ಬೆಂಗಳೂರು:- ದೇಶದ ವಿವಿಧ ಭಾಗಗಳಲ್ಲಿ ಎಸ್ಸೆಸ್ಸೆಫ್ ಕಾರ್ಯಕರ್ತರು ಅವರ ಮೂರನೇ ಹಬ್ಬವಾದ ಸಾಹಿತ್ಯೋತ್ಸವದ ಸಡಗರ ಸಂಭ್ರಮದಲ್ಲಿದ್ದಾರೆ. ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆಯ ಶಿವಾಜಿ ನಗರ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಡಿಕೆನ್ಸನ್ ರೋಡ್ನಲ್ಲಿರುವ ಹಸನಾತ್ ಕಾಲೇಜಿನಲ್ಲಿ 27/10/2024 ಭಾನುವಾರ ಬಹಳ ಅದ್ದೂರಿಯಾಗಿ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಆರು ಯೂನಿಟ್ ಗಳಿಂದ ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು, ಐದು ವೇದಿಕೆಗಳಲ್ಲಿ ನೂರರಷ್ಟು ಸ್ಪರ್ಧೆಗಳು ನಡೆಯಿತು.


ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಸ್ವಾಗತ ಸಮಿತಿ ಚಯರ್ಮನ್ ಬಾಸಿತ್ ಮುಈನಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ಜರಗಿತು, ಪ್ರಸ್ತುತ ಕಾರ್ಯಕ್ರಮವನ್ನು ಜಿಲ್ಲಾ ಫೈನಾನ್ಸ್ ಸೆಕ್ರೆಟರಿ ಅಕ್ತರ್ ಹುಸೈನ್ ಉದ್ಘಾಟಿಸಿದರು, ಜಿಲ್ಲಾ ಚೆಯರ್ಮಾನ್ ಫಾರೂಕ್ ಅಮಾನಿ ಮುಖ್ಯ ಭಾಷಣ ಮಾಡಿದರು, ಡಿವಿಷನ್ ಪ್ರೆಸಿಡೆಂಟ್ ಹಬೀಬ್ ಸಖಾಫಿ, ಜನರಲ್ ಸೆಕ್ರೆಟರಿ ರಸೂಲ್ ಅಲ್ಸೂರ್ ವಿಜೇತರನ್ನು ಹಾರೈಸಿದರು.
ಡಿವಿಷನ್ ಮಟ್ಟದಲ್ಲಿ ಚಾಂಪಿಯನ್ ಶಿಪ್ ಪಡೆದ ಅಲ್ಸೂರ್ ಯೂನಿಟ್ ಗೆ ಸಯ್ಯಿದ್ ಮಿಸ್ಅಬ್ ಮುಈನಿ ಲಕ್ಷದ್ವೀಪ್ , ಜಿಲ್ಲಾ ನೇತಾರರಾದ ಫಾರೂಖ್ ಅಮಾನಿ, ಅಖ್ತರ್ ಹುಸೈನ್, ಖಲೀಲ್, ಹಾಗೂ ಇನ್ನಿತರ ನಾಯಕರು ಸೇರಿ ಚಾಂಪಿಯನ್ ಟ್ರೋಫಿ ನೀಡಿದರು, ಬಾಸಿತ್ ಮುಈನಿ ಸ್ವಾಗತಿಸಿ, ಫತ್ತಾಹ್ ಜೆ.ಸಿ ನಗರ ಧನ್ಯವಾದ ಸಲ್ಲಿಸಿದರು ಎಂದು ಡಿವಿಷನ್ ಪ್ರದಾನ ಕಾರ್ಯದರ್ಶಿ ರಸೂಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ