janadhvani

Kannada Online News Paper

ಬೆಂಗಳೂರು ಸ‌ಅದಿಯಾ ಎಮಿನೆನ್ಸ್ ಟೀಂ ರಚನೆ

ಬೆಂಗಳೂರು: ಸ‌ಅದಿಯಾ ಎಜ್ಯುಕೇಶನಲ್ ಫೌಂಡೇಶನ್ ಬೆಂಗಳೂರು 20ನೇ ವಾರ್ಷಿಕ ಹಾಗೂ 3ನೇ ದಸ್ತಾರ್ ಬಂದಿ ಸಮ್ಮೇಳನದ ಎಮಿನೆನ್ಸ್ ಟೀಂ ರಚಿಸಲಾಯಿತು.


ಬೆಂಗಳೂರಿನ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ನಲ್ಲಿ ಫೆಬ್ರವರಿ 5 ರಂದು ಸಂಜೆ 5 ಘಂಟೆಗೆ ನಡೆಯುವ ಸಾದಿಯ ಫೌಂಡೇಶನ್ ಬೃಹತ್ ದಸ್ತಾರ್ ಬಂದಿ (ಸನದುದಾನ) ಕಾರ್ಯಕ್ರಮದಲ್ಲಿ 40 ಆಲಿಮ್(ಯುಜಿ)20 ಮುಫ್ತಿ(PG)11 ಫಾಲ್ಹಿಲ(ಇಸ್ಲಾಮಿಕ್ ಡಿಪ್ಲೋಮಾ ಫಾರ್ ಗರ್ಲ್ಸ್) 10 ಕುರ್ಆನ್ ಹಾಫಿಝ್ ಗಳಿಗೆ ಸನದು (ಸರ್ಟ್ಫಿಕಟ್) ನೀಡಲಿದೆ.


ಕಾರ್ಯಕ್ರಮದ ಯಶಸ್ವಿಗಾಗಿ 33 ಮಂದಿಯ ಸಅದಿಯಾ ಎಮಿನೆಂಟ್ಸ್ ತಂಡವನ್ನು ರಚಿಸಲಾಯ್ತು.
ಸಂಸ್ಥೆಯ ಸಾರಥಿ ಮೌಲಾನಾ ಶಾಫಿ ಸಅದಿಯವರ ಘನಾಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಗೌರವ ಅಧ್ಯಕ್ಷರಾಗಿ ಜನಾಬ್ ಜಿ ಎ ಭಾವ ಚೆಯರ್ಮ್ಯಾನ್ ಡಾ ಉಮರ್ ಅಭಿಮಾನ್ ಕನ್ವೀನರ್ ಇಸ್ಮಾಯಿಲ್ ಸ‌ಅದಿ ಕಿನ್ಯ ಕೋಶಾಧಿಕಾರಿಯಾಗಿ ಹಕೀಂ ಆರ್ ಟಿ ನಗರ ಉಪಾಧ್ಯಕ್ಷರುಗಳಾಗಿ ನಾನಾ ಇಸ್ಮಾಯಿಲ್ ಶರೀಫ್, ಸುಹೈಲ್ ಪ್ರೆಸಿಡೆನ್ಸಿ, ಅಬ್ದುಲ್ ಹಮೀದ್ ಹಾಜಿ ಬೈತಡ್ಕ, ಶರೀಫ್ ಅದೋರಾ ಕಡಂಬು,ಮೊಹಮ್ಮದ್ ಮಾಝ್,ಕನ್ವೀರಗುಳಾಗಿ ಕಲಂದರ್ ಮಿತ್ತೂರ್,ಬಶೀರ್ ಸಅದಿ ಪೀಣ್ಯ,ಕರಾಯ ಸಅದಿ, ಪಯೋಟ ಇಬ್ರಾಹಿಂ ಸಖಾಫಿ.ಸ್ವಾಲಿಹ್ ಶಿವಾಜಿನಗರ ಸುಲೈಮಾನ್ ಸಿಎಂ ಮೆಜೆಸ್ಟಿಕ್ ಶಾಫಿ ಸಅದಿ ಮೆಜೆಸ್ಟಿಕ್, ಅಲ್ತಾಫ್ ಯಾರಬ್ ನಗರ, ಸದಸ್ಯರುಗಳಾಗಿ

ಇವರನ್ನು ಆಯ್ಕೆ ಮಾಡಲಾಯಿತು.

ಬಶೀರ್ ಸ‌ಅದಿ ಪೀಣ್ಯ ರನ್ನು ಕೋ ಆರ್ಡಿನೇಟರ್ ಆಗಿ ಆಯ್ಕೆ ಮಾಡಿದ ಸಭೆಯಲ್ಲಿ ನಾನಾ ಇಸ್ಮಾಯಿಲ್ ಸಾಹೆಬ್, ಹಮೀದ್ ಹಾಜಿ, ಸಂಶು , ಆಸಿಫ್ ಅಮೀರ್ ಜಾನ್, ಶರೀಫ್ ಅಡೋರ, ನೌಫಲ್ ಇವರನ್ನು ಉಪಾಧ್ಯಕ್ಷರಾಗಿ ಮತ್ತು ಸುಹೈಲ್ ಪ್ರೆಸಿಡೆನ್ಸಿ ಖಲಂದರ್ ಮಿತ್ತೂರು ನಿಜಾಝ್ ಸುಲೈಮಾನ್ ಸಿ ಎಂ ಸತ್ತಾರ್ ಮೌಲವಿ ಅಯಾಝ್ ಬೈತುಲ್ ಮುಹಮ್ಮದ್ ಮಾಝ್ ಉಪ ಕನ್ವೀನರ್ ಆಗಿ ಆಯ್ದುಕೊಳ್ಳಲಾಯಿತು.