ಮಸ್ಕತ್: ಸಂದರ್ಶನ ವೀಸಾದಲ್ಲಿ (Visit Visa) ಒಮಾನ್‌ಗೆ ಬಂದಿರುವ ಪ್ರವಾಸಿಗರು ಉದ್ಯೋಗ ವೀಸಾಗೆ (Work Visa) ಬದಲಾಗುವುದನ್ನು ರಾಯಲ್ ಒಮಾನ್ ಪೊಲೀಸ್ (ROP) ಈಗ ಇನ್ನಷ್ಟು ಸುಲಭಗೊಳಿಸಿದೆ. ಪ್ರಸ್ತುತ ದೇಶವನ್ನು ಬಿಟ್ಟು ಹೊರಹೋಗದೆಯೇ ವೀಸಾ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ರಾಯಲ್ ಒಮಾನ್ ಪೊಲೀಸ್ ನಿಯಮದಲ್ಲಿ ತಾತ್ಕಾಲಿಕ ಸಡಿಲಿಕೆ ಮಾಡಿದೆ.
ಪ್ರಾದೇಶಿಕ ಸಂಘರ್ಷಗಳು ಉಲ್ಬಣಗೊಂಡಿರುವುದು ಮತ್ತು ವಿಮಾನ ಸೇವೆಗಳು ಸೇರಿದಂತೆ ಹಲವು ಸಾರಿಗೆ ಸೌಲಭ್ಯಗಳು ರದ್ದಾಗಿರುವ ಹಿನ್ನೆಲೆಯಲ್ಲಿ ವೀಸಾ ನಿಯಮದಲ್ಲಿ ಈ ತಾತ್ಕಾಲಿಕ ಸಡಿಲಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಆದರೆ, ಈ ಬಗ್ಗೆ ರಾಯಲ್ ಒಮಾನ್ ಪೊಲೀಸ್ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಆದಾಗ್ಯೂ, ಸಂದರ್ಶನ ವೀಸಾದಲ್ಲಿ ಒಮಾನ್‌ಗೆ ಬಂದಿದ್ದ ಅನೇಕರು ಕಳೆದ ಕೆಲವು ದಿನಗಳಲ್ಲಿ ದೇಶ ಬಿಟ್ಟು ಹೋಗದೆಯೇ ಉದ್ಯೋಗ ವೀಸಾಗೆ ಬದಲಾಗಿದ್ದಾರೆ. ಪ್ರಸ್ತುತ ಇವರಿಗೆ ದೇಶ ಬಿಡದೆಯೇ ವೀಸಾ ಬದಲಾವಣೆಗೆ ಅನುಮತಿ ನೀಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ 50 ರಿಯಾಲ್ ವೆಚ್ಚವಾಗುತ್ತದೆ.
ಹಿಂದಿನ ನಿಯಮದಂತೆ, ಸಂದರ್ಶನ ವೀಸಾದಲ್ಲಿರುವ ಪ್ರವಾಸಿಗರು ಉದ್ಯೋಗ ವೀಸಾಗೆ ಬದಲಾಗಲು ಒಮಾನ್‌ನಿಂದ ಹೊರಹೋಗಿ (Exit) ಮತ್ತೆ ಬರಬೇಕಾಗಿತ್ತು. ಈ ಪರಿಷ್ಕೃತ ನಿಯಮವು ಎರಡು ವರ್ಷಗಳ ಹಿಂದೆ ಜಾರಿಗೆ ಬಂದಿತ್ತು. ಈಗ ನೀಡಿರುವ ಸಡಿಲಿಕೆಯು ತಾತ್ಕಾಲಿಕವಾಗಿದ್ದರೂ, ಕನ್ನಡಿಗರು ಸೇರಿದಂತೆ ಎಲ್ಲಾ ಪ್ರವಾಸಿಗರಿಗೆ ಇದು ದೊಡ್ಡ ಸಮಾಧಾನ ತಂದಿದೆ.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ