ಸುಳ್ಯ:- ಕೊಡಿಯಾಲ ಗ್ರಾಮದ ಮಾಲೆಂಗ್ರಿ ಯುವಕರ ವಾಟ್ಸಪ್ ಗ್ರೂಪ್ ವತಿಯಿಂದ ಸತತ 11ನೇ ವರ್ಷದ ರಮಳಾನ್ ಕಿಟ್ ವಿತರಣೆಯು, 9-3-25 (ಆದಿತ್ಯವಾರ) ಮಾಲೆಂಗ್ರಿ ಮಸೀದಿಯ ಖತೀಬರಾದ ಅಬ್ಬುರ್ರಹಮಾನ್ ಅಹ್ಸನಿ ಉಸ್ತಾದರ ಅದ್ಯಕ್ಷತೆಯಲ್ಲಿ, ಹಸೈನಾರ್ ಮುಸ್ಲಿಯಾರ್ ಉಸ್ತಾದರ ದುವಾದೂಂದಿಗೆ ವಿತರಿಸಲಾಯಿತು.
ಹಲವಾರು ವರ್ಷಗಳಿಂದ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಯುವಕರ ಸಂಘವು, ಈ ವರ್ಷವೂ ಕೂಡ ಬಡತನ ರೇಕೆಗಿಂತ ಕೆಳಗಿನ ಸುಮಾರು 28ರಷ್ಟು ಬಡ ಕುಟುಂಬಗಳಿಗೆ ರಮಳಾನ್ ಕಿಟ್ ನೀಡಿ ಗಮನಸೆಳೆಯಿತು.
ಶಾಫಿ ಬಿ.ಯಂ ರ ಸಾರಥ್ಯದಲ್ಲಿ ರಚನೆಗೂಂಡ ‘ಮಾಲೆಂಗ್ರಿ ಪ್ರೆಂಡ್ಸ್ ವಾಟ್ಸಪ್ ಗ್ರೂಪ್’ ಪ್ರತೀ ವರ್ಷವು ಹಲವಾರು ಜನಸ್ನೇಹಿ ಕಾರ್ಯಕ್ರಮಗಲ್ಲಿ ಮಾಲೆಂಗ್ರಿ ಯುವಕರ ಸಹಾಯದಿಂದ ಭಾಗವಹಿಸುತ್ತಾ ಬಂದಿದೆ.
ವರದಿ:- ಮನ್ಸೂರ್ ಬೆಳ್ಳಾರೆ