್ಟ್ರೀಯ ಕಲ್ಚರಲ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ
ದುಬೈ: ದುಬೈ ಅಂತಾರಾಷ್ಟ್ರೀಯ ಕಲ್ಚರಲ್ 50ನೇ ಗೋಲ್ಡನ್ ಫೆಸ್ಟ್ ಸಂಗಮದಲ್ಲಿ ಅನ್ಸಾರ್ ಬೆಳ್ಳಾರೆಯವರಿಗೆ ಗೋಲ್ಡನ್ ಐಕಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೂನ್ 29ರಂದು ದುಬೈಯ ಪಾರ್ಕ್ ರೇಗಿಸ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಮಾಡಲಾಯಿತು.
ಅನ್ಸಾರ್ ಬೆಳ್ಳಾರೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನಿವಾಸಿಯಾಗಿದ್ದು ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ಸಮಾಜಮುಖಿ ಕಾರ್ಯವನ್ನು ಮನಗಂಡು ಗೋಲ್ಡನ್ ಐಕಾನ್ ಪ್ರಶಸ್ತಿ ನೀಡಲಾಗಿದೆ ಎಂದು ಕಾರ್ಯಕ್ರಮ ರೂವಾರಿ ಕೆ ಪಿ ಮಂಜುನಾಥ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.