janadhvani

Kannada Online News Paper

ದುಬೈ: ಸುರಿಬೈಲ್ ಕೂಟಾಯಿಮ ವತಿಯಿಂದ ‘ಮೀಟ್ ಆಂಡ್ ಟ್ರೀಟ್’

ದುಬೈ: ಸುರಿಬೈಲ್ ಕೂಟಾಯಿಮ ಎಂಬ ಸಂಘಟನೆಯ ವತಿಯಿಂದ GET TOGETHER MEET &TREAT ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಫೆ.16 ರಂದು ಅಪರಾಹ್ನ 2 ಗಂಟೆಗೆ ದುಬೈ ಮುಶ್ರಿಫ್ ಪಾರ್ಕ್ ನಲ್ಲಿ ಮೀಟ್ & ಟ್ರೀಟ್ ಕಾರ್ಯಕ್ರಮವನ್ನು ನಡೆಸುವುದಾಗಿ ಸಮಿತಿಯ ಅಧ್ಯಕ್ಷರಾದ ಅಬೂಬಕರ್ ಬಾಲಾಜಿಬೈಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಾರ್ಯಕ್ರಮದ ಯಶಸ್ವಿಗಾಗಿ ಹೊಸ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಹಮೀದ್ ಕುಲ್ಯಾರ್, ಕನ್ವೀನರ್ ತೌಸೀಫ್ ಕಯ್ಯೂರ್ , ಕೋಶಾಧಿಕಾರಿಯಾಗಿ ಆಸಿಫ್ ಖಂಡಿಗ ಅವರನ್ನು ಮತ್ತು ಇತರ ಹಲವಾರು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದ ಯಶಸ್ವಿಗಾಗಿ ಸಮಿತಿಯ ಅಧ್ಯಕ್ಷರಾದ ಹಮೀದ್ ಕುಲ್ಯಾರ್ ರವರು ಕರೆ ನೀಡಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.