janadhvani

Kannada Online News Paper

ಕಾಜೂರು ಮಖಾಂ ಉರೂಸ್ ; ದ.ಕ ಜಿಲ್ಲಾ ಎಸ್‌.ಪಿ ಯನ್ನು ಭೇಟಿಯಾದ ನಾಯಕರು

ಐತಿಹಾಸಿಕ ಧಾರ್ಮಿಕ ಝಿಯಾರತ್ ಕೇಂದ್ರವಾದ ಕಾಜೂರು ದರ್ಗಾ ಶರೀಫ್ ಉರೂಸ್ ಸಮಾರಂಭವು 2025 ಜನವರಿ 24 ರಿಂದ ಫೆಬ್ರವರಿ 02 ವರೆಗೆ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಈ ಸಂಬಂಧವಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ ಯತೀಶ್ ಎನ್ ಅವರನ್ನು ಭೇಟಿಯಾಗಿ ಉರೂಸ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.


ಈ ಸಂದರ್ಭದಲ್ಲಿ ಕಾಜೂರು ಉರೂಸ್ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಕೆ.ಯು, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಎಚ್, ಜೊತೆ ಕಾರ್ಯದರ್ಶಿ ಶಾಹುಲ್ ಕಿಲ್ಲೂರು, ಹಿರಿಯರಾದ ಬದ್ರುದ್ದೀನ್ ಕಾಜೂರು, ಅಬೂಬಕ್ಕರ್ ಮಲ್ಲಿಗೆಮನೆ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com