ರಿಯಾದ್: ಸೌದಿ ಅರೇಬಿಯಾದಲ್ಲಿ ಇಂದು ಶವ್ವಾಲ್ ಮಾಸದ ಚಂದ್ರ ದರ್ಶನವಾಗಿಲ್ಲ. ಈ ಹಿನ್ನೆಲೆಯಲ್ಲಿ 30 ದಿನಗಳ ಉಪವಾಸವನ್ನು ಪೂರ್ಣಗೊಳಿಸಿ, ಶುಕ್ರವಾರ (ಮಾರ್ಚ್ 20) ಗಲ್ಫ್ ವಲಯದಲ್ಲಿ ‘ಸಣ್ಣ ಹಬ್ಬ’ ಅಥವಾ ಈದ್-ಉಲ್-ಫಿತರ್ ಆಚರಿಸಲಾಗುವುದು.
ಸೌದಿ ಅರೇಬಿಯಾದ ತಮೀರ್ ಮತ್ತು ಸುದೈರ್ ಸೇರಿದಂತೆ ವಿವಿಧ ಭಾಗಗಳಲ್ಲಿ ಚಂದ್ರ ವೀಕ್ಷಿಸಲಾಯಿತಾದರೂ, ಚಂದ್ರಕಾಣಿಸಿಕೊಂಡಿಲ್ಲ. ಆದ್ದರಿಂದ ಗುರುವಾರ ರಂಜಾನ್‌ನ 30ನೇ ದಿನವನ್ನು ಪೂರೈಸಿ, ಶುಕ್ರವಾರ ಈದ್ ಆಚರಿಸಲು ನಿರ್ಧರಿಸಲಾಗಿದೆ.
ಯುಎಇ, ಖತಾರ್, ಕುವೈತ್ ಮತ್ತು ಬಹ್ರೇನ್ ದೇಶಗಳಲ್ಲೂ ಶುಕ್ರವಾರವೇ ಈದ್ ಆಚರಿಸಲಾಗುವುದು. ಒಮಾನ್‌ನಲ್ಲಿಯೂ ಕೂಡ ಶುಕ್ರವಾರವೇ ಈದುಲ್ ಫಿತರ್ ಹಬ್ಬ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಈ ಬಾರಿ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಒಂದೇ ದಿನ ಈದ್ ಆಚರಿಸುವ ಸಾಧ್ಯತೆ ಹೆಚ್ಚಿದೆ.
30 ದಿನಗಳ ಕಠಿಣ ಉಪವಾಸದ ನಂತರ ವಿಶ್ವಾಸಿಗಳು ಈದ್ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಚಂದ್ರ ದರ್ಶನವಾಗದ ಕಾರಣ ಗುರುವಾರವೂ ಉಪವಾಸ ಮುಂದುವರಿಯಲಿದೆ. ಶುಕ್ರವಾರ ಮುಂಜಾನೆ ಈದ್ ನಮಾಜ್ ನಡೆಯಲಿದೆ.
ಸೌದಿಯಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಮೈದಾನಗಳ ಬದಲಿಗೆ ಮಸೀದಿಗಳಲ್ಲೇ ನಮಾಜ್ ನಿರ್ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ