ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಜಯನಗರ ಡಿವಿಷನ್ ವಾರ್ಷಿಕ ಮಹಾಸಭೆಯು ಮಡಿವಾಳದ ಸೇವರಿ ಬಿಸಿನೆಸ್ ಹೋಟೆಲ್ ನಲ್ಲಿ ಜರಗಿತು. ಕಾರ್ಯಕ್ರಮಕ್ಕೆ ಫಝಲುರ್ರಹ್ಮಾನ್ ಉಸ್ತಾದರು ದುಆ ನೆರವೇರಿಸಿದರು.
ಸಲೀಂ ನಈಮಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು SYS ಜಿಲ್ಲಾ ಕಾರ್ಯದರ್ಶಿಗಳಾದ ಇಬ್ರಾಹೀಂ ಸಖಾಫಿ ಪಯೋಟ ಉದ್ಘಾಟಿಸಿದರು. Ssf ಬೆಂಗಳೂರು ಮಾಜಿ ಜಿಲ್ಲಾ ಅಧ್ಯಕ್ಷರಾದ ಹಬೀಬ್ ನೂರಾನಿ ಉಸ್ತಾದರು ಸಂಘಟನಾ ತರಗತಿ ನಡೆಸಿದರು. ಸಭೆಯ ನಿಯಂತ್ರಕರಾಗಿ ಆಗಮಿಸಿದ್ದ ಹೈದರ್ ಎಲೆಕ್ಟ್ರಾನಿಕ್ ಸಿಟಿ ಮತ್ತು ಅಲ್ತಾಫ್ ಅಲಿ ಜೆಪಿ ನಗರ ಕೌನ್ಸಿಲ್ ಗೆ ನೇತೃತ್ವ ನೀಡಿ ನೂತನ ಸಮಿತಿಯನ್ನು ಆರಿಸಿದರು.
ಜಯನಗರ ಡಿವಿಷನ್ ನೂತನ ಅಧ್ಯಕ್ಷರಾಗಿ ಸಲೀಂ ನಈಮಿ, ಉಪಾಧ್ಯಕ್ಷರಾಗಿ ಫಝಲು ರಹ್ಮಾನ್ ಮುಸ್ಲಿಯಾರ್, ಕಾರ್ಯದರ್ಶಿಯಾಗಿ ಅಜ್ಹರ್ ಹಸನ್, ಕೋಶಾಧಿಕಾರಿಯಾಗಿ ಅನಸ್ ಯಾರಬ್ ನಗರ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಶಿಹಾಬ್ ಮಡಿವಾಳ, ಶಬೀಬ್ ಬೆಂಗಳೂರು, ಸಿದ್ದೀಕ್ ಬೆಂಗಳೂರು, ಜಮಾಲುದ್ದೀನ್ ಸಖಾಫಿ, ಸಹಿತ ಸಂಘ ಕುಟುಂಬದ ಪ್ರಮುಖರು ಭಾಗಹಿಸಿದ್ದು,
,ಕಾರ್ಯಕ್ರಮಕ್ಕೆ ಮುಷ್ತಾಕ್ ಅಹ್ಮದ್ ಸ್ವಾಗತಿಸಿ ಡಿವಿಷನ್ ನೂತನ ಪ್ರಧಾನ ಕಾರ್ಯದರ್ಶಿ ಅಜ್ಹರ್ ಹಸನ್ ಧನ್ಯವಾದವಿತ್ತರು.