ಉಳ್ಳಾಲ: ಕಿನ್ಯ ಬದ್ರಿಯಾ ನಗರ ಬುಖಾರಿ ಜುಮುಅ ಮಸ್ಜಿದ್ ಆಡಳಿತ ಸಮಿತಿಯ ಮಹಾಸಭೆಯು ನಿರ್ದೇಶಕ ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ತಂಙಳ್ ಪೊಸೋಟ್ ರವರ ಅಧ್ಯಕ್ಷತೆಯಲ್ಲಿ ನಡೆದು ಸಮಿತಿಯ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಕಾರ್ಯಾಧ್ಯಕ್ಷ ಹುದ್ದೆಗೆ ನಾಟೆಕಲ್ ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಮಹ್ಬೂಬ್ ಸಖಾಫಿ ಕಿನ್ಯ ಕೋಶಾಧಿಕಾರಿ ಹುದ್ದೆಗೆ ಕೆ.ಎಚ್ ಮೂಸಕುಂಞಿ ರವರನ್ನು ಆರಿಸಲಾಯಿತು.
ಜಮಾಅತ್ ಸಮಿತಿ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಸ್ವಾಗತಿಸಿದ ಸಭೆಯನ್ನು ಸ್ಥಳೀಯ ಖತೀಬ್ ಅಬ್ದುಸ್ಸಲಾಂ ಸಅದಿ ಉದ್ಘಾಟಿಸಿದರು.
ಕಳೆದ ಸಾಲಿನ ಕಾರ್ಯವೈಖರಿಯ ವರದಿಯನ್ನು ಕಾರ್ಯದರ್ಶಿ ಅಬ್ದುಸ್ಸತ್ತಾರ್ ವಾಚಿಸಿದರು, ಲೆಕ್ಕ ಪತ್ರ ವನ್ನು ಕೋಶಾಧಿಕಾರಿ ಮಹ್ಬೂಬ್ ಸಖಾಫಿ ಕಿನ್ಯ ಮಂಡಿಸಿದರು.
ಉಳಿದಂತೆ ಅಬ್ಬಾಸ್ ಹಾಜಿ ಎಲಿಮಲೆ,ಅಬ್ದುಲ್ ಹಮೀದ್ ಟಿಂಬರ್,ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ (ಉಪಾಧ್ಯಕ್ಷರುಗಳು) ಇಕ್ಬಾಲ್ ಸಂಕೇಶ,ಅಬ್ದುಸ್ಸತ್ತಾರ್,ಕತ್ತರ್ ಮೂಸ ಹಾಜಿ (ಕಾರ್ಯದರ್ಶಿಗಳು)
ಕೆ.ಎಚ್ ಇಸ್ಮಾಈಲ್ ಸಅದಿ, ಇಝ್ಝುದ್ದೀನ್ ಅಹ್ಸನಿ,ಕೆ.ಎಂ ಅಬೂಬಕರ್ ಸಿದ್ದೀಕ್,ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ,ಅಶ್ರಫ್ ಸಖಾಫಿ,ಎಂಕೆಎಂ ಇಸ್ಮಾಈಲ್ ಮೀಂಪ್ರಿ,ಇಸ್ಮಾಈಲ್ ಫಯಾಝ್ ಎಂಎಂಪಿ, ಬಷೀರ್ ಹಾಜಿ ಪನೀರ್,ಯೂಸುಫ್ KSRTC,ಬಷೀರ್ ಬದ್ರಿಯಾ ನಗರ,ಅಶ್ರಫ್ ಎಂಎಂಪಿ, ಹುಸೈನಾರ್,ಎ.ಪಿ ಹಸನ್ ಉಕ್ಕುಡ,ಸನಾವು ಕೂಡಾರ,ಆಲಿ ಕುಂಞಿ ಮೀಂಪ್ರಿ ರವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.