ಕಿನ್ಯಾ: ಇಲ್ಲಿನ ನೂರುಲ್ ಉಲಮಾ ಮದ್ರಸಾ ಪ್ರಾರಂಭೋತ್ಸವವು ದಿನಾಂಕ 24-6-2018 ರಂದು ಬೆಳಿಗ್ಗೆ ಕಿನ್ಯ ನೂರುಲ್ ಉಲಮಾ ಮದ್ರಸಾ ಸಭಾಂಗಣದಲ್ಲಿ ಉಲಮಾ ಉಮರಾ ನಾಯಕರ ಸಮ್ಮುಖದಲ್ಲಿ SSF ಕಿನ್ಯ ಸೆಕ್ಟರ್ ಸಮಿತಿಯ ಸಹಯೋಗದೊಂದಿಗೆ ನಡೆಯಿತು.
ಇರ್ಫಾನ್ ನೂರಾನಿ ಉಸ್ತಾದರು ಸ್ವಾಗತ ನಡೆಸಿದ ನಂತರ ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ಉಸ್ತಾದ್ ದುಆ ಹಾಗೂ ವಿಧ್ಯಾರ್ಥಿಗಳಿಗೆ ವಿಧ್ಯೆಯ ಕುರಿತು ಹಿತವಚನ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ಮೆಹಬೂಬ್ ಸಖಾಫಿ ಕಿನ್ಯ, ಶೌಖತ್ ಸಖಾಫಿ, ಮೊಹಮ್ಮದ್ ಮುಸ್ಲಿಯಾರ್ ,ಹೈದರ್ ಮುಸ್ಲಿಯಾರ್, SSF ಕಿನ್ಯ ಸೆಕ್ಟರ್ ಉಸ್ತುವಾರಿ ಜಿ.ಐ ಇಭ್ರಾಹಿಂ ಮುಂತಾದ ನಾಯಕರು ಈ ಕಾರ್ಯಕ್ರಮಕ್ಕೆ ಶುಭ ಸಂದೇಶ ನೀಡಿದರು.ಬುಖಾರಿ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಉಪಾಧ್ಯಕ್ಷ K.H ಮೂಸಕುಂಞ, ಮೊಹಮ್ಮದ್ ಉಳ್ಳಾಲ ಹಾಗೂ ಕಿನ್ಯ ಸೆಕ್ಟರ್ ನಾಯಕರಾದ ಅಯ್ಯೂಬ್, ಆಶಿಕ್, ನೌಫಲ್, ರಿಝ್ವಾನ್, ಸಾಧಿಕ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.
ವರದಿ: ಫಯಾಝ್ ಕಿನ್ಯ
ಇನ್ನಷ್ಟು ಸುದ್ದಿಗಳು
ಮಠ ಬ್ರಾಂಚ್ ಎಸ್ಡಿಪಿಐ: ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ
ಕುಪ್ಪೆಪದವು: ಸ್ವಲಾತ್ ಸಮಿತಿ ಅಸ್ತಿತ್ವಕ್ಕೆ- ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಪದವಿನಂಗಡಿ ಆಯ್ಕೆ
ಅತ್ಯಾಚಾರ: ಉಳ್ಳಾಲ ಎಸ್ಡಿಪಿಐ ಅಧ್ಯಕ್ಷನ ವಿರುದ್ಧ ಪೋಕ್ಸೊ ಕೇಸ್
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಅಲ್ ಅಮೀನ್ ಯೂತ್ ಸೆಂಟರ್: ಯಶಸ್ವಿ ರಕ್ತದಾನ ಶಿಬಿರ
ಪಂಡಿತ್ ಹೌಸ್: ಅಪಾರ್ಟ್ ಮೆಂಟ್ ನಿಂದ ರಸ್ತೆ ಬದಿಗೆ ಕೊಳಚೆ ನೀರು- ಸ್ಥಳೀಯರಿಂದ ಪುರಸಭೆಗೆ ಪತ್ರ
ಸುಳ್ಯ: ಕನಕಮಜಲು, ಪೈಚಾರಿನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ- ಯಶಸ್ವಿಗೆ ಕರೆ